spot_img
spot_img

ಮಹಾಭಾರತದಲ್ಲಿ ನ್ಯಾಯ ಪದ್ಧತಿ ಕುರಿತು ಸಾಕಷ್ಟು ಮಾಹಿತಿ ಇದೆ – ನ್ಯಾ. ವೆಂಕಟಾಚಲಯ್ಯ

Must Read

- Advertisement -

ಬೆಂಗಳೂರು – ಮಹಾಭಾರತದಲ್ಲಿ ಕಾನೂನು ಮತ್ತು ನ್ಯಾಯ ಪದ್ಧತಿಗಳ ಕುರಿತ ಸಾಕಷ್ಟು ವಿಷಯಗಳು ಇವೆ ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶ ನ್ಯಾ. ಎಂ. ಎನ್. ವೆಂಕಟಾಚಲಯ್ಯ ತಿಳಿಸಿದರು.

ಶನಿವಾರ ನಗರದ ಎನ್. ಆರ್. ಕಾಲೋನಿಯ ಶ್ರೀರಾಮ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರೀಮನ್ಮಹಾಭಾರತ ವೈಶಿಷ್ಟ್ಯ ಮತ್ತು ಶ್ರೀ ಕಾಳಹಸ್ತೀಶ್ವರ ಶತಕ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಬಳಿಕ ಮಾತನಾಡಿದ ಅವರು, ತೆಲಗು ಮೂಲದ ಲೇಖಕ ಉಪ್ಪುಲೂರಿ ಕಾಮೇಶ್ವರರಾವ್‌ರವರ ಕೃತಿಯ ಕನ್ನಡದ ಅನುವಾದ ಮಾಡಿರುವ 75 ವರ್ಷದ ಸುನಂದಾ ರಂಗನಾಥ ಸ್ವಾಮಿರವರು ಶ್ರೀಮನ್ಮಹಾಭಾರತ ವೈಶಿಷ್ಟ್ಯ ಕೃತಿಯಲ್ಲಿ ಕಾನೂನು ಮತ್ತು ನ್ಯಾಯಪದ್ದತಿಗಳ ಕುರಿತ ಸಾಕಷ್ಟು ವಿಷಯಗಳು ಮಹಾಭಾರತ ಒಳಗೊಂಡಿದೆ. ಕೆಟ್ಟದ್ದು ಎಂದಿಗೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಮತ್ತು ಒಳಿತು ಮಾಡುವವರು ಸಚ್ಚಾರಿತ್ರ್ಯ ಉಳ್ಳವರು ಎಂದಿಗೂ ಸೋಲುವುದಿಲ್ಲ ಎನ್ನುವುದನ್ನು ಅದರಿಂದ ಸಾಬೀತಾಗಿದೆ. ಆದರೆ, ಧರ್ಮದಹಾದಿ ಸಾಕಷ್ಟು ಕಷ್ಟಕಾರ್ಪಣ್ಯದಿಂದ ಕೂಡಿದ್ದು ಎಂದು ಸ್ವತಃ ಪಾಂಡವರನ್ನು ಉಲ್ಲೇಖಿಸಿ ಹೇಳಲಾಗಿದೆ ಎಂದು ತಿಳಿಸಿದರು

        ಭಾರತದರ್ಶನ ಮಾಸಪತ್ರಿಕೆಯ ಸಂಪಾದಕ ಪ್ರೊ. ಟಿ. ಎನ್. ಪ್ರಭಾಕರ್ ಮಾತನಾಡಿ, ಬೃಹತ್ ಗಂಥವನ್ನು ಕಥಾರೂಪವಾಗಿ ಮೂಲ ತೆಲುಗು ಭಾಷೆಯಲ್ಲಿ ಉಪ್ಪುಲೂರಿ ಕಾಮೇಶ್ವರ ರಾವ್‌ ರಚಿಸಿದ್ದು, ಅದರ 1150 ಪುಟಗಳ ತಿಳಿಗನ್ನಡ ಅನುವಾದವನ್ನು ಸುನಂದ ರಂಗನಾಥ ಸ್ವಾಮಿಯವರು ಅನುವಾದ ಮಾಡಿದ್ದಾರೆ ಎಂದರು.

- Advertisement -

ವಿಜಯನಗರ ಸಾಮಾಜ್ಯದ ರಾಜ ಶ್ರೀ ಕೃಷ್ಣ ದೇವರಾಜನ ಆಸ್ಥಾನದಲ್ಲಿದೆ ಅಷ್ಟದಿಗ್ಗಜರಲ್ಲಿ ಪ್ರಮುಖರಾದ ಮಹಾಕವಿ ಧೂರ್ಜಟಿಯಿಂದ ರಚಿಸಲ್ಪಟ್ಟ ಶ್ರೀ ಕಾಳಹಸ್ತೀಶ್ವರ ಶತಕವು 100 ಪದ್ಯಗಳ ಚಿಕ್ಕ ಗಂಥ ವಾಗಿದ್ದು, ಇದರಲ್ಲಿ ಕವಿಯು ಜನಸಾಮಾನ್ಯ ಪರವಾಗಿ ಶ್ರೀ ಕಾಳಹಸ್ತೀಶ್ವರನಲ್ಲಿ ತಮ್ಮಿಂದ ಎಸಗಪಡುತ್ತಿರುವ ಅಪರಾಧಗಳನ್ನು ಹಾಗು ಅವುಗಳನ್ನು ನಿವಾರಿಸು ಎಂಬ ದಿವ್ಯ ಸಂದೇಶವನ್ನು ಹೊತ್ತು ಪದ್ಯ ಮಾಲಿಕೆಯಲ್ಲಿ ಪ್ರಾರ್ಥಿಸಿದ್ದಾರೆ.

ಇದನ್ನು ಮನೋಹರ ವಾದ ಪದಪುಂಜಗಳ ಸರಳ ಸುಂದರ ಕನ್ನಡ ಅನುವಾದವನ್ನು ಮಾಡಿರುವ ಸುನಂದಾರವರು ಇಂತಹ ವಯಸ್ಸಿನಲ್ಲೂ ಯಶಸ್ವಿಯಾಗಿ ಮಾಡಿ ಕನ್ನಡ ಓದುಗರಿಗೆ ಮತ್ತು ಇಡೀ ಹಿಂದೂ ಧರ್ಮಕ್ಕೆ ನೂತನ ಚೈತನ್ಯವನ್ನು ಸಮರ್ಪಿಸಿದ್ದಾರೆ ಎಂದು ಪುಸ್ತಕ ಪರಿಚಯ ಮಾಡಿದ ನಿವೃತ್ತ ಉಪನ್ಯಾಸಕ ಕೆ.ಎಸ್. ರಾಮಮೂರ್ತಿ ತಿಳಿಸಿದರು.

ಸಂಸ್ಕೃತ ಚಿಂತಕ ಡಾ ಗುರುರಾಜ ಪೋಶೆಟ್ಟಿಹಳ್ಳಿ, ಶ್ರೀನಿವಾಸ ಶಾಸ್ತ್ರಿ,ಲೇಖಕಿ ಸುನಂದಾ ರಂಗಸಾಯಸ್ವಾಮಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group