spot_img
spot_img

ತಿಳಿಯಿರಿ ಭಾರತ

Must Read

- Advertisement -

78 ನೇ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ನಮ್ಮ ಹೆಮ್ಮೆಯ ಭಾರತ ದೇಶದ ಬಗ್ಗೆ ಸ್ವಲ್ಪ ತಿಳಿಯೋಣ

👉 *ರಾಷ್ಟ್ರದ ಬಗ್ಗೆ ನಮಗೆ ಎಷ್ಟು ಗೊತ್ತು?*
* ಭಾರತದ ರಾಷ್ಟ್ರಧ್ವಜ ಅಳವಡಿಸಿಕೊಂಡಿದ್ದು :- *ಜುಲೈ 22,1947*
* ಧ್ವಜ ವಿನ್ಯಾಸಗೊಳಿಸಿದವರು :- *ಪಿಂಗಾಲಿ ವೆಂಕಯ್ಯ*
* ಧ್ವಜದ ಉದ್ದ – ಅಗಲ :-. *3:2*
* ಧ್ವಜದ ನಿಯಮ ಜಾರಿಗೆ ಬಂದಿದ್ದು :- *2002 ರಲ್ಲಿ*
* ಧ್ವನಿ ನಿಯಮಕ್ಕೆ ತಿದ್ದುಪಡಿ ತಂದದ್ದು :- *2005 ರಲ್ಲಿ*
* ಭಾರತದ ರಾಷ್ಟ್ರಗೀತೆಯನ್ನು ಅಳವಡಿಸಿಕೊಂಡದ್ದು :- *ಜ. 24. 1950*
* ಮೊದಲು ಹಾಡಿದ್ದು :- *ಡಿ. 27. 1911 ಕೊಲ್ಕತ್ತಾ* ಅಧಿವೇಶನದಲ್ಲಿ
* ಮೂಲ ರಚಿತ ಭಾಷೆ :- *ಬಂಗಾಳಿ*
* ರಚನೆ :- *ರವೀಂದ್ರನಾಥ ಠ್ಯಾಗೂರು*
* ಹಾಡುವ ಅವಧಿ :- *48 ರಿಂದ 52 ಸೆಕಂಡ್*
* ಒಳಗೊಂಡಿರುವ ಸಾಲುಗಳು :- *13*
* ಭಾರತದ ರಾಷ್ಟ್ರೀಯ ಚಿಹ್ನೆ :- *ನಾಲ್ಕು ಮುಖದ ಸಿಂಹ*
* ಅಳವಡಿಸಿಕೊಂಡದ್ದು :- *ಜ. 26.1950*
* ಸತ್ಯಮೇವ ಜಯತೆಯ ಲಿಪಿ :- *ದೇವನಾಗರಿ ಲಿಪಿ*
* ಉಪನಿಷತ್ತು :- *ಮಂಡಕೋಪನಿಷತ್*
* ಭಾರತದ ನಾಡಗೀತೆ :- *ವಂದೆ ಮಾತರಂ.*
* ರಚನೆ :- *ಬಂಕಿಮಚಂದ್ರ ಚಟರ್ಜಿ*
* ಕಾದಂಬರಿ, :- *ಆನಂದ ಮಠ*
* ಮೊದಲು ಹಾಡಿದ್ದು :- *1896 ಕೊಲ್ಕತ್ತಾ* ಅಧಿವೇಶನ.
* ಅಳವಡಿಸಿಕೊಂಡದ್ದು :- *ಜ. 24. 1950*..
* ದೇಶಭಕ್ತಿಗೀತೆ :- *ಸಾರೇ ಜಹಾಂಸೆ ಅಚ್ಚಾ.*
* ರಚನೆ :- *ಮಹಮದ್ ಇಕ್ಬಾಲ್*
* ಭಾಷೆ :- *ಉರ್ದು*
* ಶೈಲಿ :- *ಗಜಲ್*

*ಪ್ರಮುಖ ಹುದ್ದೆಗಳ ಅವಧಿ*
⚫ ರಾಷ್ಟ್ರಪತಿ = 5 ವರ್ಷ
⚫ ಉಪರಾಷ್ಟ್ರಪತಿ = 5 ವರ್ಷ
⚫ ರಾಜ್ಯ ಸಭಾ ಸದಸ್ಯ = 6 ವರ್ಷ
⚫ ಲೋಕ ಸಭಾ ಸದಸ್ಯ = 5 ವರ್ಷ
⚫ ರಾಜ್ಯಪಾಲರು = 5 ವರ್ಷ
⚫ ವಿಧಾನ ಸಭಾ ಸದಸ್ಯ = 5 ವರ್ಷ
⚫ ವಿಧಾನ ಪರಿಷತ್ ಸದಸ್ಯ = 6 ವರ್ಷ.

- Advertisement -

*ಚುನಾವಣೆಗೆ ಸ್ಪರ್ಧಿಸುವ ವಯಸ್ಸು*
⚫ ರಾಷ್ಟ್ರಪತಿ = 35 ವರ್ಷ
⚫ ಉಪರಾಷ್ಟ್ರಪತಿ = 35 ವರ್ಷ
⚫ ರಾಜ್ಯಸಭಾ ಸದಸ್ಯ = 30 ವರ್ಷ
⚫ ಲೋಕಸಭಾ ಸದಸ್ಯ = 25 ವರ್ಷ
⚫ ರಾಜ್ಯಪಾಲರು = 35 ವರ್ಷ
⚫ ವಿಧಾನಸಭಾ ಸದಸ್ಯ = 25 ವರ್ಷ
⚫ ವಿಧಾನಪರಿಷತ್ ಸದಸ್ಯ = 30 ವರ್ಷ
⚫ ಗ್ರಾಮಪಂಚಾಯತ್ ಸದಸ್ಯ = 21 ವರ್ಷ
⚫ ಮತದಾನದ ವಯಸ್ಸು = 18 ವರ್ಷ

*ಭಾರತದ ನೌಕಾಪಡೆ ಕಛೇರಿ*
⚫ ಪಶ್ಚಿಮ ನೌಕಾಪಡೆ = ಮುಂಬಯಿ
⚫ ಪೂರ್ವ ನೌಕಾಪಡೆ = ವಿಶಾಖಪಟ್ಟಣಂ
⚫ ದಕ್ಷಿಣ ನೌಕಾಪಡೆ = ಕೊಚ್ಚಿ
⚫ ಆಗ್ನೇಯ ನೌಕಾಪಡೆ = ಅಂಡಮಾನ್ ನಿಕೋಬಾರ್

*ಭಾರತದ ಪ್ರಮುಖ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು*
1. ವಿಶಾಖಪಟ್ಟಣ — ಭಾಗ್ಯನಗರ, (city of destiny)
2. ವಿಜಯವಾಡ — ಗೆಲುವಿನ ಸ್ಥಾನ (place of victory)
3. ಗುಂಟೂರು — ಮೆಣಸಿನಕಾಯಿಗಳ ನಗರ, ಮಸಾಲೆ ನಗರ
*ಉತ್ತರಪ್ರದೇಶ*
1. ಆಗ್ರಾ — ತಾಜ್ ನಗರಿ
2. ಕಾನ್ಪುರ — ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್
3. ಲಕ್ನೋ — ನವಾಬರ ನಗರ (city of nawab’s)
4. ಪ್ರಯಾಗ — ದೇವರ ಮನೆ
5. ವಾರಾಣಾಸಿ — ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವ ಜೀವಂತ ಹಳೆಯ ನಗರ, ಪವಿತ್ರ ನಗರ.
*ಗುಜರಾತ್*
1. ಅಹಮದಾಬಾದ್ — ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್.
2. ಸೂರತ್ — ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ.
*ಕರ್ನಾಟಕ*
1. ಬೆಂಗಳೂರು — ಭಾರತದ ಎಲೆಕ್ಟ್ರಾನಿಕ್ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ್ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ.
2. ಕೂರ್ಗ್ — ಭಾರತದ ಸ್ಕಾಟ್ಲೆಂಡ್.
3. ಮೈಸೂರು — ಸಾಂಸ್ಕ್ರತಿಕ ನಗರಿ.
*ಓಡಿಸ್ಸಾ*
1. ಭುವನೇಶ್ವರ — ಭಾರತದ ದೇವಾಲಯ ನಗರ
*ತಮಿಳುನಾಡು*
1. ಕೊಯಮತ್ತೂರು — ಭಾರತದ ಬಟ್ಟೆ ನಗರ, ಭಾರತದ ಎಂಜಿನಿಯರರ ನಗರ, ದಕ್ಷಿಣ ಭಾರತದ ಮಾಂಚೆಸ್ಟರ್
2. ಮಧುರೈ — ಪೂರ್ವದ ಅಥೆನ್ಸ್. ಹಬ್ಬಗಳ ನಗರ, ನಿದ್ರಾರಹಿತ ನಗರ (sleepless city)
3. ಸಲೇಂ — ಮಾವಿನ ಹಣ್ಣಿನ ನಗರ.
4. ಚೆನ್ನೈ — ಭಾರತದ ಬ್ಯಾಂಕಿಂಗ್ ರಾಜಧಾನಿ, ದಕ್ಷಿಣ ಭಾರತದ ಹೆಬ್ಬಾಗಿಲು, ಭಾರತದ ಆರೋಗ್ಯ ರಾಜಧಾನಿ, auto hub of india
*ಪಶ್ಚಿಮ ಬಂಗಾಳ*
1. ಡಾರ್ಜಿಲಿಂಗ್ — ಬೆಟ್ಟಗಳ ರಾಣಿ,
2. ದುರ್ಗಾಪೂರ — ಭಾರತದ ರೋರ್
3. ಮಾಲ್ಡಾ — ಮಾವಿನ ಹಣ್ಣಿನ ನಗರ.
4. ಕಲ್ಕತ್ತ — ಅರಮನೆಗಳ ನಗರ.
*ಜಾರ್ಖಂಡ್*
1. ಧನಬಾದ್ — ಭಾರತದ ಕಲ್ಲಿದ್ದಲು ರಾಜಧಾನಿ.
2. ಜಮಶೇಡಪುರ — ಭಾರತದ ಸ್ಟೀಲ್ ನಗರ
*ತೆಲಂಗಾಣ*
1. ಹೈದ್ರಾಬಾದ್ — ಮುತ್ತುಗಳ ನಗರ, ಹೈಟೆಕ್ ಸಿಟಿ.
*ರಾಜಸ್ತಾನ*
1. ಜೈಪುರ — ಗುಲಾಬಿ ನಗರ, ಭಾರತದ ಪ್ಯಾರಿಸ್
2. ಜೈಸಲ್ಮೇರ್ — ಭಾರತದ ಸ್ವರ್ಣ ನಗರ
3. ಉದಯಪುರ — ಬಿಳಿನಗರ
4. ಜೋಧಪುರ — ನೀಲಿನಗರ, ಸೂರ್ಯನಗರ.
*ಜಮ್ಮು ಕಾಶ್ಮೀರ*
1. ಕಾಶ್ಮೀರ — ಭಾರತದ ಸ್ವಿಟ್ಜರ್ಲೇಂಡ್
2. ಶ್ರೀನಗರ — ಸರೋವರಗಳ ನಗರ
*ಕೇರಳ*
1. ಕೊಚ್ಚಿ — ಅರಬ್ಬೀ ಸಮುದ್ರದ ರಾಣಿ, ಕೇರಳದ ಹೆಬ್ಬಾಗಿಲು
2. ಕೊಲ್ಲಂ — ಅರಬ್ಬೀ ಸಮುದ್ರದ ರಾಜ.
*ಮಹಾರಾಷ್ಟ್ರ*
1. ಕೊಲ್ಲಾಪುರ — ಕುಸ್ತಿಪಟುಗಳ ನಗರ
2. ಮುಂಬೈ — ಏಳು ದ್ವೀಪಗಳ ನಗರ, ಕನಸುಗಳ ನಗರ, ಭಾರತದ ಹೆಬ್ಬಾಗಿಲು, ಭಾರತದ ಹಾಲಿವುಡ್.
3. ನಾಗ್ಪುರ್ — ಕಿತ್ತಳೆ ನಗರ
4. ಪುಣೆ — ದಕ್ಷಿಣದ ರಾಣಿ (deccan queen)
5. ನಾಸಿಕ್ — ಭಾರತದ ಮದ್ಯದ (wine) ರಾಜಧಾನಿ, ದ್ರಾಕ್ಷಿ ಹಣ್ಣುಗಳ ನಗರ, ಭಾರತದ ಕ್ಯಾಲಿಫೋರ್ನಿಯಾ.
*ಉತ್ತರಾಖಂಡ*
1. ಋಷಿಕೇಶ — ಋಷಿಗಳ ನಗರ, ಯೋಗ ನಗರ.
*ದೆಹಲಿ*
1. ದೆಹಲಿ — ಚಳುವಳಿಗಳ ನಗರ.
*ಪಂಜಾಬ*
1. ಪಟಿಯಾಲಾ — royal city of india,
2. ಅಮೃತಸರ್ — ಸ್ವರ್ಣಮಂದಿರದ ನಗರ.
*ಹರಿಯಾಣ*
1. ಪಾಣಿಪತ್ತ — ನೇಕಾರರ ನಗರ, ಕೈಮಗ

- Advertisement -

★★★ *ಕರ್ನಾಟಕ ನಮ್ಮ ರಾಜ್ಯ*★★★
1. ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
2. ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು (ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
3. ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
4. ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
5. ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಟಬಲ ಎಂಬ ಹೆಸರಿತ್ತು.
6. ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
7. ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತ್ತು ಎಂದು ಬರೆಯಲಾಗಿದೆ.
8. ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
9. 1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರು ರಾಜ್ಯ ಉದಯವಾಯಿತು.
10. ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲೀನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
11. ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
12. 1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
13. ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.

*ಕರ್ನಾಟಕದ ಪ್ರಥಮಗಳು*
1. ಮೊದಲ ಪತ್ರಿಕೆ : ಮಂಗಳೂರು ಸಮಾಚಾರ.
2. ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
3. ಕನ್ನಡ ಭಾಷೆಯ ಮೊದಲ ಪದ : ಇಸಿಲ.
4. ಮೊದಲ ಜ್ಞಾನಪೀಠ ವಿಜೇತ ಕನ್ನಡಿಗ : ಕುವೆಂಪು.
5. ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
6. ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
7. ಕನ್ನಡದ ಮೊದಲ ವಂಶ : ಕದಂಬ
8. ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
9. ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.
10. ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕ.

*ಕರ್ನಾಟಕದ ಭೌಗೋಳಿಕ ಸ್ಥಾನ*
1. ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
2. ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
3. ಅಕ್ಷಾಂಶ – 11 – 31′ ರಿಂದ 18 – 45′ ಉತ್ತರ ಅಕ್ಷಾಂಶದಲ್ಲಿದೆ.
4. ರೇಖಾಂಶ – 74 – 12′ ರಿಂದ 78 – 40′ ಪೂರ್ವ ರೇಖಾಂಶದಲ್ಲಿದೆ.
5. ಉತ್ತರದ ತುದಿ – ಬೀದರ ಜಿಲ್ಲೆಯ ಔರಾದ ತಾಲ್ಲೂಕು.
6. ದಕ್ಷಿಣದ ತುದಿ – ಚಾಮರಾಜನಗರ ಜಿಲ್ಲೆ.
7. ಪಶ್ಚಿಮದ ತುದಿ – ಉತ್ತರ ಕನ್ನಡ ಜಿಲ್ಲೆಯ ಕಾರವಾರ.
8. ಪೂರ್ವದ ತುದಿ – ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು,
9. ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ – 750 ಕಿ ಮೀ
10. ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ – 400 ಕಿ ಮೀ
11. ಕರ್ನಾಟಕದೊಂದಿಗೆ ಭೂ ಗಡಿ ಹೊಂದಿರುವ ರಾಜ್ಯಗಳು – ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು, ಆಂದ್ರಪ್ರದೇಶ.
12. ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.

*ಕರ್ನಾಟಕದ ವಿಸ್ತೀರ್ಣ*.
1. ಒಟ್ಟು ವಿಸ್ತೀರ್ಣ – 191791 ಚಕಿಮೀಗಳು.
2. ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ – 5.83
3. ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
4. ಜನಸಂಖ್ಯೆ – 61130704 (2011 ಜನಗಣತಿಯಂತೆ)
5. ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
6. ಕಂದಾಯ ವಿಭಾಗಗಳು – 04
7. ಮಹಾನಗರಗಳು – 10
8. ಮಹಾನಗರಗಳು – ಬೆಂಗಳೂರು, ಹುಬ್ಬಳಿ-ಧಾರವಾಡ, ಮೈಸೂರು, ಕಲಬುರಗಿ, ಬೆಳಗಾವಿ, ಮಂಗಳೂರು, ಬಿಜಾಪೂರ, ದಾವಣಗೆರೆ, ಬಳ್ಳಾರಿ ಮತ್ತು ತುಮಕೂರು.
9. ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ – ಬೆಳಗಾವಿ
10. ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ – ಬೆಂಗಳೂರು ನಗರ
11. ನಾಲ್ಕು ಕಂದಾಯ ವಿಭಾಗಗಳು – ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ

*ಕರ್ನಾಟಕದ ಒಂದು ಪಕ್ಷಿನೋಟ*
1. ರಾಜ್ಯಪಕ್ಷಿ – ನೀಲಕಂಠ (ಇಂಡಿಯನ್ ರೋಲರ್)
2. ರಾಜ್ಯಪ್ರಾಣಿ – ಆನೆ.
3. ರಾಜ್ಯವೃಕ್ಷ – ಶ್ರೀಗಂಧ.
4. ರಾಜ್ಯಪುಷ್ಪ – ಕಮಲ
5. ನಾಡಗೀತೆ – ಜಯಭಾರತ ಜನನಿಯ ತನುಜಾತೆ (ಕುವೆಂಪು ರಚಿತ)
6. ಕರ್ನಾಟಕ ಸರ್ಕಾರದ ಚಿನ್ಹೆ – ಗಂಡಭೇರುಂಡ
7. ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
8. ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ – ಕರ್ನಾಟಕ
9. ಕರ್ನಾಟಕದ ಮೊದಲ ನಾಡಗೀತೆ – ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು (ಹುಯಿಲಗೋಳ ನಾರಾಯಣರಾವ್)
10. ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು – ಸ್ಯಾಂಡಲವುಡ್.
11. ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
12. ವಿಧಾನಸಭೆಯ ಸದಸ್ಯರ ಸಂಖ್ಯೆ – 225.
13. ವಿಧಾನಪರಿಷತ್ ಸದಸ್ಯರ ಸಂಖ್ಯೆ – 75
14. ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 28
15. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 12
16. ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ – 1918 ರಲ್ಲಿ ಮಿಲ್ಲರ ಆಯೋಗ.
17. ಮೊದಲ ರಾಜ್ಯಪಾಲ – ಜಯಚಾಮರಾಜೇಂದ್ರ ಒಡೆಯರ್
18. ಮೊದಲ ಮುಖ್ಯಮಂತ್ರಿ – ಕೆ.ಚಂಗಲರಾಯರೆಡ್ಡಿ.
19. ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ – ಎಸ್. ನಿಜಲಿಂಗಪ್ಪ
20. ವಿಧಾನಸಭೆಯ ಮೊದಲ ಸಭಾಪತಿ – ವಿ. ವೆಂಕಟಪ್ಪ
21. ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ – ಕೆ.ಎಸ್.ನಾಗರತ್ನಮ್ಮ
22. ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಾಧೀಶ – ಆರ್. ವೆಂಕಟರಾಮಯ್ಯ.
23. ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರುವುದು – ಹಾಸನದಲ್ಲಿ
24. ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು – ಪ್ರಥಮ ಸ್ಥಾನದಲ್ಲಿದೆ.

ಅಂತೆಯೇ ,

*ಕನ್ನಡದ ಮೊದಲುಗಳು*

1. ಅಚ್ಚಕನ್ನಡದ ಮೊದಲ ದೊರೆ – ಮಯೂರವರ್ಮ
2. ಕನ್ನಡದ ಮೊದಲ ಕವಿ – ಪಂಪ.
3. ಕನ್ನಡದ ಮೊದಲ ಶಾಸನ – ಹಲ್ಮಿಡಿ ಶಾಸನ.
4. ತ್ರಿಪದಿ ಛಂದಸ್ಸಿನ ಮೊದಲ ಬಳಕೆ – ಬಾದಾಮಿಯ ಕಪ್ಪೆಅರಭಟ್ಟನ ಶಾಸನದಲ್ಲಿ.
5. ಕನ್ನಡದ ಮೊದಲ ಲಕ್ಷಣಗ್ರಂಥ – ಕವಿರಾಜಮಾರ್ಗ.
6. ಕನ್ನಡದ ಮೊದಲ ನಾಟಕ – ಮಿತ್ರವಿಂದಗೋವಿಂದ.
7. ಕನ್ನಡದ ಮೊದಲ ಮಹಮದೀಯ ಕವಿ – ಶಿಶುನಾಳಷರೀಫ.
8. ಕನ್ನಡದ ಮೊದಲ ಕವಯಿತ್ರಿ – ಅಕ್ಕಮಹಾದೇವಿ.
9. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ – ಇಂದಿರಾಬಾಯಿ.
10. ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ – ಚೊರಗ್ರಹಣತಂತ್ರ
11. ಕನ್ನಡದ ಮೊದಲ ಛಂದೋಗ್ರಂಥ – ಛಂದೋಂಬುಧಿ (ನಾಗವರ್ಮ).
12. ಕನ್ನಡದ ಮೊದಲ ಸಾಮಾಜಿಕ ನಾಟಕ – ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ.
13. ಕನ್ನಡದ ಮೊದಲ ಜ್ಯೋತಿಷ್ಯಗ್ರಂಥ – ಜಾತಕತಿಲಕ
14. ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ – ವ್ಯವಹಾರಗಣಿತ
15. ಕನ್ನಡದ ಮೊದಲ ಕಾವ್ಯ – ಆದಿಪುರಾಣ
16. ಕನ್ನಡದ ಮೊದಲ ಗದ್ಯಕೃತಿ – ವಡ್ಡಾರಾಧನೆ
17. ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ – ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್
18. ಕನ್ನಡದ ಮೊದಲ ಪತ್ರಿಕೆ – ಮಂಗಳೂರು ಸಮಾಚಾರ
19. ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು – ಚಂದ್ರರಾಜ
20. ಕನ್ನಡದಲ್ಲಿ ಮೊದಲು ಕಥೆ ಬರೆದವರು – ಪಂಜೆ ಮಂಗೇಶರಾಯರು
21. ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ – ಒಲುಮೆ
22. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು – ಹೆಚ್.ವಿ.ನಂಜುಂಡಯ್ಯ.
23. ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ – ಆರ್.ನರಸಿಂಹಾಚಾರ್
24. ಕನ್ನಡದ ಮೊದಲ ವಚನಕಾರ – ದೇವರದಾಸಿಮಯ್ಯ
25. ಹೊಸಗನ್ನಡದ ಮೊದಲ ಮಹಾಕಾವ್ಯ – ಶ್ರೀರಾಮಾಯಣ ದರ್ಶನಂ
26. ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಕುವೆಂಪು.
27. ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು – ಆರ್.ಎಫ್.ಕಿಟೆಲ್
28. ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ – ಸೂಕ್ತಿಸುಧಾರ್ಣವ
29. ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ – ಬೆಂಗಳೂರು (1915)
30. ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ – ಕುವೆಂಪು
31. ಕನ್ನಡದ ಮೊದಲ ವಿಶ್ವಕೋಶ – ವಿವೇಕಚಿಂತಾಮಣಿ
32. ಕನ್ನಡದ ಮೊದಲ ವೈದ್ಯಗ್ರಂಥ – ಗೋವೈದ್ಯ.
ಹೇಮಂತ್ ಚಿನ್ನು.
33. ಕನ್ನಡದ ಮೊದಲ ಪ್ರಾಧ್ಯಾಪಕರು – ಟಿ.ಎಸ್.ವೆಂಕಣ್ಣಯ್ಯ
34. ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ – ಮಂದಾನಿಲ ರಗಳೆ
35. ಕನ್ನಡದ ಮೊದಲ ಹಾಸ್ಯಪತ್ರಿಕೆ – ವಿಕಟಪ್ರತಾಪ

ಹಾಗೆಯೇ,
*ನಮಗೆಷ್ಟು ಗೊತ್ತು!?*
1. ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು? – ಮಲ್ಲಬೈರೇಗೌಡ.
2. ಭಾರತದಲ್ಲಿ ಮೊದಲ ಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು? – ಟಿಪ್ಪು ಸುಲ್ತಾನ್.
3. ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು? – ಚಿತ್ರದುರ್ಗ.
4. “ಕರ್ನಾಟಕ ರತ್ನ ರಮಾರಮಣ” ಎಂಬ ಬಿರುದು ಯಾರಿಗೆ ದೊರಕಿತ್ತು? – ಕೃಷ್ಣದೇವರಾಯ.
5. ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು? – ಪಂಪಾನದಿ.
6. “ಸ್ಟೇಟ್ ಬ್ಯಾಂಕ್ ಆಫ್ ಮೈಸೂರು” ಇದರ ಸಂಸ್ಥಾಪಕರು ಯಾರು? – ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.
7. ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು? – ಹೈದರಾಲಿ.
8. ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು? – ಶ್ರೀರಂಗ ಪಟ್ಟಣದ ಪಾಲಹಳ್ಳಿ.
9. ಕೆಂಪೇಗೌಡರು ಕಟ್ಟಿಸಿದ ಬೆಂಗಳೂರು ಕೋಟೆ ಯಾವ ಊರಿನಲ್ಲಿದೆ? – ಕಲಾಸಿಪಾಳ್ಯ.
10. “ವಿಧಾನ ಸೌಧ” ವನ್ನು ಕಟ್ಟಿಸಿದವರು ಯಾರು? – ಕೆಂಗಲ್ ಹನುಮಂತಯ್ಯ.
11. ಕನ್ನಡಕ್ಕೆ ಒಟ್ಟು ಎಷ್ಟು “ಜ್ಞಾನಪೀಠ” ಪ್ರಶಸ್ತಿ ದೊರೆತಿದೆ? – 8
12. ಮೈಸೂರಿನಲ್ಲಿರುವ “ಬೃಂದಾವನ” ದ ವಿನ್ಯಾಸಗಾರ ಯಾರು? – “ಸರ್. ಮಿರ್ಜಾ ಇಸ್ಮಾಯಿಲ್”.
13. ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು? – ರಾಮಕೃಷ್ಣ ಹೆಗ್ಗಡೆ.
14. “ಯುಸುಫಾಬಾದ್” ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು? – ದೇವನಹಳ್ಳಿ (ದೇವನದೊಡ್ಡಿ)
15. ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು? – ವಿಜಯನಗರ ಸಾಮ್ರಾಜ್ಯ.
16. ಶ್ರೀರಂಗಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು? ~ ತಿರುಮಲಯ್ಯ
17. ″ಯದುರಾಯ ರಾಜ ನರಸ ಒಡೆಯರ್” ಕಟ್ಟಿಸಿದ ಕೋಟೆ ಯಾವುದು? – ಶ್ರೀರಂಗ ಪಟ್ಟಣದ ಕೋಟೆ.
18. ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು? – ಶಿವಮೊಗ್ಗ ಜಿಲ್ಲೆಯ ಮತ್ತೂರ್.
19. ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು? – ಶಿರಸಿಯ ಮಾರಿಕಾಂಬ ಜಾತ್ರೆ.
20. ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಾಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು? – ಹೆಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)
21. ರಾಯಚೂರಿನ ಮೊದಲ ಹೆಸರೇನು? – ಮಾನ್ಯಖೇಟ.
22. ಕನ್ನಡದ ಮೊದಲ ಕೃತಿ ಯಾವುದು? – ಕವಿರಾಜ ಮಾರ್ಗ.
23. ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು? _ ಹಂಪೆ.
24. ಜಗತ್ತಿನ ಎತ್ತರವಾದ ಏಕಶಿಲಾ ವಿಗ್ರಹ ಯಾವುದು? – ಶ್ರವಣಬೆಳಗೊಳದ ಗೊಮ್ಮಟೇಶ್ವರ.
25. ಕರ್ನಾಟಕಕ್ಕೆ ಮೊದಲ “ಪರಮವೀರ ಚಕ್ರ” ತಂದುಕೊಟ್ಟ ವೀರ ಕನ್ನಡಿಗ ಯಾರು? – ಕರ್ನಲ್ ವಸಂತ್.
26. ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು? – ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
27. ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು? – ಮುಳ್ಳಯ್ಯನ ಗಿರಿ.
28. ಮೈಸೂರು ಅರಮನೆಯ ಹೆಸರೇನು? – ಅಂಬಾವಿಲಾಸ ಅರಮನೆ.
29. ಕರ್ನಾಟಕಕ್ಕೆ ಮೊದಲು ಕಾಫಿ ಬೀಜವನ್ನು ತಂದವರು ಯಾರು? – ಬಾಬಾ ಬುಡನ್ ಸಾಹೇಬ.
30. “ಕರ್ಣಾಟಕದ ಮ್ಯಾಂಚೆಸ್ಟಾರ್ ” ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ? – ದಾವಣಗೆರೆ.
31. ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು? – ಆಗುಂಬೆ.
32. ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು? ~ ಬೆಂಗಳೂರು ನಗರ ಜಿಲ್ಲೆ.
33. ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು? – ಹಲ್ಮಿಡಿ ಶಾಸನ.
34. ಕರ್ನಾಟಕದ ರಾಜ್ಯ ಪಕ್ಷಿ ಯಾವುದು? – ನೀಲಕಂಠ ಪಕ್ಷಿ.
35. ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು? – ಕೆ.ಸಿ.ರೆಡ್ಡಿ.
36. ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು? – ಶ್ರೀ ಜಯಚಾಮರಾಜ ಒಡೆಯರು.
37. ಕರ್ನಾಟಕದ ಮೊದಲ ಕವಯತ್ರಿ ಯಾರು? – ಅಕ್ಕಮಹಾದೇವಿ.
38. ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು? – ವಡ್ಡರಾದನೆ.
39. ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು? – ಮೈಸೂರು ವಿಶ್ವವಿದ್ಯಾನಿಲಯ.
40. ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು? – “ಕೇಶಿರಾಜ” ವಿರಚಿತ “ಶಬ್ದಮಣಿ ದರ್ಪಣಂ”
41. “ಕರ್ನಾಟಕ ಶಾಸ್ತ್ರೀಯ ಸಂಗೀತ”ದ ಪಿತಾಮಹ ಯಾರು? – ಪುರಂದರ ದಾಸರು.
42. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ? – ರಾಯಚೂರು ಜಿಲ್ಲೆ.
43. ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು? – ರಾಮನಗರ.
44. ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು? – ಮಂಡ್ಯ ಜಿಲ್ಲೆ.
45. ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು? – ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
46. ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು? – ಹಳದಿ: ಶಾಂತಿಯ ಸಂಕೇತ. ಕೆಂಪು: ಕ್ರಾಂತಿಯ ಸಂಕೇತ
47. ರಾಷ್ಟ್ರಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು? – ಗರಗ,
48. ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ? – ಕೊಡಗು.
49. ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು? – ಲಿಂಗನಮಕ್ಕಿ ಅಣೆಕಟ್ಟು.
50. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಯಾರು? – ಕುವೆಂಪು

*2017 ರ ಗಣತಿಯ ಪ್ರಕಾರ ಭಾರತದ ಧರ್ಮಾಧಾರಿತ ಜನಸಂಖ್ಯೆ*
*ಭಾರತಾದ್ಯಂತ ಜನಸಂಖ್ಯೆ*
ಹಿಂದೂ ಜನಸಂಖ್ಯೆ – 74.33%
ಮುಸ್ಲಿಂ ಜನಸಂಖ್ಯೆ – 14.20%
ಕ್ರಿಶ್ಚಿಯನ್ – 5.84%
ಸಿಖ್ಖ್ – 1.86%
ಜನಾಂಗೀಯ ಧರ್ಮಗಳು – 1.35%
ಬೌದ್ಧ – 0.82%
ಧರ್ಮವಿಲ್ಲದವರು – 0.48%
ಇತರ – 0.47%
*ಆಂಧ್ರಪ್ರದೇಶ*
ಹಿಂದೂ – 89.0%
ಮುಸ್ಲಿಂ – 9.2%
ಕ್ರಿಶ್ಚಿಯನ್ – 1.6%(3.0%)
ಇತರ – 0.2%
*ಅರುಣಾಚಲ ಪ್ರದೇಶ*
ಹಿಂದೂ – 34.6%
ಜನಾಂಗೀಯ ಧರ್ಮಗಳು – 30.7%
ಬೌದ್ಧ – 13.0%
ಕ್ರಿಶ್ಚಿಯನ್ – 18.7%(25%)
ಮುಸ್ಲಿಂ – 1.9%
*ಅಸ್ಸಾಂ*
ಹಿಂದೂ – 65%
ಮುಸ್ಲಿಂ – 30.9%
ಕ್ರಿಶ್ಚಿಯನ್ – 3.7%(7.0%)
ಬೌದ್ಧ – 0.2%
ಇತರ – 0.2%
*ಬಿಹಾರ*
ಹಿಂದೂ – 83.2%
ಮುಸ್ಲಿಂ – 16.5%
ಕ್ರಿಶ್ಚಿಯನ್ – 0.1%(0.3%)
*ಛತ್ತೀಸಘಡ್*
ಹಿಂದೂ – 94.7%
ಮುಸ್ಲಿಂ – 2.0%
ಕ್ರಿಶ್ಚಿಯನ್ – 1.9%(2.5%)
ಇತರ – 1.5%
*ದೆಹಲಿ*
ಹಿಂದೂ – 82%
ಮುಸ್ಲಿಂ – 11.7%
ಸಿಖ್ – 4.0%
ಜೈನ್ – 1.1%
ಕ್ರಿಶ್ಚಿಯನ್ – 0.9%(1.86%)
*ಗೋವಾ*
ಹಿಂದೂ – 65.8%
ಕ್ರಿಶ್ಚಿಯನ್ – 26.7%
ಮುಸ್ಲಿಂ – 6.8%
ಇತರ – 0.2%
*ಗುಜರಾತ್*
ಹಿಂದೂ – 89.1%
ಮುಸ್ಲಿಂ – 9.1%
ಜೈನ್ – 1.0%
ಕ್ರಿಶ್ಚಿಯನ್ – 0.6%(1.2%)
*ಹರಿಯಾಣ*
ಹಿಂದೂ – 88.2%
ಮುಸ್ಲಿಂ – 5.8%
ಸಿಖ್ – 5.5%
ಜೈನ್ – 0.3%
ಕ್ರಿಶ್ಚಿಯನ್ – 0.1%(0.3%)
*ಹಿಮಾಚಲ ಪ್ರದೇಶ*
ಹಿಂದೂ – 95.4%
ಮುಸ್ಲಿಂ – 2.0%
ಬೌದ್ಧ – 1.3%
ಸಿಖ್ – 1.2%
ಕ್ರಿಶ್ಚಿಯನ್ – 0.1%(0.2%)
*ಜಮ್ಮು ಕಾಶ್ಮೀರ*
ಮುಸ್ಲಿಂ – 67.0%
ಹಿಂದೂ – 29.6%
ಸಿಖ್ – 2.0%
ಬೌದ್ಧ – 1.1%
ಕ್ರಿಶ್ಚಿಯನ್ – 0.2%(0.3%)
*ಜಾರ್ಖಂಡ್*
ಹಿಂದೂ – 68.6%
ಮುಸ್ಲಿಂ – 13.8%
ಬುಡಕಟ್ಟು ಧರ್ಮ – 13.0%
ಕ್ರಿಶ್ಚಿಯನ್ – 4.1%(6.0%)
*ಕರ್ನಾಟಕ*
ಹಿಂದೂ – 83.9%
ಮುಸ್ಲಿಂ – 12.2%
ಕ್ರಿಶ್ಚಿಯನ್ – 1.9%(4.0%)
ಜೈನ್ – 0.8%
ಬೌದ್ಧ – 0.7%
*ಕೇರಳ*
ಹಿಂದೂ – 56.2%
ಮುಸ್ಲಿಂ – 24.7%
ಕ್ರಿಶ್ಚಿಯನ್ – 19.0%(35.5%)
*ಮಧ್ಯ ಪ್ರದೇಶ*
ಹಿಂದೂ – 91.1%
ಮುಸ್ಲಿಂ – 6.4%
ಜೈನ್ – 0.9%
ಕ್ರಿಶ್ಚಿಯನ್ – 0.3%(2.2%)
ಇತರ – 1.2%
*ಮಹಾರಾಷ್ಟ್ರ*
ಹಿಂದೂ – 80.4%
ಮುಸ್ಲಿಂ – 10.6%
ಬೌದ್ಧ – 6.0%
ಜೈನ್ – 1.3%
ಕ್ರಿಶ್ಚಿಯನ್ – 1.1%(2%)
ಇತರ – 0.4%
*ಮಣಿಪುರ*
ಹಿಂದೂ – 46%
ಕ್ರಿಶ್ಚಿಯನ್ – 34%(41.8%)
ಮುಸ್ಲಿಂ – 8.8%
ಇತರ – 11.2%
*ಮೇಘಾಲಯ*
ಕ್ರಿಶ್ಚಿಯನ್ – 70.3%(76%)
ಹಿಂದೂ – 13.3%
ಮುಸ್ಲಿಂ – 4.3%
ಇತರ – 11.8 %
*ಮಿಜೋರಾಮ್*
ಕ್ರಿಶ್ಚಿಯನ್ – 87% (89.6%)
ಬೌದ್ಧ – 7.9%
ಹಿಂದೂ – 3.6%
ಮುಸ್ಲಿಂ – 1.1%
*ನಾಗಾಲ್ಯಾಂಡ್*
ಕ್ರಿಶ್ಚಿಯನ್ – 90%(93.1%)
ಹಿಂದೂ – 7.7%
ಮುಸ್ಲಿಂ – 1.8%
*ಒರಿಸ್ಸಾ*
ಹಿಂದೂ – 94.4%
ಕ್ರಿಶ್ಚಿಯನ್ – 2.4%(2.0%)
ಮುಸ್ಲಿಂ – 2.1%
ಇತರ – 1.1%
*ಪಂಜಾಬ್*
ಸಿಖ್ – 59.9%
ಹಿಂದೂ – 36.9%
ಕ್ರಿಶ್ಚಿಯನ್ – 1.2%(2.2%)
ಮುಸ್ಲಿಂ – 1.6%
ಇತರ – 0.4%
*ರಾಜಸ್ಥಾನ*
ಹಿಂದೂ – 88.8%
ಮುಸ್ಲಿಂ – 8.5%
ಸಿಖ್ – 1.4%
ಜೈನ್ – 1.2%
ಕ್ರಿಶ್ಚಿಯನ್ – 0.1% (0.4%)
*ಸಿಕ್ಕಿಂ*
ಹಿಂದೂ – 60.9%
ಬೌದ್ಧ – 28.1%
ಕ್ರಿಶ್ಚಿಯನ್ – 6.7%(7.5%)
ಮುಸ್ಲಿಂ – 1.4%
ಇತರ – 2.6%
*ತಮಿಳುನಾಡು*
ಹಿಂದೂ – 88.1%
ಕ್ರಿಶ್ಚಿಯನ್ – 6.1%(19.0%)
ಮುಸ್ಲಿಂ – 5.6%
ಇತರ – 0.2%
*ತ್ರಿಪುರ*
ಹಿಂದೂ – 85.6%
ಮುಸ್ಲಿಂ – 8.0%
ಬೌದ್ಧ – 3.1%
ಕ್ರಿಶ್ಚಿಯನ್ – 3.2%(5.5%)
*ಉತ್ತರ ಪ್ರದೇಶ*
ಹಿಂದೂ – 80.6%
ಮುಸ್ಲಿಂ – 18.5%
ಸಿಖ್ – 0.4%
ಬೌದ್ಧ – 0.2%
ಕ್ರಿಶ್ಚಿಯನ್ – 0.1%(0.3%)
ಜೈನ್ – 0.1%
*ಉತ್ತರಕಾಂಡ್*
ಹಿಂದೂ – 85%
ಮುಸ್ಲಿಂ – 11.9%
ಸಿಖ್ – 2.5%
ಕ್ರಿಶ್ಚಿಯನ್ – 0.3%(0.6%)
ಬೌದ್ಧ – 0.1%
ಜೈನ್ – 0.1%
*ಪಶ್ಚಿಮ ಬಂಗಾಳ*
ಹಿಂದೂ – 72.5%
ಮುಸ್ಲಿಂ – 25.2%
ಕ್ರಿಶ್ಚಿಯನ್ – 0.6%(1.2%)
ಬೌದ್ಧ – 0.3%
ಇತರ – 1.3%

ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group