Homeಸುದ್ದಿಗಳುಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿ, ಸ್ಯಾನಿಟೈಝರ್ ಉಪಯೋಗಿಸಿ ಸ್ವಚ್ಛತೆ ಕಾಯ್ದುಕೊಳ್ಳಿ - ಡಾ.ಮಹೇಶ ಚಿತ್ತರಗಿ

ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿ, ಸ್ಯಾನಿಟೈಝರ್ ಉಪಯೋಗಿಸಿ ಸ್ವಚ್ಛತೆ ಕಾಯ್ದುಕೊಳ್ಳಿ – ಡಾ.ಮಹೇಶ ಚಿತ್ತರಗಿ

ಸವದತ್ತಿ – “ಕೊರೋನಾ ಮಹಾ ಮಾರಿ ವೈರಸ್ ತನ್ನ ಒಂದು ರೂಪವನ್ನು ಬದಲಾಯಿಸಿಕೊಂಡು ಜನರ ಪ್ರಾಣವನ್ನು ಬಲಿ ಪಡೆಯುತ್ತಿದೆ ಇನ್ನೂ ಜನರು ತಮ್ಮ ಆರೋಗ್ಯದ ಕಡೆಗೆ ಕಾಳಜಿ ವಹಿಸುತ್ತಿಲ್ಲ.ಸಾಮಾಜಿಕ ಅಂತರವನ್ನು ಮರೆತು ಗುಂಪು ಗುಂಪಾಗಿ ಕುಳಿತುಕೊಳ್ಳದೆ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿ ಸೈನಿಟೈಝರಗಳನ್ನು ಉಪಯೋಗಿಸಿ ಕೈಗಳನ್ನು ಮೇಲಿಂದ ಮೇಲೆ ತೊಳೆದುಕೊಳ್ಳಬೇಕು. ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಮತ್ತು ಅದೇ ರೀತಿ ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ ಹೇಳಿದರು.

ಅವರು ಪಟ್ಟಣದ ಗುರ್ಲಹೊಸೂರಿನ ‘ಬಾರಾ ಇಮಾಮ ಮಶೀದಿ’ಯಲ್ಲಿ ಮುಸ್ಲಿಂ ಯಂಗ್ ಕಮಿಟಿ.ಇವರ ಸಂಯುಕ್ತಾಶ್ರಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳುತ್ತಿಲ್ಲ.ಬರೀ ಕೆಮ್ಮು ನೆಗಡಿ ಎಂದು ತಾತ್ಸಾರ ಮನೊಭಾವದಿಂದ ಚಿಕಿತ್ಸೆ ಪಡೆಯದೆ ಹಾಗೆ ಉಳಿಯುತ್ತಿದ್ದಾರೆ. ನಂತರ ಅವರು ಅನಾರೋಗ್ಯಕ್ಕೆ ತುತ್ತಾದಾಗ ಆಸ್ಪತ್ರೆಗೆ ದಾಖಲಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಉಳಿಸಿಕೊಳ್ಳಲು ಆಗುವುದಿಲ್ಲ ಮತ್ತು ಈ ಲಸಿಕೆ ಹಾಕಿಸಿ ಕೊಳ್ಳುವುದರಿಂದ ಯಾರಿಗೂ ಅಡ್ಡ ಪರಿಣಾಮಗಳು ಇರುವುದಿಲ್ಲ.” ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾಕ್ಟರ ಶಿವನಗೌಡಾ ಹಾಗೂ ಅನವರ ಬೆಟಗೇರಿ ಮಾತನಾಡಿದರು.

ಶ್ರೀಕಾಂತ ಕಾಂಬಳೆಕರ.ವಸೀಮ ಮುಲ್ಲಾ.ಜಮೀಲ ಲಕ್ಷ್ಮೇಶ್ವರ.ಶಾಜಾನ ಸಂಗೊಳ್ಳಿ. ಅಶೊಕ ಮುರಗೊಡ. ಮುಸ್ಲಿಂ ಯಂಗ್ ಕಮಿಟಿಯ ಸದಸ್ಯರು ಮತ್ತು ಮುಸ್ಲಿಂ ಸಮಾಜದ ಮುಖಂಡರು ವೇದಿಕೆ ಮೇಲೆ ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group