ಕವನ: ನಮ್ಮ ಕರುನಾಡು

Must Read

ನಮ್ಮ ಕರುನಾಡು

ರಸ ಋಷಿಗಳಿರುವ ಬೀಡು

ಕವಿ ಪುಂಗವರ ಈ ನಾಡು

ದೈವ ಲೀಲೆಗಳ  ನೆಲೆಬೀಡು

ನಮ್ಮ ಹೆಮ್ಮೆಯ ಕರುನಾಡು

ಜಗದಲಿ ಭಾರತ ದೇಶ ಚಂದ

ಭಾರತದಲಿ ಕರುನಾಡು ಅಂದ

ಕರುನಾಡಲಿ ಕರಿಮಣ್ಣು ಚಂದ

ಕರಿಮಣ್ಣಲಿ ಶ್ರೀಗಂಧ ಅಂದ

ಸಹನಾ ಮೂರ್ತಿಗಳ ತವರೂರು

ಶೌರ್ಯ ಪರಾಕ್ರಮದಿ  ನಿಸ್ಸೀಮರು

ಶಾಂತಿ ತಾಳ್ಮೆಯಲಿ ಪ್ರಖ್ಯಾತರು 

ಎದುರಾಳಿಗಳ ಸದೆ ಬಡೆಯುವರು

ಜಾತಿ ಭೇದವ ಮರೆತು ಹಾಡುವರು

ಮತ ಪಂಥ ತೊರೆದು ನರ್ತಿಸುವರು

ಕಣ್ ಕಣ್ ಬಿಟ್ಟು ನೋಡುವರಣ್ಣ

ರಾಜ್ಯೋತ್ಸವದ ಸವಿ ಸೊಬಗಣ್ಣ

ತಂಟೆ ತಕರಾರು ತಗೆದಿರಾದರೆ

ಕನ್ನಡ ಕಲಿಗಳು ಸುಮ್ಮನಿರುವರೆ

ಬೆನ್ನಟ್ಟಿ ಬೆಂಡಾಗಿಸದೇ  ಬಿಡರು

ಕರಿಮಣ್ಣಿನ ವೀರ ಸುಪುತ್ರರು

೬೭ ರ ರಾಜ್ಯೋತ್ಸವ ಸಂಭ್ರಮವು

ಇಲ್ಲಿ ಜನಿಸಿ ಧನ್ಯರಾದೆವು ನಾವು

ಭುವನೇಶ್ವರಿಗೊಂದು ನಮನವು

ಆಶೀರ್ವದಿಸು ನೀ  ಸದಾಕಾಲವು


ರಚನೆ ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ

Latest News

ಎಕ್ಸ್ ಪ್ರೆಸ್ ರೈಲುಗಳನ್ನು ಘಟಪ್ರಭಾ ಸ್ಟೇಶನ್ ನಿಲುಗಡೆಗೆ ಮನವಿ

ಮೂಡಲಗಿ: ಗೋಕಾಕ, ಮೂಡಲಗಿ, ಯರಗಟ್ಟಿ, ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕುಗಳ ಅನೇಕ ಸೈನಿಕರು ಭಾರತದ ವಿವಿಧ ರಾಜ್ಯಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕರು ರಜೆಯ ಸಮಯದಲ್ಲಿ...

More Articles Like This

error: Content is protected !!
Join WhatsApp Group