spot_img
spot_img

ಕವನ: ಗೆಳತಿ

Must Read

- Advertisement -

ಸಾವಿರ ಕಣ್ಣುಗಳಿದ್ದರೂ ನಾನು ನೋಡಿದ

ಕಣ್ಣುಗಳು ನಿನ್ನವು ಗೆಳತಿ ಏಕೆ ಮರೆಯಾದೆ
ಹೃದಯ ಸಮುದ್ರದ ಅಲೆಯಲಿ ತೇಲಿಬಂದ
ಪ್ರೀತಿಯ ಪಲ್ಲಕ್ಕಿಯಲಿ ನಿನ್ನ ಕಂಡೆ ಗೆಳತಿ

ಹೃದಯ ತೋಟದಲ್ಲೊಂದು ಪ್ರೀತಿಯ ಬಳ್ಳಿ
ನೆಟ್ಟು ಪ್ರೇಮದ ಹೂ ಬೆಳೆಯಬೇಕೆಂದಿರುವೆ
ಕಾವ್ಯಲೋಕದ ಕಾವ್ಯ ಕನ್ನಿಕೆ ನೀನೆಂದಿರುವೆ
ಮನಸಿನ ಪುಟದಿ ಪ್ರೇಮ ಕಾವ್ಯ ಬರೆದೆ ನೀನು

- Advertisement -

ನನ್ನ ಬರಹ ಲೋಕದ ಲೇಖನಿ ಎಂದಿದ್ದೆ
ಬಾಳ ಪುಟದ ಮೊದಲ ಚರಣ ಎಂದಿದ್ದೆ
ಅತಿ ಲೋಕದ ಅಪ್ರತಿಮ ಪ್ರಿಯತಮೆ
ಎಂದು ಭಾವಲೋಕದಿ ನಾನು ವಿಹರಿಸಿದ್ದೆ

ಮನಸು ಕೊಟ್ಟು ಕನಸು ಕಂಡೆ ನಾನವಳ
ಒಡೆದು ಹೋಗುವ ನನ್ನವರ ಸೇತುವೆ
ಆದವಳೆಂದು ಕಂಡ ಕನಸು ಕನಸಾಯಿತು
ನನ್ನವಳು ಬರುವಳೆಂದು ಕೂತು ಕಾದೆ

ದಾರಿ ಸವೆಯಿತು ಸರಿಯಿತು ಕಲ್ಲು
ಕನವರಿಸಿತು ಮನ ನಡುಗಿತು ಹೃದಯ
ಮತ್ತೆ ಅನಾಥವಾಯಿತು ನನಸು
ಕನಸು ಕನಸಾಗುತ್ತದೆಯೇ ಇಲ್ಲವೇ…..


- Advertisement -

ಶ್ರೀ ಇಂಗಳಗಿ ದಾವಲಮಲೀಕ

- Advertisement -
- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group