ಮೂಡಲಗಿ: ಘಟಪ್ರಭೆ ನದಿಯ ತೀರದಲ್ಲಿ ಜನಿಸಿ ಭಕ್ತರ ಭಾಗ್ಯದಾತೆಯಾಗಿ ತನ್ನ ಕೀರ್ತಿಯನ್ನು ಜಗಕ್ಕೆ ತೋರಿದ ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿನ ಶ್ರೀ ಮಹಾಲಕ್ಷ್ಮಿ ದೇವಿ ಹಾಗೂ ಶ್ರೀ ಬಸವೇಶ್ವರ ಜಾತ್ರಾಮಹೋತ್ಸವ ಫೆ. ೧೦ ರಿಂದ೧೨ ರವರಿಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಗ್ರಾಮೀಣ ಕ್ರೀಡೆಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗಲಿದೆ ಭರಮಪ್ಪ ಗಂಗನ್ನವರ ತಿಳಿಸಿದರು.
ಶುಕ್ರವಾರದಂದು ತಾಲೂಕಿನ ಮಸಗುಪ್ಪಿಯ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿ ಹಗೂ ಶ್ರೀ ಬಸವೇಶ್ವರ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಜಾತ್ರಾ ಮಹೋತ್ಸವದ ಮಾಹಿತಿ ನೀಡಿದ ಅವರು ಸೋಮವಾರ ಫೆ.೧೦ ರಂದು ಬೆಳಿಗ್ಗೆ ೫ ಗಂಟೆಗೆ ಶ್ರೀ ಮಹಾಲಕ್ಷ್ಮಿ ದೇವಿಗೆ ಹಾಗೂ ಶ್ರೀ ಬಸವೇಶ್ವರ ಅಭಿಷೇಕ ಮತ್ತು ವಿಶೇಷ ಪೂಜೆ ಜರುಗುವುದು, ಮುಂ ೧೦ ಗಂಟೆಗೆ ಅರಭಾವಿಯ ಶ್ರೀ ಬಸವಲಿಂಗ ಶ್ರೀಗಳು, ಸುಣಧೋಳಿಯ ಶ್ರೀ ಶಿವಾನಂದ ಶ್ರೀಗಳ ಹಸ್ತದಿಂದ ನೂತನ ಮಹಾದ್ವಾರ ಹಾಗೂ ಕಲ್ಯಾಣ ಮಂಟಪ ಉದ್ಘಾಟಣೆಗೊಳ್ಳುವುದು.
ಕ್ರಾಂತಿವೀರ ಶ್ರೀ ಭಗತ್ ಸಿಂಗ್ ವ್ಹಾಲಿಬಾಲ್ ಕ್ಲಬ್ ಮಸಗುಪ್ಪಿ ಆಶ್ರಯದಲ್ಲಿ ವ್ಹಾಲಿಬಾಲ್ ಪಂದ್ಯಾವಳಿ ಮಧ್ಯಾಹ್ನ ೪ಕ್ಕೆ ಟಗರಿನ ಕಾಳಗ ಸಾಯಂಕಾಲ ೫ಗಂಟೆಗೆ ರಥೋತ್ಸವ, ರಾತ್ರಿ ೯=೩೦ಕ್ಕೆ ರಸಮಂಜರಿ ಕಾರ್ಯಕ್ರಮ ಜರುಗುವವು.
ಮಂಗಳವಾರ ಫೆ.೧೧ ರಂದು ೫ಕ್ಕೆ ಅಭಿಷೇಕ ೮ ಗಂಟೆಗೆ ಗ್ರಾಮ ದೇವತೆಗಳ ಉಡಿ ತುಂಬುವ ಕಾರ್ಯಕ್ರಮ, ೧೦ ಗಂಟೆಗೆ ನೈವೇದ್ಯ ನಂತರ ಜರುಗುವ ಎತ್ತುಗಳ ತೆರೆಬಂಡಿ ಸ್ಪರ್ಧೆಯ ಸಮಾರಂಭದ ಸಾನ್ನಿಧ್ಯವನ್ನು ಭಗೀರಥ ಪೀಠದ ಶ್ರೀ ಪುರಷೋತ್ತಮಾನಂದಪುರಿ ಮಹಾಸ್ವಾಮಿಗಳು ವಹಿಸುವರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಗಾಟಿಸುವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಸಂಸದರಾದ ಜಗದೀಶ ಶೆಟ್ಟರ, ಈರಣ್ಣಾ ಕಡಾಡಿ ಜ್ಯೋತಿ ಬೆಳಗಿಸುವರು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಮತ್ತು ಅನೇಕ ಜನ ಪ್ರತಿನಿಧಿಗಳು, ಗಣ್ಯರು ಭಾಗವಹಿಸುವರು.
ಸಂಜೆ ೫ಕ್ಕೆ ಕಲ್ಲಪ್ಪ ಹ.ಉಪ್ಪಾರ ಅವರು ತರೆಬಂಡಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸುವರು. ಸಂಜೆ ೬ಕ್ಕೆ ವಾಲಗ ಮೇಳಗಳ ಆಹ್ವಾನ, ಸುತ್ತಮುತ್ತಲಿನ ಗ್ರಾಮಗಳ ದೇವರುಗಳು ಕೂಡುವವು ಎಂದರು.
ಸಂಜು ಹೊಸಕೋಟಿ ಮಾತನಾಡಿ ಬುಧವಾರ ಫೆ.೧೨ ರಂದು ಬೆಳಿಗ್ಗೆಮಹಾಲಕ್ಷ್ಮಿ ಅಭಿಷೇಕ ನಂತರ ನೈವೇದ್ಯ ೧೦ ಗಂಟೆಗೆ ಹಾಗೂ ದಟ್ಟಿ ಆಟ ಮತ್ತು ಸಾತಪ್ಪ ರುದ್ರಪ್ಪ ಕೊಳದುರ್ಗಿ ಹಾಗೂ ಸಹೋದರಿಂದ ಅನ್ನಸಂತರ್ಪಣೆ ಜರುಗುವುದು. ರಾತ್ರಿ ೯-೩೦ಕ್ಕೆ ಶ್ರೀ ಭಗೀರಥ ನಾಟ್ಯ ಸಂಘದಿಂದ ಮಸಗುಪ್ಪಿ ಹುಲಿ ಎಂಬ ಸಾಮಾಜಿಕ ನಾಟಕ ಜರುಗುವುದು. ಎತ್ತುಗಳ ತೆರೆಬಂಡಿ ಸ್ಪರ್ಧೆಯ ಬಹುಮಾನಗಳು ೪೦ ಸಾವಿರ, ೩೦ ಸಾವಿರ, ೨೫ಸಾವಿರ, ೨೦ ಸಾವಿರ, ೧೫ ಸಾವಿರ, ೧೨ ಸಾವಿರ, ೧೦ ಸಾವಿರ, ೮ ಸಾವಿರ, ೫ ಸಾವಿರ ಕ್ರಮವಾಗಿ ಒಂದರಿಂದ ಒಂಬತ್ತು ವಿಜೇತರಿಗೆ ನೀಡಲಾಗುವುದು ಮತ್ತು ಒಂದು ಢಾಲು ಮತ್ತು ನಿಶಾನೆ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರು ಅಧಿಕ ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಲು ಮೊ-೭೩೫೩೧೧೯೫೫೧, ೯೯೦೨೫೧೬೦೧೬ ಗೆ ಸಂಪರ್ಕಿಸಬಹುದು.
ಈ ಸಮಯದಲ್ಲಿ ಬಸವರಾಜ ಭುಜನ್ನವರ, ಆನಂದ ಹೊಸಕೋಟಿ, ಭರಮಪ್ಪ ಆಶಿರೊಟ್ಟಿ, ಬಸವರಾಜ ಮೆಣಸಿ, ವೆಂಕಟೇಶ ಪಾಟೀಲ, ಚಿದಾನಂದ ಅಳಗೋಡಿ, ಈಶ್ವರ ಗಾಡವಿ ಉಪಸ್ಥಿತರಿದ್ದರು.