ಮೈಸೂರಿನ ಹಿರಿಯ ಸಾಹಿತಿ , ಪತ್ರಕರ್ತ, ಕನ್ನಡಪರ ಚಿಂತಕ ಹಾಗೂ ಪರಿಸರ ಪ್ರೇಮಿ ಡಾ.ಭೇರ್ಯ ರಾಮಕುಮಾರ್ ಅವರದ್ದು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಜನಪ್ರಿಯ ಹೆಸರು. 1985 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗಲೇ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಎಂಬ ಸಂಸ್ಥೆ ಆರಂಭಿಸಿದರು.ಹಿರಿಯ ಪತ್ರಕರ್ತರಾದ ಪಿ.ಲಂಕೇಶ್ ಅವರು ನೂರು ಗ್ರಾಮೀಣ ರೈತರಿಗೆ 100 ಸಸಿಗಳನ್ನು ವಿತರಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು.
ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ಅಧ್ಯಕ್ಷರಾಗಿ 354 ಸಾಹಿತ್ಯ ಕಾರ್ಯಕ್ರಮಗಳ ಸಂಘಟನೆ ಮಾಡಿ ಕಳೆದ 39 ವರ್ಷಗಳಲ್ಲಿ 10000 ಕ್ಕೂ ಹೆಚ್ಚಿನ ಬರಹಗಾರರು ಹಾಗೂ ಕಲಾವಿದರಿಗೆ ವೇದಿಕೆ ಕಲ್ಪಿಸಿದ್ದಾರೆ. ಉದಯೋನ್ಮುಖ ಬರಹಗಾರರ 303 ಸಾಹಿತ್ಯ ಕೃತಿಗಳ ಪ್ರಕಟಣೆ ಮಾಡಿದ್ದಾರೆ. ಸಾಮೂಹಿಕ ನೇತ್ರದಾನ ಕಾರ್ಯಕ್ರಮದ ಮೂಲಕ ನೇತ್ರದಾನ ಮಾಡಲು ಎಂಟು ಸಾವಿರಕ್ಕೂ ಹೆಚ್ಚು ಜನರ ಮನ ಒಲಿಸಿದ್ದಾರೆ., ಐದು ನೂರಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ಹಾಗೂ ಹತ್ತು ಸಾವಿರಕ್ಕೂ ಹೆಚ್ಚು ಸಸಿಗಳ ಉಚಿತ ವಿತರಣೆ ಮಾಡಿದ್ದಾರೆ.ಪ್ರತಿಯೊಬ್ಬರೂ ತಮ್ಮ ಜನ್ಮ ದಿನದಂದು, ತಮ್ಮ ತಂದೆ ತಾಯಿಯ ಜನ್ಮ ದಿನದಂದು, ತಮ್ಮ ಮಕ್ಕಳ ಜನ್ಮ ದಿನದಂದು, ತಮ್ಮ ವಿವಾಹ ವಾರ್ಷಿಕೋತ್ಸವ ದಿನದಂದು ಹಾಗೂ ತಮ್ಮ ಹಿರಿಯರ ನೆನಪಿನಲ್ಲಿ ಸಸಿಗಳನ್ನು ನೆಟ್ಟು ಪೋಷಿಸಬೇಕೆಂದು ಕಳೆದ 30 ವರ್ಷಗಳಿಂದ ಜನ ಜಾಗೃತಿ ಮೂಡಿಸುತ್ತಿದ್ದಾರೆ.
ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ಕನ್ನಡ ಭಾಷೆ ಬಳಸದ ಐದು ನೂರಕ್ಕೂ ಹೆಚ್ಚು ಅನ್ಯ ಭಾಷಾ ಫಲಕಗಳ ಬಗ್ಗೆ ದೂರು ಸಲ್ಲಿಕೆ, ಕನ್ನಡ ಭಾಷೆ ಬಳಸದ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ದೂರು , ಐದು ನೂರಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಕನ್ನಡ ನಾಡು – ನುಡಿಯ ಮಹತ್ವ ಕುರಿತು ಉಪನ್ಯಾಸ ,ಆಯ್ದ ಶಾಲಾ ಕಾಲೇಜುಗಳಿಗೆ ಜ್ಞಾನ ಪೀಠ ಪ್ರಶಸ್ತಿ ವಿಜೇತ ಕನ್ನಡ ಭಾವ ಚಿತ್ರಗಳ ನೀಡಿಕೆ ಮಾಡುವ ಮೂಲಕ ಸಾಹಿತಿ ಭೇರ್ಯ ರಾಮಕುಮಾರ್ ಸುವರ್ಣ ಕರ್ನಾಟಕಕ್ಕೆ ತಮ್ಮದೇ ಅದ ಮಹತ್ವದ ಕೊಡುಗೆ ನೀಡಿದ್ದಾರೆ.ಈ ಕೊಡುಗೆಗಳನ್ನು ಪರಿಗಣಿಸಿ ಭೇರ್ಯ ರಾಮಕುಮಾರ್ ಅವರನ್ನು ಸುವರ್ಣ ಮಹೋತ್ಸವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ
ಎಂ. ಎ., ಬಿ. ಎಡ್ ಪದವೇದಾರರಾಗಿರುವ ಇವರು ಪತ್ರಕರ್ತರಾಗಿ ಯೂ ಸೇವೆ ಸಲ್ಲಿಸುತ್ತಿದ್ದು ಹಾಲಿ ಕನ್ನಡ ಸಾಹಿತ್ಯ ಲೋಕ ಮಾಸ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಗ್ರಾಮೀಣ ಸಾಧಕರನ್ನು ಕುರಿತು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನೂ ಸಹ ಬರೆದಿದ್ದಾರೆ.
ಇವರ ಕನ್ನಡ ನಾಡು ನುಡಿ ಸೇವೆಯನ್ನು ಗೌರವಿಸಿ2018 ರಲ್ಲಿ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸೇವಾ ಪ್ರಶಸ್ತಿ, ಕಾಸರಗೋಡಿನಲ್ಲಿ ಕಾಯಕರತ್ನ ಪ್ರಶಸ್ತಿ, ದಾವಣಗೆರೆಯ ವಿಶ್ವವೀರ ಶೈವ ವೇದಿಕೆಯಿಂದ ಶ್ರೀಬಸವೇಶ್ವರ ಕಾಯಕಯೋಗಿ ಪ್ರಶಸ್ತಿ, 2022 ರಲ್ಲಿ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , 2023 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯ ಮಟ್ಟದ ದತ್ತಿ ಪ್ರಶಸ್ತಿ ದೊರೆತಿದೆ.ಜೊತೆಗೆ ರಾಜ್ಯದ ವಿವಿದ ಸಂಸ್ಥೆಗಳಿಂದ ಐದು ನೂರಕ್ಕೂ ಹೆಚ್ಚು ಪ್ರಶಸ್ತಿಗಳು ದೊರೆತಿವೆ.