spot_img
spot_img

ನವೆಂಬರ ೪ ರಂದು ಮೂಡಲಗಿ ತಾಲೂಕಾ ಪ್ರಾದೇಶಿಕ ಪತ್ರಕರ್ತರ ಸಂಘದ ನೂತನ ಕಚೇರಿ ಉದ್ಘಾಟನೆ

Must Read

ಮೂಡಲಗಿ:-ಪಟ್ಟಣದ ಮೂಡಲಗಿ ತಾಲೂಕಾ ಪ್ರಾದೇಶಿಕ ಪತ್ರಕರ್ತರ ಸಂಘದ ನೂತನ ಕಾರ್ಯಾಲಯ ಉದ್ಘಾಟನೆಯು ದೀಪಾವಳಿ ಹಬ್ಬದ ನಿಮಿತ್ತ ಶ್ರೀ ಮಹಾಲಕ್ಷ್ಮೀ ಹಾಗೂ ಶ್ರೀ ಮಹಾಸರಸ್ವತಿ ಪೂಜೆಯೊಂದಿಗೆ  ಸೋಮವಾರ ದಿನಾಂಕ- ೪ ರಂದು ಮುಂಜಾನೆ ೧೦.೩೫ ಕ್ಕೆ ನಡೆಯಲಿದೆ.
    ಪತ್ರಿಕಾ ಕಾರ್ಯಾಲಯವು ಪಟ್ಟಣದ ಪೋಲಿಸ್ ಠಾಣೆಯ ಎದುರಿಗೆ, ಡಾ.ಹೊಂಗಲ ದವಾಖಾನೆ, ಎಲುಬು ಮತ್ತು ಕೀಲು ಆಸ್ಪತ್ರೆ ಪಕ್ಕ, ಆಯ್.ಡಿ.ಎಫ್.ಸಿ ಬ್ಯಾಂಕಿನ ಮೇಲಿನ ಮಹಡಿಯಲ್ಲಿ ಪತ್ರಿಕೆ ಕಛೇರಿ ಇದೆ ಎಂದು ತಾಲೂಕಾ ಪ್ರಾದೇಶಿಕ ಪತ್ರಕರ್ತರ ಸಂಘದವರು ತಿಳಿಸಿದ್ದಾರೆ.
    ಉದ್ಘಾಟನೆಯನ್ನು ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ನೆರವೇರಿಸಲ್ಲಿದ್ದಾರೆ. ಮೂಡಲಗಿಯ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ  ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿ ಮತ್ತು ಶ್ರೀ ಶ್ರೀಧರಬೋಧ ಸ್ವಾಮಿಜಿ ಹಾಗೂ ಅಡವಿಸಿದ್ದರಾಮ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗುತ್ತಿರುವ ಸಮಾರಂಭದಲ್ಲಿ, ವಿಶೇಷ ಆಮಂತ್ರಿತರಾಗಿ ಸಂಸದರು, ಜನಪ್ರತಿನಿಧಿಗಳು,  ಮುಖಂಡರು, ಗಣ್ಯರು, ತಾಲೂಕಾಧಿಕಾರಿಗಳು,  ಪುರಸಭೆ  ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಹಾಗೂ ಮುಖ್ಯಾಧಿಕಾರಿ, ಸಿಬ್ಬಂದಿಗಳು,ತಾಲೂಕಿನ ಸಹಕಾರ ಸಂಘ ಸಂಸ್ಥೆಗಳ ಮುಖಂಡರು, ಸಾಹಿತಿಗಳು, ಕನ್ನಡಪರ ಸಂಘಟನೆಗಳು, ಆತ್ಮೀಯ ಪತ್ರಿಕಾ ಮಿತ್ರರು ಮತ್ತು ಸಾರ್ವಜನಿಕರು ಆಗಮಿಸುವರು.
ನೂತನ ಪತ್ರಿಕಾ ಕಾರ್ಯಾಲಯ ಉದ್ಘಾಟನೆ ಹಾಗೂ ದೀಪಾವಳಿ ಹಬ್ಬದ ನಿಮಿತ್ತ ಶ್ರೀ ಮಹಾಲಕ್ಷ್ಮೀ ಹಾಗೂ ಶ್ರೀಮಹಾಸರಸ್ವತಿ ಪೂಜಾ ಸಮಾರಂಭಕ್ಕೆ ಇದೇ ಆಮಂತ್ರಣ ಪತ್ರಿಕೆ ಎಂದು ತಿಳಿದು ಎಲ್ಲರೂ ಆಗಮಿಸಿ ಈ ಕಾರ್ಯಕ್ರಮಕ್ಕೆ ಶೋಭೆ ತರಬೇಕೆಂದು ಮೂಡಲಗಿ ತಾಲೂಕಾ ಪ್ರಾದೇಶಿಕ ಪತ್ರಕರ್ತರ ಸಂಘದ ವತಿಯಿಂದ ಕೋರಲಾಗಿದೆ.
- Advertisement -
- Advertisement -

Latest News

ಕೃತಿ ಪರಿಚಯ

ಕೃತಿ ಪರಿಚಯ: ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಲೇಖಕ : ಸಿ. ವೈ. ಮೆಣಸಿನಕಾಯಿ ಪ್ರಕಾಶಕರು: —ಶೀರಾಮ್ ಬುಕ್ ಸೆಂಟರ್ ಮಂಡ್ಯ “ಬೈಲಹೊಂಗಲ ನಾಡ ಚಂದ, ಗಂಗಾಳ ಮಾಟ ಚಂದ ಗಂಗೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group