spot_img
spot_img

ವಿದ್ಯೆ ಕಲಿಸಿದ ಗುರುಗಳಿಗೆ ಮೋಸ ಮಾಡಿದ್ರಂತೆ ಸಚಿವ ಪ್ರಭು ಚವ್ಹಾಣ

Must Read

spot_img

ಶಿಕ್ಷಣ ಸಚಿವರ ಸಮ್ಮುಖದಲ್ಲಿಯೇ ಚವ್ಹಾಣ ವಿರುದ್ಧ ಗಂಭೀರ ಆರೋಪ

ಬೀದರ – ಸಚಿವ ಪ್ರಭು ಚವ್ಹಾಣರ ತವರೂರು ಔರಾದ ನಲ್ಲಿ ಇವತ್ತು ಹಬ್ಬದ ವಾತಾವರಣ ..ಔರಾದ ಕ್ಷೇತ್ರದ ಆರು ಸಾವಿರ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸತ್ಕಾರ ನಡೆಯುತ್ತದೆ. ಶಿಕ್ಷಣ ಸಚಿವ ಬಿ ಸಿ ನಾಗೇಶ ಅವರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಚಿವ ಪ್ರಭು ಚವ್ಹಾಣ ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಏಕತಾ ಫೌಂಡೇಶನ್ ಮುಖ್ಯಸ್ಥ ರವಿ ಸ್ವಾಮಿ ಈ ಆರೋಪ ಮಾಡಿ ಕೋರ್ಟ್ ದಾಖಲೆ ಬಿಡುಗಡೆ ಮಾಡಿದ್ದಾರೆ.

ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ:

ಸಚಿವ ಪ್ರಭು ಚವ್ಹಾಣರಿಗೆ ಔರಾದ ನಲ್ಲಿ ಇವತು ಶಿಕ್ಷಕರ ದಿನಾಚರಣೆ ಮಾಡುವ ಯಾವುದೇ ಹಕ್ಕು ಇಲ್ಲ ಎಂದು ರವಿ ಸ್ವಾಮಿ ಸಚಿವ ಪ್ರಭು ಚವ್ಹಾಣ ವಿರುದ್ಧ ವಾಗ್ದಾಳಿ ನಡೆಸುತ್ತ ಮಾಧ್ಯಮದವರ ಮುಂದೆ ಹೇಳಿದ್ದಿಷ್ಟು ಪ್ರಭು ಚವ್ಹಾಣ 1999 ರಲ್ಲಿ ಒಂದು ಚೆಕ್ ನೀಡಿ ತನ್ನ ಗುರುಗಳ ಹತ್ತಿರ ಒಂದು ಲಕ್ಷ ರೂಪಾಯಿ ತೆಗೆದುಕೊಂಡಿದ್ದಾರೆ ಎಂದು ಮುಖ್ಯ ಗುರುಗಳ ಆರೋಪ ಮಾಡಿದ್ದು ಆ ಚೆಕ್ ಬೌನ್ಸ್ ಆಗಿ ಕೋರ್ಟ್ ನಲ್ಲಿ ದಾವೆ ನಡೆದಿದೆ.

ಮಹಾರಾಷ್ಟ್ರ ಬಿಲ್ಲೋಳಿ ನ್ಯಾಯಾಲಯದಲ್ಲಿ ವ್ಯಾಜ್ಯ ಸಂಖ್ಯೆ.scc 120/2000 ಇದ್ದು ಕೋರ್ಟು 29/07/2004 ರಂದು ತೀರ್ಪು ನೀಡಿದೆ..

ತಮಗೆ ಅಕ್ಷರ ಜ್ಞಾನ ನೀಡಿದ ಶಿಕ್ಷಕರಿಗೆ ಮೋಸ ಮಾಡಿರುವ ಚವ್ಹಾಣ ಭ್ರಷ್ಟಾಚಾರ ಮಾಡಿದ ದುಡ್ಡಿನಲ್ಲಿ ಇಂದು ಔರಾದ ನಲ್ಲಿ ಶಿಕ್ಷಕರ ದಿನಾಚರಣೆ ಮಾಡತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ಏಕತಾ ಫೌಂಡೇಶನ್ ಮುಖ್ಯಸ್ಥ ರವಿ ಸ್ವಾಮಿ ಮಾಡಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!