ಹುನಗುಂದ:- ತಾಲೂಕಿನ ತಿಮ್ಮಾಪೂರ ಗ್ರಾಮದ ಆರಾಧ್ಯ ದೇವರುಗಳಾದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ಹಾಗೂ ಗ್ರಾಮ ದೇವತೆಗಳಿಗೆ ನೀರು ಎರೆಯುವದರೊಂದಿಗೆ ದಿ ೧೪ ರಂದು ಶನಿವಾರ ಜಾತ್ರೆಗೆ ಚಾಲನೆ ನೀಡಲಾಯಿತು.
ನೀರು ಎರೆಯುವ ಕಾರ್ಯಕ್ರಮ ದಲ್ಲಿ ಮಾರುತೇಶ್ವರ ದೇವರ ಅರ್ಚಕರಾದ ಕನಕಪ್ಪ ಪೂಜಾರಿ ಮತ್ತು ಸಂಜೀವಪ್ಪ ಪೂಜಾರಿ ಬಸವಣ್ಣ ದೇವರ ಅರ್ಚಕ ಶರಣಯ್ಯ ಹಿರೇಮಠ, ಗ್ರಾಮದ ಹಿರಿಯರಾದ ಗಿರೀಶಗೌಡ ದಾದ್ಮಿ ಯುವಕರಾದ ಸಂಕೇತ ಹೆರಕಲ್ಲ, ರವಿ ಬೇರಗಿ, ಸಂತೋಷ ಹಳ್ಳೂರ ಗಣೇಶ ನಾಗನೂರ, ಸುಪ್ರಿತ್ ಪಾಟೀಲ(ನಾರಾಯಣಗೌಡರ) ಅಮರೇಶ, ಮುದಕನಗೌಡ ಬೆಳ್ಳಿಹಾಳ, ಮಹಾಂತೇಶ ಕೆಂಚನಗೌಡರ, ಬಸವರಾಜ ಮೂಲಿಮನಿ, ಬಸವರಾಜ.ಬ.ಹಳ್ಳೂರ ಪ್ರಜ್ವಲ ಮಡಿವಾಳರ, ಬಸವರಾಜ ಹೂನೂರ, ಪ್ರಸನ್ನ ಹೆರಕಲ್ಲ ಆದೇಶ ವಂದಾಲ, ಪ್ರವೀಣ ಹಾದಿಮನಿ, ಬಸವರಾಜ ಬಡಿಗೇರ, ರಮೇಶ ಹಕ್ಕರಕಾಳ, ಸಾಗರ ಪತ್ತಾರ, ಕಾರ್ತಿಕ ಶರಣಬಸವರಾಜ, ರಂಗನಗೌಡರ, ವೆಂಕಟೇಶ ಮಾಲಿ ಪಾಟೀಲ, ಶ್ರೀ ಶೈಲ, ರಾಜು ಮಡಿವಾಳರ, ಸಜ್ಜನ ಕೆಂಚನಗೌಡರ ಅಶೋಕ ಮಣಿನಾಗರ, ಮುತ್ತು ಹಾದಿಮನಿ ಇತರರು ಭಾಗವಹಿಸಿದರು.
ಜಾತ್ರೆಗೆ ತಯಾರಿ:- ನೀರು ಎರೆಯುವದರೊಂದಿಗೆ ಪ್ರಾರಂಭಗೊ೦ಡ ನಂತರ ಪೂಜಾರಿಗಳು ಮಡಿಯಿಂದ ಬರಿಗಾಲಿನಲ್ಲಿ ನಡೆದಾಡುತ್ತಾರೆ. ಹಾಗೂ ಮಾರುತೇಶ್ವರ ಗೋಪಾಳದೊಂದಿಗೆ ತಿಮ್ಮಾಪೂರ, ಕಿರಸೂರ ಹಡಗಲಿ ಸೇರಿದಂತೆ ನಮ್ಮ ಗ್ರಾಮದವರು ವಿವಿಧ ರಾಜ್ಯ ಜಿಲ್ಲೆ ಹಾಗೂ ವಿವಿಧ ತಾಲೂಕಿನಲ್ಲಿ ನೆಲೆಸಿರುವ ಸ್ಥಳಗಳಿಗೆ ತರಳಿ ಅಲ್ಲಿ ಶಂಖನಾದವನ್ನು ಮಾಡಿ ದವಸಧಾನ್ಯ ಹಾಗೂ ದೇಣಿಗೆ ಸಂಗ್ರಹಿಸುತ್ತಾರೆ ಹಾಗೂ ಗ್ರಾಮದ ದೈವ ಮಂಡಳಿಯು ದೇವಾಲಯಗಳಿಗೆ ಸುಣ್ಣ ಬಣ್ಣ ಸಿಂಗರಿಸುವುದು ಜಾತ್ರೆಗೆ ಬೇಕಾಗುವ ಸಾಮಾಗ್ರಿಗಳನ್ನು ಖರೀದಿ ಮಾಡುತ್ತಾರೆ ಬರುವ ದಿನಾಂಕ ೨೧ ರಂದು ಶನಿವಾರ ಪ್ರಾರಂಭಗೊಂಡು ಅಂದು ಹೊಳಗೆ ಹೋಗುವ ಕಾರ್ಯಕ್ರಮ, ೨೨ ರಂದು ರವಿವಾರ ರಂದು ಅಭಿಷೇಕ, ಪಲ್ಲಕ್ಕಿ ಉತ್ಸವ, ಹತಾರ ಸೇವೆ, ಸುತ್ತಗಾಯಿ ಒಡೆಯುವ ಕಾರ್ಯ ಮತ್ತು ಹಡಗಲಿ ತಿಮ್ಮಾಪೂರ ಗ್ರಾಮದಲ್ಲಿ ಹೇಳಿಕೆಗಳು ಜರುಗಲಿದೆ. ದಿ.೨೩ ರಂದು ಬಸವೇಶ್ವರನಿಗೆ ರುದ್ರಾಭಿಷೇಕ, ಉಚ್ಚಾಯ ಎಳೆಯುದರ ನಂತರ ಮಹಾ ರಥೋತ್ಸವ ಜರುಗಿದೆ.