spot_img
spot_img

ಹನುಮ ಜಯಂತಿ ನಿಮಿತ್ತ ಹನುಮನ ಕಥೆ

Must Read

- Advertisement -

ತ್ರೇತಾ ಯುಗದಲ್ಲಿ ಒಂದು ಪಾದ ಮಾತ್ರ ಅಧರ್ಮವಿತ್ತು.  ಅದನ್ನೇ ಆಗಿನ ಕಾಲದ ಜನರಿಗೆ ತಡೆದುಕೊಳ್ಳಲು ಆಗುತ್ತಿರಲಿಲ್ಲ. ಏಕೆಂದರೆ ಮೂರು ಭಾಗ ಧರ್ಮ ವಿತ್ತು.  ಬ್ರಹ್ಮ, ರುದ್ರ ರನ್ನು ಕುರಿತು ತಪಸ್ಸು ಮಾಡಿಕೊಂಡು ರಾಕ್ಷಸರು ಅವಧ್ಯ ವರಗಳನ್ನು ಪಡೆದುಕೊಂಡಿದ್ದರು. ಈ ಕಾರಣದಿಂದ ಭೂಮಿಯು ಅಧರ್ಮಿ ರಾಕ್ಷಸರಿಂದ ಭಾರ ವಾಗಿದ್ದಳು.

ಈ ಸಮಸ್ಯೆಯನ್ನು ಬಗೆಹರಿಸಲು ಎಲ್ಲ ಋಷಿ ಮುನಿಗಳು ಬ್ರಹ್ಮ ದೇವರಿಗೆ ಪ್ರಾರ್ಥನೆ ಮಾಡಿಕೊಂಡರು. ಋಷಿಗಳು ಮಾಡುತ್ತಿದ್ದ ಯಜ್ನ ಯಾಗ ಗಳಿಗೆ ರಾಕ್ಷಸರಿಂದ ವಿಘ್ನಗಳು ಆಗುತ್ತಿದ್ದವು.

ಬ್ರಹ್ಮ ಸಕಲ ದೇವತೆಗಳು, ಋಷಿಗಳು ಸಜ್ಜನಪಾಲಕ ರಾಜರ್ಷಿಗಳೊಂದಿಗೆ ಶ್ರೀಹರಿಗೆ ಪ್ರಾರ್ಥನೆ ಮಾಡಿಕೊಂಡು, ಭೂಮಿಯಲ್ಲಿ ಧರ್ಮ ಸ್ಥಾಪಿಸಲು ಅವತರಿಸಬೇಕೆಂದು ಕೇಳಿಕೊಂಡರು. ಶ್ರೀ ಹರಿ ಒಪ್ಪಿ ದೇವರೆಗಳಿಗೂ ಅವತರಿಸಲು ಆಜ್ಞೆ ಮಾಡಿದನು.ಶ್ರೀ ಹರಿಯುವ ತನ್ನ ಪ್ರೀತಿಯ ಮಗನಾದ ವಾಯುದೇವರಿಗೆ ಅವತರಿಸಲು ಆಜ್ಞೆ ಮಾಡಿದನು. ವಾಯುವು ಎಲ್ಲಿ ಅವತರಿಸಬೇಕೆಂದು ವಿಚಾರಿಸಿದನು.

- Advertisement -

ದಕ್ಷಿಣ ಭಾರತದ ಕಿಷ್ಕಿಂಧೆ ರಾಜ್ಯ ಉತ್ತಮ ವೆನಿಸಿತು.  ಅಲ್ಲಿ ವಾನರ ರಾಜ್ಯವಿತ್ತು. ವಾನರ ರಾಜ ಕೇಸರಿ ಧರ್ಮ ಭೀರುವಾಗಿದ್ದನು. ವಾಯುವು ಅಲ್ಲಿ ಅವತರಿಸಲು ನಿರ್ಧರಿಸಿ ದೇವತೆಗಳಿಗೂ ವಾನರ ಯೋನಿಯಲ್ಲಿ ಹುಟ್ಟಲು ಹೇಳಿದನು. ಕಿಷ್ಕಿಂಧೆಯಲ್ಲಿ ರಾಜ ಕೇಸರಿ ಋಷಿ ಮುನಿಗಳ ತಪಸ್ಸಿಗೆ ಯಾವದೇ ಕ್ರೂರ ಪ್ರಾಣಿಗಳಿಂದ, ರಾಕ್ಷಸರಿಂದ ವಿಘ್ನ ಬರದಂತೆ ನೋಡಿಕೊಂಡಿದ್ದನು. ಋಷಿಗಳ ತಪಸ್ಸಿಗೆ ಮೂಕ ವಾತಾವರಣ ಸೃಷ್ಟಿ ಮಾಡಿದ್ದನು. ಆದ್ದರಿಂದ ಅಲ್ಲಿಯ ಪರ್ವತಕ್ಕೆ ಋಷ್ಯಮೂಕ ಪರ್ವತ ಎಂದು ಹೆಸರಾಯಿತು.

ಕೇಸರಿಗೆ ಸಕಲ ಧಾರ್ಮಿಕ ಕಾರ್ಯಗಳಲ್ಲಿ ಅನುಕೂಲ ವಾದ ಅಂಜನಾದೇವಿ ಎಂಬ ಪತ್ನಿಯಿದ್ದಳು. ಇವಳಿಗೆ ಅಂಜನಾ ಎಂಬ ಹೆಸರು ಬರಲು ಒಂದು ಸನ್ನಿವೇಶದ ಕಥೆಯು ಇದೆ.

ಅಂಜನೆಯು ಪೂರ್ವದಲ್ಲಿ ಕುಂಜಸ್ಥಲಿ ಎಂಬ ಅಪ್ಸರೆಯಾಗಿದ್ದಳು. ಅವಳು ವಾಯುದೇವರನ್ನು ಕುರಿತು ತಪಸ್ಸು ಮಾಡಿ ನಿನ್ನಂತಹ ಶಕ್ತಿಶಾಲಿ, ಭುದ್ಧಿವಂತ ಮಗ ಬೇಕೆಂದು ವರ ಬೇಡಿಕೊಂಡಿದ್ದಳು. ಈ ಅಪ್ಸರೆಯು ಬ್ರಹ್ಮರ್ಷಿ ಗೌತಮ ಅಹಲ್ಯೆಯರ ಮಗಳಾಗಿ ಹುಟ್ಟಿದಳು. ಒಂದು ದಿನ ಅಹಲ್ಯೆ ಗೌತಮರಿಗೆ ಹೇ ಪತಿದೇವಾ  ನೀವೇನೋ ಒಳ್ಳೆಯ ಜ್ಞಾನ ಸಂಪಾದಿಸಿದಿರಿ. ಆದರೆ ನನಗೆ ಅದರಲ್ಲಿಯ ಕಣಮಾತ್ರ ತಿಳಿಸಿದರೆ ತುಂಬಾ ಉಪಕಾರವಾಗುವದೆಂದು ಕೇಳಿಕೊಂಡಳು. ಗೌತಮರು ಜ್ಞಾನಿಯಾದ ದೇವೇಂದ್ರನನ್ನೇ ಪತ್ನಿಗಾಗಿ ಪಾಠಕ್ಕೆ ನಿಯಮಿಸಿದರು.

- Advertisement -

ಇಂದ್ರದೇವ ನಿತ್ಯ ಅಹಲ್ಯೆಗೆ ಅಧ್ಯಾತ್ಮ ತತ್ವ ಪಾಠ ಹೇಳುತ್ತಿದ್ದನು. ಹೀಗಿರಲಾಗಿ ಒಂದುದಿನ ಗೌತಮರು ಮಗಳಿಗೆ ನಿಮ್ಮ ಅಮ್ಮ ಏನೂ ಮಾಡುತ್ತಿರುವಳು ಎಂದು ಪ್ರಶ್ನಿಸಿದರು. ಮಗಳು ನಿಜ ಸಂಗತಿ ಹೇಳದೇ ಚೇಷ್ಟೆ ಮಾಡುತ್ತಾ ಇಂದ್ರನೊಡನೆ ಹರಟುತ್ತಿದ್ದಾಳೆ ಎಂದು ಹೇಳಿದಳು. 

ಈ ವಿಷಯ ಅಹಲ್ಯೆಗೆ ತಿಳಿದು ತುಸು ಕೋಪದಿಂದ ಮಗಳಿಗೆ ನೀನು ನನ್ನ ಮತ್ತು ಗೌತಮರ ನಡುವೆ ಸಂಶಯ ಬರುವಂತೆ ಚಾಡಿ ಹೇಳಿದ್ದರಿಂದ ನಿನ್ನ ಹೆಸರು ಅಂಜನೆ  ಎಂದು ಆಗಲಿ ಎಂದು ಹೇಳಿದಳು. ಅದಲ್ಲದೆ ನಿನ್ನ ಈ ಚಂಚಲ ಬುದ್ಧಿ ಪರಿಣಾಮವಾಗಿ ನೀನು ಚಂಚಲ ಸ್ವಭಾವದ ಕಪಿ ಯನ್ನು ವಿವಾಹವಾಗು ಎಂದಳು. ಇದರಿಂದ ಅಂಜನೆ ಮನಸ್ತಾಪ ಗೊಂಡು ತಾಯಿಗೆ ತಪ್ಪು ಒಪ್ಪಿಕೊಂಡಳು.

ಆಗ ಋಷಿಪತ್ನಿ ಅಹಲ್ಯೆ ಮಗಳ ಮೇಲೆ ಕೃಪೆತೋರಿ, ಮಗಳೇ ನಿನಗೆ ಜಗತ್ತಿಗೆ ಜ್ಞಾನ ಉಪದೇಶ ಮಾಡುವಂಥ ಜ್ಞಾನಿ ಮಗ ಹುಟ್ಟಲಿ ಎಂದು ಹರಿಸಿದಳು. ಅದೇ ಅಂಜನೆಯು ಕಪಿರಾಜ ಕೇಸರಿಯನ್ನು ಮದುವೆಯಾಗಿ ಆಗಿನ ಶೇಷಾಚಲದಲ್ಲಿ ತಪಸ್ಸು ಮಾಡಿದಳು. ಅಲ್ಲದೆ ಈ ಜನ್ಮದಲ್ಲಿಯೂ ವಾಯುದೇವರನ್ನು ಕುರಿತು ತಪಸ್ಸು ಮಾಡಿದಳು. ಪಯೋವೃತ ಮಾಡಿದಳು. 

ಇನ್ನು ಕೇಸರಿ ಈ ಮೊದಲೇ ಹೇಳಿದಂತೆ ಋಷಿಗಳಿಗೆ ಅವರ ತಪಸ್ಸಿಗೆ ವಿಘ್ನ ಬರದಂತೆ ಅವರ ಸೇವೆ ಮಾಡಿದನು. ಮತಂಗ ಋಷಿಗಳನ್ನು ಅವರ ತಪಸ್ಸಿಗೆ ವಿಘ್ನ ತರುತ್ತಿದ್ದ ದುಂದು  ಎಂಬ ಅಸುರನನ್ನು ಸಂಹರಿಸಿ ಋಷಿಗಳ ಪ್ರೀತಿಗೆ ಪಾತ್ರನಾದನು. ಋಷಿಗಳ ಆಶೀರ್ವಾದದಿಂದ ಮರುತ್  ದೇವತೆಗಳ ಆವೇಶ ಅವನಲ್ಲಿ ಆಯಿತು.

ಅಂಜನೆಯು ತಪಸ್ಸುಮಾಡಿದ ಪರ್ವತ ಅಂಜನಾಚಲವೆಂದು ಪ್ರಸಿದ್ಧವಾಯಿತು. ಪತಿ ಪತ್ನಿಯರಿಬ್ಬರ ತಪಸ್ಸು ಫಲಕಾರಿ ಆಯಿತು.  ವಾಯುದೇವರ ಆವೇಶ ಕೇಸರಿಯಲ್ಲಿ ವಿಶೇಷ ವಾಗಿದ್ದರಿಂದ ಅಂಜನೆಯು ಗರ್ಭವತಿಯಾದಳು. ಚೈತ್ರ ಶುದ್ಧ ಪೂರ್ಣಿಮೆ ದಿನ ಪ್ರಾತಃಕಾಲ ಸೂರ್ಯೋದಯಕ್ಕೆ ವಾಯು ದೇವರು ಅಂಜನೆಯ ಪುತ್ರನಾಗಿ ಗರ್ಭ ವಾಸವಿಲ್ಲದೆ ಅವತರಿಸಿದರು. ಹುಟ್ಟುತ್ತಲೇ  ಬಾಲರವಿಯನ್ನು ಕಿತ್ತಳೆ ಹಣ್ಣು ಎಂದು ಭಾವಿಸಿ ಸೂರ್ಯಮಂಡಲಕ್ಕೆ ಹಾರಿದ ಆಂಜನೇಯನಿಗೆ ಜಯಕಾರ ಹೇಳೋಣ. 

ಗಲಗಲಿ ಮುದ್ಗಲಾಚಾರ್ಯರ ವಾಯುಸ್ತುತಿ ವ್ಯಾಖ್ಯಾನ ದಲ್ಲಿ ಹನುಮಂತ ಶಬ್ದದಲ್ಲಿ ಹನೂ ಎಂದು ದೀರ್ಘ ಶಬ್ದ ಪ್ರಯೋಗ ವೇಕೆಂದರೆ ವಾಯುದೇವರಿಗೆ ಮೂಲ ರೂಪದಲ್ಲಿ ದೀರ್ಘ ಜ್ಞಾನ ವಿದೆ. ಆಯಾ ಜ್ಞಾನ ಅವರ ಅವತಾರಗಳಲ್ಲಿಯೂ ಇದೆ ಎಂದು ತಿಳಿದುಕೊಳ್ಳಬೇಕು.  ಆಂಜನೇಯ ಸೂರ್ಯಮಂಡಲಕ್ಕೆ ಹಾರಿದಾಗ ಇಂದ್ರ ತನ್ನ ಆಯುಧದಿಂದ ಆಂಜನೇಯನ ಮುಖಕ್ಕೆ ಹೊಡೆದಿದ್ದರಿಂದ ಆತನ ಗಲ್ಲ ಅಂದರೆ ಹನೂ ಉಬ್ಬಿತು. 

ಆದಕಾರಣ ಆಂಜನೇಯನಿಗೆ ಹನುಮಂತ ಎಂದು ನಾಮಕರಣ ಆಯಿತು. ಇಂತಹ ಹನುಮಂತನ ಅಂತರ್ಯಾಮಿ ವಾಯುವಿನ ಅಂತರ್ಯಾಮಿ ರಾಮ ಭಿನ್ನಾ ಭಿನ್ನ ನರಸಿಂಹ, ಹಯಗ್ರೀವ ದೇವರು ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಸಲಹಲಿ ಎಂದು ಪ್ರಾರ್ಥಿಸುವೆ.

- Advertisement -
- Advertisement -

Latest News

ರೈತ ಆತ್ಮಹತ್ಯೆ ; ಶಾಸಕರ ಸಾಂತ್ವನ

ಸಿಂದಗಿ; ಸಾಲದ ಬಾಧೆಗೆ ಆತ್ಮಹತ್ಯೆ ಪರಿವಾರವಲ್ಲ. ಕಾಲದ ವೈಪರೀತ್ಯದಿಂದ ಮಳೆಯಾಗದೇ ಇಂತಹ ದುಸ್ತರ ಪರಿಸ್ಥಿತಿ ಬಂದೊದಗಿದ್ದು ರೈತರ ಕಷ್ಟಗಳಿಗೆ ಸರಕಾರ ಸ್ಪಂದಿಸುತ್ತದೆ ಅಲ್ಲದೆ ನಿಮ್ಮ ಕಷ್ಟಕ್ಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group