spot_img
spot_img

ಲೊಯೋಲ ಶಾಲೆಯಲ್ಲಿ ಗಾಳಿಪಟ ಉತ್ಸವ

Must Read

spot_img

ಸಿಂದಗಿ: ಆಗಸದಲ್ಲಿ ಹಾರಾಡುತ್ತಾ ಬಾನಂಗಳದಲ್ಲಿ ಕಿಲಾಡಿಗಳು  ತೇಲಾಡಿದ ಬಣ್ಣ ಬಣ್ಣದ ಪಟಗಳು ಪಟಗಳೊಂದಿಗೆ ತಾವೇ ಹಾರಾಡಿದಷ್ಟು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂಭ್ರಮಿಸಿದ ಸಾಕ್ಷಿಯಾಗಿದ್ದು ಸಿಂದಗಿಯ ಲೊಯೋಲ ಶಾಲೆ.

ಪ್ರತಿ ವರ್ಷದಂತೆ ಈ ವರ್ಷವೂ ಸಿಂದಗಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಲೊಯೋಲ ಶಾಲೆಯಲ್ಲಿ ಗಾಳಿಪಟ ಹಬ್ಬವನ್ನು ಆಚರಿಸಲಾಯಿತು.

ಸಮಾರಂಭವನ್ನು ಉದ್ಘಾಟಿಸಿದ ಡಾ. ವಿನಯಾ ಅರವಿಂದ್ ಹೂಗಾರ ಮಾತನಾಡಿ,  ಗಾಳಿಪಟದಂತೆ ಮಕ್ಕಳ ಬೌದ್ದಿಕ ಮಟ್ಟ ಹಾಗೂ ಅಭಿವೃದ್ಧಿ  ವರ್ಷದಿಂದ ವರ್ಷಕ್ಕೆ ಎತ್ತರಕ್ಕೇರಿ ಸಾಧಿಸುವ ಹಂಬಲ ಹೆಚ್ಚಾಗಲಿ.ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ತೋರಲಿ. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿ ಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಫಾದರ್ ಆಲ್ವಿನ್ ಡಿಸೋಜ ರವರು ಮಾತನಾಡಿ, ಮಕ್ಕಳೆ ಸ್ವಯಂ ಪ್ರೇರಿತವಾಗಿ ಜೀವನದಲ್ಲಿ ಮುಂದೆ ಸಾಗಬೇಕು. ಆಗಸದಲ್ಲಿ ಗಾಳಿಪಟಗಳು ಹಾರಾಡುವ ರೀತಿ ಮುಕ್ತ ಮನಸ್ಸಿನಿಂದ ಇರಬೇಕು. ಅವರಲ್ಲಿ ಯಾವುದೇ ರೀತಿಯ ಗೊಂದಲಗಳು ಇರಬಾರದು ಎಂಬ ದೃಷ್ಟಿಯಿಂದ ಪ್ರತಿ  ವರ್ಷ ನಮ್ಮ ಶಾಲೆಯಲ್ಲಿ ಈ ಗಾಳಿಪಟ ಹಬ್ಬ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಶಾಲೆಯ ಪ್ರಾಂಶುಪಾಲ ಫಾದರ್ ಲ್ಯಾನ್ಸಿ ಫರ್ನಾಂಡಿಸ್  ಗಾಳಿಪಟ ಹಬ್ಬದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.  ಕಾರ್ಯಕ್ರಮದ ವೇದಿಕೆಯ ಮೇಲೆ  ಅತಿಥಿಗಳಾದ  ಸಿಸ್ಟರ್ ಮೇರಿ ರೀಟಾ ಹಾಗೂ ಶಾಲೆಯ ಉಪ ಪ್ರಾಂಶುಪಾಲೆಯರಾದ ಸಿಸ್ಟರ್ ಗ್ರೇಸಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದಳು. ಉಮರ್ ಸ್ವಾಗತಿಸಿದರು. ಮುಸ್ತಾಕೀಮ್ ವಂದಿಸಿದರು. ಗಾಳಿಪಟ ಸ್ಪರ್ಧೆಯಲ್ಲಿ ವಿಜೇತರಾದ  ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!