spot_img
spot_img

ಪತ್ರಕರ್ತರಿಗೆ ಸಾಮಾಜಿಕ ಜಾಲತಾಣಗಳಲ್ಲಿನ ಅನುಕೂಲಕ್ಕಿಂತ ಸವಾಲುಗಳೇ ಹೆಚ್ಚು- ಸುದರ್ಶನ್ ಚೆನ್ನಂಗಿಹಳ್ಳಿ

Must Read

spot_img
- Advertisement -

ತುಮಕೂರು: ಪತ್ರಿಕೋದ್ಯಮ ಇಂದು ತಾಂತ್ರಿಕವಾಗಿ ಬಹಳಷ್ಟು ಅಭಿವೃದ್ಧಿಹೊಂದಿದ್ದು ಪತ್ರಕರ್ತರಿಗೆ ಸಾಮಾಜಿಕ ಜಾಲತಾಣದಲ್ಲಿನ ಅನುಕೂಲಗಳಿಗಿಂತ ಸವಾಲುಗಳು ಹೆಚ್ಚಾಗಿವೆ ಎಂದು ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ ಅವರು ತಿಳಿಸಿದರು.

ತುಮಕೂರು ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಎರಡು ದಿನಗಳ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ೩೯ನೇ ಸಮ್ಮೇಳನದ ಸಾಮಾಜಿಕ ಜಾಲತಾಣ ಮತ್ತು ಪತ್ರಕರ್ತರ ಸವಾಲುಗಳು ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದವರು ನಮ್ಮ ಮೊಬೈಲ್ಗಳಲ್ಲಿ ಒಂದು ಆಪ್ ಹೇಗೆ ಅಪ್ಡೇಟ್ ಆಗುತ್ತದೆಯೋ ಅದೇ ರೀತಿಯಾಗಿ ತಾಂತ್ರಿಕವಾಗಿ ಇಂದಿನ ಪತ್ರಕರ್ತರು ಬದಲಾವಣೆ ಕಾಣಬೇಕಿದೆ ಪೆನ್ನಿನಲ್ಲಿ ಬರೆಯುವ ಅನೇಕ ಪತ್ರಕರ್ತರು ಇಂದಿನ ಡಿಜಿಟಲ್ ಮಾಧ್ಯಮಕ್ಕೆ ಅನಿವಾರ್ಯವಾಗಿ ಹೊಂದಿಕೊಂಡಿದ್ದಾರೆ ಅದೇ ರೀತಿಯಲ್ಲಿ ಸರ್ಕಾರಿ ಕಚೇರಿಯಲ್ಲಿ ತಾಂತ್ರಿಕ ವ್ಯವಸ್ಥೆಗಳು ಜಾರಿಯಲ್ಲಿವೆ ಹಾಗೆಯೇ ಇಂದಿನ ಪತ್ರಕರ್ತರು ನವಮಾಧ್ಯಮದ ಅಂತರ್ಯಗಳನ್ನ ಅರಿತುಕೊಂಡು ಪತ್ರಿಕೋದ್ಯಮವನ್ನು ಮುನ್ನಡೆಸಬೇಕು ಎಂದು ತಿಳಿಸಿದರು.

ಇಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಏ ಐ) ನಮ್ಮ ಪತ್ರಕರ್ತರ ಕಾರ್ಯವೈಖರಿಗಳನ್ನು ಕಸಿದುಕೊಂಡಿದ್ದು ಅನ್ಯ ಭಾಷೆಗಳ ಅಕ್ಷರಗಳನ್ನು ಲೀಲಾಜಾಲವಾಗಿ ಕನ್ನಡಕ್ಕೆ ತರ್ಜುಮೆ ಮಾಡುವ ಸರಳವಾದ ವಿಧಾನವನ್ನು ಕಂಡುಕೊಂಡಿದೆ ಆದರೆ ಇದರಲ್ಲಿನ ಕೆಲ ತಾಂತ್ರಿಕ ದೋಷಗಳನ್ನು ಬದಲಾಯಿಸಿಕೊಳ್ಳಬೇಕು ಆದರೆ ತಾಂತ್ರಿಕತೆ ನಮ್ಮ ಕೆಲಸವನ್ನ ಕಸಿದುಕೊಂಡಿಲ್ಲ ಬದಲಾಗಿ ಬದಲಾವಣೆಯನ್ನು ಕಂಡುಕೊಳ್ಳುವ ಮಾರ್ಗವನ್ನು ತಿಳಿಸಿದೆ ಆದರೆ ಇದರ ಅನುಕೂಲ ಪಡೆಯುವ ಜೊತೆಗೆ ಇದರಲ್ಲಿ ಉಂಟಾಗುವ ಅಪಾಯಗಳನ್ನು ಅರಿಯಬೇಕು ಎಂದು ತಿಳಿಸಿದರು.

- Advertisement -

ಸುವರ್ಣ ಟಿ.ವಿ.ಸಂಪಾದಕ ಅಜಿತ್ ಹನುಮಕ್ಕನವರ್ ಮಾತನಾಡಿ, ಬದಲಾವಣೆ ಶಾಶ್ವತ ವಾಗಿರುತ್ತದೆ ಪತ್ರಿಕೋದ್ಯಮ ಜರ್ನಿ ಖಾಸಗಿಯಲ್ಲ ಹಾಗಾಗಿ ಇಂದಿನ ಬದಲಾವಣೆಯು ಹಾಗೆನೆ ಪತ್ರಕರ್ತರು ಪತ್ರಿಕೋದ್ಯಮ ಬಿಟ್ಟು ಬದಲಾದ ಕಾಲಘಟಕ್ಕೆ ಹೊಂದಿಕೊಂಡಿದ್ದಾರೆ ನಾನು ಪತ್ರಕರ್ತನಾಗಲು ಹಲವು ಸಾಹಸ ಮಾಡಿದ್ದೆ ದೊಡ್ಡ ಪತ್ರಕರ್ತನಾಗಿ ಬೆಳೆಯಬೇಕೆಂಬ ಹಂಬಲ ಇಂದಿನ ಸ್ಮಾರ್ಟ್ ಫೋನ್ ಸೋಷಿಯಲ್ ಮೀಡಿಯಾ ಇನ್ನೂ ಬದಲಾವಣೆ ಕಾಣಲಿದ್ದು ತಾಂತ್ರಿಕವಾಗಿ ಹಲವು ಬದಲಾವಣೆ ಬರಲಿದೆ ಬದಲಾವಣೆ ವೇಗ ಹೆಚ್ಚಿದೆ ಮಾಧ್ಯಮ ಕ್ಷೇತ್ರದಲ್ಲಿ ಹಲವು ಮಹತ್ತರವಾದ ಬದಲಾವಣೆ ಕಾಣುತ್ತೇವೆ, ಇಂದಿನ ಯುವ ಸಮೂಹ ರಿಲ್ಸ್ ಹುಚ್ಚಿಗೆ ಬಿದ್ದು ಅವರದೆ ಮಾಧ್ಯಮ ಸೃಷ್ಟಿಸಲು ಹೊರಟಿದೆ ಈ ರೀತಿಯಲ್ಲಿ ಮಾಧ್ಯಮ ಕವಲುದಾರಿಯಲ್ಲಿದೆ ಹೀಗಾಗಿ ಬದಲಾವಣೆ ಅತಿ ಮುಖ್ಯವಾಗಿದೆ ಎಂದರು.

ಗೌರಿ ಅಕ್ಕಿ ಮಾತನಾಡಿ ಪತ್ರಿಕೋದ್ಯಮ ಸಾಮಾಜಿಕ ಜಾಲತಾಣ ಸಂಕ್ರಮಣ ಸ್ಥಿತಿಯಲ್ಲಿದೆ ಕಾಲದಿಂದ ಕಾಲಕ್ಕೆ ಹೊಸದಾದ ಬದಲಾವಣೆ ಕಾಣುವಹಾಗೆ ಮಾಧ್ಯಮ ಕ್ಷೇತ್ರದಲ್ಲಿ ಹಲವು ಬದಲಾವಣೆಯಾಗಿದೆ ಪ್ರಸ್ತುತದಲ್ಲಿ ಮಾಧ್ಯಮದಲ್ಲಿ ಓದುಗನಿಗೆ ಕೇಳುಗನಿಗೆ ಅವನ ಆಯ್ಕೆ ಸ್ವಾತಂತ್ರ‍್ಯ ಕ್ಕೆ ಧಕ್ಕೆಯಾಗದ ಹಾಗೆ ನಡೆದು ಕೊಳ್ಳಬೇಕು ಏಕೆಂದರೆ ಅವನು ಸರ್ವಸ್ವಾತಂತ್ರ‍್ಯ ಹೊಂದಿದ್ದಾನೆ ಹಾಗಾಗಿ ಇಂದಿನ ಸಾಮಾಜಿಕ ಜಾಲತಾಣ ಪತ್ರಕರ್ತರ ಒಳಿತಿಗೆ ಸುದೀರ್ಘವಾದ ಆಲೋಚನೆ ಮಾಡಬೇಕು ಇಂದಿನ ಪತ್ರಿಕೆಗಳು ಡಿಜಿಟಲ್ ವಲಯಕ್ಕೆ ಅರ್ನಿವಾಯವಾಗಿ ಬಳಸಬೇಕು ಇದ್ದರಿಂದ ಲಾಭ ಕೂಡಾ ಇದೆ ಇತಂಹ ನಿಟ್ಟಿನಲ್ಲಿ ಇದರ ಬಗ್ಗೆ ಚರ್ಚಿಸಲು ಇಂತಹ ಸಮ್ಮೇಳನದ ಗೋಷ್ಠಿಗಳು ಅವಶ್ಯಕ, ಸಾಮಾಜಿಕ ಜಾಲತಾಣವನ್ನು ಪತ್ರಕರ್ತರ ತುಂಬಾ ಮುಖ್ಯವಾಗಿದ್ದು ವೆಬ್, ಯೂಟ್ಯೂಬ್‌ನ ವಿಶ್ವಾಸಾರ್ಹತೆ ಸುದ್ದಿ ನೀಡಿ ಓದುಗರನ್ನ ನೋಡುಗರನ್ನ ಸೆಳೆಯಬಹುದು, ಯಾವುದೇ ವಿಡಿಯೋ ಸುದ್ದಿ ಮಹತ್ವದಾಗಿದ್ದರೆ, ಅದನ್ನ ಸಾಮಾಜಿಕ ಜಾಲತಾಣ ಹಾಕಿ ಗಮನ ಸೆಳೆಸಲು ಧಮ್ ಬೇಕಿದೆ ಇದನ್ನ ಬಳಸುವಲ್ಲಿ ಸಾಕಷ್ಟು ಸುಧಾರಣೆ ಬೇಕಿದೆ ಹಾಗಾಗಿ ಇದರ ಸದ್ಬಳಕೆ ಬಗ್ಗೆ ಸಾಕಷ್ಟು ಚರ್ಚೆಗಳು ಬೇಕು ಇವುಗಳು ಬೇಕಾದಲ್ಲಿ ನಾವು ತುಂಬಾ ಬದಲಾವಣೆ ಬೇಕು ಪ್ರತಿದಿನದ ಹೊಸತನಕ್ಕೆ ಸಾಮಾಜಿಕ ಜಾಲತಾಣ ಬದಲಾವಣೆಗೆ ನಾವು ಪ್ರಸ್ತುತದಲ್ಲಿ ಬದಲಾಗಬೇಕಾಗುತ್ತದೆ, ಸುಧಾರಿಸಿದ ತಾಂತ್ರಿಕ ವ್ಯವಸ್ಥೆ ಗೆ ನಾವು ಬದಲಾಗಬೇಕಿದೆ ಎಂದು ತಿಳಿಸಿದರು.

ಗೋಷ್ಠಿಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಮಾತನಾಡಿ ನನ್ನ ಹತ್ತು ವರ್ಷದ ಎಲೆಕ್ಟ್ರಾನಿಕ್ ಮೀಡಿಯಾ ಅನುಭದ ಸಾರವೇನೆಂದರೆ ಪತ್ರಿಕೋದ್ಯಮ ಕವಲು ದಾರಿಯಲ್ಲಿದೆ ಇದಕ್ಕೆ ಪರಿಹಾರಗಳು ಬೇಕಿದೆ,ಇಂತಹ ಸಮಾವೇಶ ಅವಶ್ಯಕ ವಾಗಿದ್ದು ಚರ್ಚೆಗಳು ನಡೆಯ ಬೇಕಿದೆ, ತಾಂತ್ರಿಕ ವ್ಯವಸ್ಥೆ ಪತ್ರಕರ್ತರನ್ನ ಇಕ್ಕಟಿಗೆ ಸಿಲುಕಿಸಿದೆ, ದಾವಂತದ ಸುದ್ದಿ ಕಡಿಮೆಯಾಗಬೇಕಿದೆ, ಸಣ್ಣ ಪತ್ರಿಕೆಗಳ ಉಳಿಸುವ ಹೊಣೆಗಾರಿಕೆ ಕಾ.ನಿ.ಪ.ಸಂಘದ ಮೇಲಿದೆ, ಮುದ್ರಣ ಮಾಧ್ಯಮ ಅವನತ್ತಿಯತ್ತ ಹೊಗುತ್ತಿದೆ ಎಂಬ ಮಾತನ್ನ ಸುಳ್ಳು ಮಾಡುವ ಹೊಣೆಗಾರಿಕೆ ನಮ್ಮ ಮೇಲಿದ್ದು ತಾಂತ್ರಿಕವಾಗಿ ಬೆಳೆದ ಪತ್ರಿಕೋದ್ಯಮದಲ್ಲಿ ನೈಪುಣ್ಯತೆ ಬೇಕಿದೆ, ಸಾಮಾಜಿಕ ಜಾಲತಾಣ ಪತ್ರಕರ್ತರಿಗೆ ಸವಾಲಾಗಿದೆ, ನಾಗರಿಕ ಪತ್ರಿಕೋದ್ಯಮಕ್ಕೆ ಇಂದಿನ ಪತ್ರಕರ್ತರು ಒಗ್ಗಿಕೊಳ್ಳಬೆಕಿದೆ ಎಂದು ತಿಳಿಸಿದರು.

- Advertisement -

ಈ ಗೋಷ್ಠಿಯಲ್ಲಿ ಕಸ್ತೂರಿ ಸಂಪಾದಕರಾದ ದಾವಣಗೆರೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಣಸೋಗಿ, ರವಿಕುಮಾರ್ ಮಹೇಶಿ ಹರೀಶ್ ಆಚಾರ್ಯ ಉಮೇಶ್ ಭಟ್ ಚಿದಾನಂದ ಪಟೇಲ್ ಮಹಾಂತೇಶ್ ಸೇರಿದಂತೆ ಕಾ.ನಿ.ಪ.ದ ರಾಜ್ಯಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಣದ ಬೇರು ಸಂಸ್ಕೃತಿಯಲ್ಲಿದೆ: ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು

ಅಥರ್ವ ಕಾಲೇಜಿನ ಮಹಾಪರ್ವ ಕಾರ್ಯಕ್ರಮ ಮೂಡಲಗಿ: ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ನಾಗರಿಕ ಸಮಾಜದಲ್ಲಿ ಸುಸಂಸ್ಕೃತರನ್ನಾಗಿ ರೂಪಿಸಿದರೆ ಅವರು ಪಡೆದ ಶಿಕ್ಷಣದ ಮೌಲ್ಯವರ್ಧನೆಯಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ...
- Advertisement -

More Articles Like This

- Advertisement -
close
error: Content is protected !!
Join WhatsApp Group