ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠ ಹಾಗೂ ಶ್ರೀನಿವಾಸ ಉತ್ಸವ ಬಳಗ, (ರಿ) ಬೆಂಗಳೂರು, ಮತ್ತು ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ (ರಿ) ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ *ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದಂಗಳವರ* ಮತ್ತು ಕಿರಿಯ ಪಟ್ಟದ ಪರಮಪೂಜ್ಯ *ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದಂಗಳವರ* ಆದೇಶ ಹಾಗೂ ಪರಮಾನುಗ್ರಹದಲ್ಲಿ ಅಪರೋಕ್ಷ ಜ್ಞಾನಿಗಳಾದ ಶ್ರೀವಿಜಯದಾಸರ ಆರಾಧನಾಂಗವಾಗಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ದಿನಾಂಕ 9.11.2024 ರಿಂದ 11.11.2024 ರ ವರೆಗೆ ಮೂರು ದಿನಗಳ ಅಂತಾರಾಷ್ಟ್ರೀಯ ದಾಸಸಾಹಿತ್ಯ ಸಮ್ಮೇಳನ ವನ್ನು ಆಯೋಜಿಸಲಾಗಿದೆ.
ಸಾಧಕರಿಗೆ ಮುಕ್ತಿದಾಯಕ ಪರಮಪಾವನ ಕ್ಷೇತ್ರವಾದ, ಕಲಿಯುಗದಲ್ಲಿ ಸಜ್ಜನರಿಗೆ ಬರುವ ವಿಘ್ನಗಳ ನಿವಾರಣೆಗಾಗಿ ವಿಶ್ವಗುರುಗಳಾದ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಪೊಡವಿಗೊಡೆಯ ಶ್ರೀಕೃಷ್ಣನ ದಿವ್ಯ ಸನ್ನಿಧಿಯ ಮಹತ್ವವನ್ನು ಶ್ರೀವಿಜಯದಾಸರು ತಮ್ಮ ಸಾಹಿತ್ಯದಲ್ಲಿ ವರ್ಣಿಸಿದ್ದಾರೆ.
ಪರಮಪೂಜ್ಯ ಪರ್ಯಾಯ ಶ್ರೀಪಾದಂಗಳವರ ವಿಶೇಷ ಸಂಕಲ್ಪದಂತೆ ಶ್ರೀವಿಜಯದಾಸರ ಸಾಹಿತ್ಯದಲ್ಲಿ ದಾಖಲೆಗೊಂಡ ಉಡುಪಿಯ ಸಮಗ್ರ ಇತಿಹಾಸವನ್ನು ಸಂಶೋಧನಾತ್ಮಕವಾಗಿ ಸಂಗ್ರಹಿಸುವಂಥ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ದಾಸ ಶ್ರೇಷ್ಠರಾದ ಶ್ರೀವಿಜಯದಾಸರ ಆರಾಧನಾ ಮಹೋತ್ಸವವನ್ನು ದಿನಾಂಕ 09.11.2024 ರಿಂದ 11.11.2024 ರ ವರೆಗೆ ಮೂರು ದಿನಗಳ ಕಾಲ
ಅತ್ಯಂತ ವೈಭವದಿಂದ ಆಚರಿಸಲು ಸಂಕಲ್ಪಿಸಲಾಗಿದೆ . ಈ ಸಂದರ್ಭದಲ್ಲಿ *ಅಂತಾರಾಷ್ಟ್ರೀಯ ದಾಸಸಾಹಿತ್ಯ ಸಮ್ಮೇಳನ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಗೋಷ್ಠಿ ಗಾಯನ* ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂತಾರಾಷ್ಟ್ರೀಯ ಹರಿದಾಸ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲು ಪ್ರಬಂಧಗಳನ್ನು ಆಹ್ವಾನಿಸಲಾಗಿದೆ
ನೊಂದಣಿ ಶುಲ್ಕ 500. (ಕೇವಲ ಪ್ರಬಂಧ ಮಂಡನೆಗೆ)
ಸಮ್ಮೇಳನದಲ್ಲಿ ಪ್ರಬಂಧ ಮಂಡನೆಗೆ ಇರುವ ವಿಷಯಗಳು ಹೀಗಿವೆ –
1. ದಾಸಸಾಹಿತ್ಯಕ್ಕೆ ಶ್ರೀವಿಜಯದಾಸರ ಕೊಡುಗೆ.
2. ಶ್ರೀವಿಜಯದಾಸರ ಉಡುಪಿ ಪ್ರವಾಸ
3. ಶ್ರೀವಿಜಯದಾಸರು ವರ್ಣಿಸಿದ ಉಡುಪಿ
4. ಶ್ರೀ ವಿಜಯದಾಸರು ವರ್ಣಿಸಿದ ಶ್ರೀಕೃಷ್ಣ
5. ಶ್ರೀವಿಜಯದಾಸರು ವರ್ಣಿಸಿದ ಮಧ್ವಸರೋವರ
6. ಶ್ರೀ ವಿಜಯದಾಸರು ವರ್ಣಿಸಿದ ಶ್ರೀಕೃಷ್ಣ ಪ್ರಸಾದ್
7. ಶ್ರೀ ವಿಜಯದಾಸರು ವರ್ಣಿಸಿದ ಪಾಜಕಕ್ಷೇತ್ರ.
8. ಶ್ರೀ ವಿಜಯದಾಸರು ರಚಿಸಿದ ಸುಳಾದಿ ಗಳು.
9. ಶ್ರೀವಿಜಯದಾಸರ ಕೃತಿಗಳಲ್ಲಿ ನೀತಿ
10. ಶ್ರೀ ವಿಜಯದಾಸರು ವರ್ಣಿಸಿದ ತೀರ್ಥ-ಕ್ಷೇತ್ರ ಯಾತ್ರೆ .
ಈ ಮೇಲ್ಕಂಡ ವಿಷಯಗಳಲ್ಲಿ ಯಾವುದಾದರು ಒಂದು ವಿಷಯದಲ್ಲಿ ವಿದ್ವತ್ಪೂರ್ಣವಾದ ಪ್ರಬಂಧವನ್ನು ಸಮರ್ಪಿಸಬಹುದು.
ಪ್ರಬಂಧಗಳನ್ನು ಮಂಡಿಸುವವರು ಸೂಕ್ತ ಆಕರ ಗ್ರಂಥಗಳ(research methodology )ಆಧಾರದೊಡನೆ ಬರೆದು ಕಳುಹಿಸುವುದು.
ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನಾ ವತಿಯಿಂದ ಐಎಸ್ಎಸ್ಎನ್ ಸಂಖ್ಯೆಯೊಂದಿಗೆ ಪ್ರಬಂಧ ಸಂಕಲನವನ್ನು ಹೊರತರಲಾಗುವುದು.
ಪ್ರಬಂಧಗಳನ್ನು srisrinivasauthsavabalaga2012@ gmail com ಗೆ ಗರಿಷ್ಠ ಮಿತಿ 1000 ಪದಗಳು ಅಂದಾಜು ನಾಲ್ಕು ಪುಟಗಳು ಒಳಗೆ ಅಕ್ಟೋಬರ್ 15ರೊಳಗೆ ಪ್ರಬಂಧಗಳನ್ನು ಸಲ್ಲಿಸಬೇಕು
ವಿವರಗಳಿಗೆ 7892991690/9739369621/ 9886108550 ಸಂಪರ್ಕಿಸಿ