ಸವದತ್ತಿ: ಒಬ್ಬರು ಎಲ್ಲರಿಗಾಗಿ ಎಲ್ಲರೂ ಒಬ್ಬರಿಗಾಗಿ ಎಂಬ ಸದುದ್ದೇಶದಿಂದ ಸಹಕಾರ ಸಂಘಗಳು ಎಲ್ಲ ಸದಸ್ಯರಿಗೆ ಆರ್ಥಿಕ ಆಶ್ರಯ ಹಾಗೂ ನೆಮ್ಮದಿ ಕೊಡುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ ತಿಳಿಸಿದರು
ಸದಸ್ಯರೆಲ್ಲರೂ ಸರಿಯಾಗಿ ಮಾಸಿಕ ಕಂತುಗಳನ್ನು ತುಂಬಲು ತಿಳಿಸಿದರು. ಸರಿಯಾದ ಸಮಯಕ್ಕೆ ತುಂಬದೇ ಇದ್ದರೆ ಸಂಘಗಳು ಆರ್ಥಿಕವಾಗಿ ನಾಶಗೊಳ್ಳುತ್ತವೆ. ಎಂದು ಪಟ್ಟಣದ ಗುರು ಭವನದಲ್ಲಿ ಜರುಗಿದ ಪ್ರೌಢಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ 30ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಇಲಾಖೆ ಸಮಸ್ಯೆಗಳೇ ಏನಿದ್ದರೂ ತಿಳಿಸಿ ಅವುಗಳಿಗೆ ಪರಿಹಾರ ಒದಗಿಸುತ್ತೇವೆಂದು ಶಿಕ್ಷಕರಿಗೆ ಭರವಸೆ ಕೊಟ್ಟರು.
ಕ್ಷೇತ್ರಸಮನ್ವಯ ಅಧಿಕಾರಿಗಳಾದ
ಬಿ ಎನ್ ಬ್ಯಾಳಿ, ಬಿಆರ್ ಪಿ ವ್ಹಿ ಸಿ ಹಿರೇಮಠ, ರಾಜು ಭಜಂತ್ರಿ, ರತ್ನಾ ಸೇತಸನದಿ, ಮಾರುತಿ ಕರಡಿಗುಡ್ಡ, ಶಿಕ್ಷಣ ಸಂಯೋಜಕ, ಕಾಮನ್ನವರ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ ಬಿ ಕಡಕೋಳ, ದುರಗಪ್ಪ ಭಜಂತ್ರಿ ಉಪಸ್ಥಿತರಿದ್ದರು.
ಸದರಿ ಸರ್ವಸಾಧಾರಣ ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ವಿಶ್ರಾಂತ ಮುಖ್ಯೋಪಾಧ್ಯಾಯರಾದ ಬಿ,ಬಿ.
ನಾವಲಗಟ್ಟಿ ಮತ್ತು ವಿಶ್ರಾಂತ ಗೊಂಡ ಸದಸ್ಯರನ್ನು ಸನ್ಮಾನಿಸಲಾಯಿತು ಸಂಘದ ಎಲ್ಲಾ ಆಡಳಿತ ಮಂಡಳಿ ಹಾಗೂ ಎಲ್ಲ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಮ್, ಎಸ್, ಮಕರವಳ್ಳಿ ಸ್ವಾಗತಿಸಿದರು ಎ. ಎಂ. ಬಾನಿ ಕಾರ್ಯಕ್ರಮವನ್ನು ನಿರೂಪಿಸಿ ಮತ್ತು ವಂದಿಸಿದರು