spot_img
spot_img

ಜ.22 ರಂದು ಮೀನ್ಸ್ ಕಮ್ ಮೆರಿಟ್ ಸ್ಕಾಲರ್ ಶಿಪ್ ಪರೀಕ್ಷೆ

Must Read

- Advertisement -

ಮೂಡಲಗಿ: ಪ್ರಸಕ್ತ ಸಾಲಿನ ನ್ಯಾಶನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರಶಿಪ್ (ಎನ್‌ಎಮ್‌ಎಮ್‌ಎಸ್) ಸ್ಪರ್ಧಾತ್ಮಕ ಪರೀಕ್ಷೆಗಳು ಜ. ೨೨ ರವಿವಾರದಂದು ಪಟ್ಟಣದ ೧೬ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ.

ಪ್ರಥಮ ಪತ್ರಿಕೆ ಜಿ-ಮ್ಯಾಟ್ ಬೆಳಗ್ಗೆ ೧೦:೩೦ ರಿಂದ ೧೨:೦೦, ದ್ವಿತೀಯ ಪತ್ರಿಕೆ ಸ್ಯಾಟ್  ಪರೀಕ್ಷೆಯು ೨:೦೦ ರಿಂದ ೩:೩೦ ವರೆಗೆ ಜರುಗಲಿವೆ. 

ಒಟ್ಟು ೪೦೩೮ ವಿದ್ಯಾರ್ಥಿಗಳು ಪ್ರತಿಸಲದಂತೆ ಈ ಸಲವು ಮೂಡಲಗಿ ಶೈಕ್ಷಣಿಕ ವಲಯದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂದು ಬಿಇಒ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ವಿದ್ಯಾರ್ಥಿಗಳ ಭವಿಷ್ಯತ್ತಿಗೊಸ್ಕರ ಶಿಷ್ಯವೇತನಕ್ಕಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಾಗಿರುತ್ತವೆ. ಶೈಕ್ಷಣಿಕ ವಲಯದಲ್ಲಿ ಪರೀಕ್ಷೆಗಳು ಸುಗಮವಾಗಲು ರಾಜ್ಯ ಕಛೇರಿ ಮಾರ್ಗದರ್ಶನದಂತೆ ಮುಖ್ಯಅಧೀಕ್ಷಕರು, ಸ್ಥಾನಿಕ ಜಾಗೃತ ದಳ, ಮಾರ್ಗಾಧಿಕಾರಿ, ಪರೀಕ್ಷಾ ಸಿಬ್ಬಂದಿಗಳನ್ನು ನಿಯಮಿಸಲಾಗಿದೆ. ಪರೀಕ್ಷೆಗೆ ಸಂಬoಧಿಸಿದoತೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವ ಕುರಿತು ತರಬೇತಿ ಮತ್ತು ಸಭೆಗಳು ಜರುಗಿರುತ್ತವೆ.

ಶೈಕ್ಷಣಿಕ ವಲಯದಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸ್ಪಧಾತ್ಮಕ ಪರೀಕ್ಷಾ ತಯಾರಿ ಮಾಡಲಾಗಿದೆ. ಶಿಕ್ಷಕರಿಗೆ ಕಾರ್ಯಾಗಾರ, ಆಪ್ತಾಲೋಚನೆ, ವಾಟ್ಸಪ್ ಗ್ರುಫ್, ೫ ಅಣಕು ಪರೀಕ್ಷೆಗಳು, ತಾಲೂಕಾ ಹಂತದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ಅಣಕು ಪರೀಕ್ಷೆ ಮಾಡಲಾಗಿದೆ. ಪರೀಕ್ಷಾ ಉಸ್ತುವಾರಿ ಮಾಡಲು ಜಿಲ್ಲಾ ಹಂತದ ಅಧಿಕಾರಿಗಳು ಆಗಮಿಸುವರು.

ಪರೀಕ್ಷಾ ಸಮಯದಲ್ಲಿ ಯಾವುದೇ ವಿವಾದಗಳಿಗೆ ಆಸ್ಪದ ನೀಡದೆ ಪರೀಕ್ಷೆಗಳು ಸುಗಮ ರೀತಿಯಲ್ಲಿ ಜರುಗಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಭದ್ರತೆಯೊದಗಿಸಲಾಗಿದೆ.

- Advertisement -

ಪರೀಕ್ಷೆಯ ಕುರಿತು ಗೊಂದಲಗಳಿದ್ದರೆ ಪರೀಕ್ಷಾ ನೋಡಲ್ ಅಧಿಕಾರಿ ಸತೀಶ ಬಿ.ಎಸ್ ಮೊ. ೯೪೪೮೯೫೩೬೬೬ ಸಂಪರ್ಕಿಸಲು ಬಿಇಒ ಅಜಿತ ಮನ್ನಿಕೇರಿ ತಿಳಿಸಿದ್ದಾರೆ.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group