ಬೀದರ: ಮಗನ ಹುಟ್ಟು ಹಬ್ಬ ಆಚರಣೆ ನೆಪದಲ್ಲಿ ಗ್ರಾಮೀಣ ಭಾಗದ ಮುಗ್ಧ ಮಹಿಳೆಯರಿಗೆ ಆಮಿಷ ಒಡ್ಡಿ ಕುಕ್ಕರ್, ಸೀರೆ ಮತ್ತು ಲೋನ್ ಕೊಡುತ್ತೇ ವೆ ಎಂದು ಹೇಳಿ ಮುಗ್ಧ ಮಹಿಳೆಯರಿಗೆ ಆಹ್ವಾನ ನೀಡಿದ ಹುಮನಾಬಾದ ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ ಜಿಲ್ಲಾ ಸಹಕಾರ ಬ್ಯಾಂಕಿನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಬ್ಯಾಂಕ್ ರೆಡ್ಡಿ ಆರೋಪ ಮಾಡಿದ್ದಾರೆ.
ಅಲ್ಲದೆ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮುಗ್ಧ ಮಹಿಳೆಯರಿಗೆ ಸಿಕ್ಕ ಬಹುಮಾನ ಎಂತಹದು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಕುಕ್ಕರ್ ವಿತರಣೆ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ ಇಬ್ಬರ ಕಾಲುಗಳಿಗೆ ಜಖಂ ಉಂಟಾಗಿತ್ತು.
ಬಿಸಿಲು ನಾಡು ಬೀದರ್ ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರುತ್ತಿದ್ದಂತೆ ಚುನಾವಣೆಯ ಕಾವು ಜೋರಾಗ್ತಾ ಇದೆ. ಗ್ರಾಮೀಣ ಭಾಗದ ಮುಗ್ಧ ಮತದಾರ ಮಹಿಳೆಯರಿಗೆ ಕುಕ್ಕರ, ಸೀರೆ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಲೋನ್ ಕೊಡುವ ನೆಪದಲ್ಲಿ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲರು ಕಾರ್ಯಕ್ರಮವನ್ನು ಸರಿಯಾಗಿ ಆಯೋಜನೆ ಮಾಡದ ಕಾರಣ ಗದ್ದಲ ಉಂಟಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಗ್ಧ ಮಹಿಳೆಯರು ಮೂರ್ನಾಲ್ಕು ಕಿಲೋಮೀಟರ್ ದೂರದಿಂದ ಓಡೋಡಿ ಬಂದಿದ್ದ ಮಹಿಳೆಯರು ಕುಕ್ಕರ್ ಸಿಗದೇ ನಿರಾಶೆಯಾದ ಗ್ರಾಮೀಣ ಭಾಗದ ಮಹಿಳೆಯರು ವಾಪಸ್ ಕೂಡ ಹೋಗಬೇಕಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭದಲ್ಲಿ ಈ ರೀತಿಯಾಗಿ ಮಹಿಳೆಯರನ್ನು ಬಳಸಿಕೊಂಡು ಆಸೆ ಆಮಿಷಕ್ಕೆ ಒಳಪಡಿಸುತ್ತಿರುವ ಸ್ಥಳೀಯ ಶಾಸಕರ ವಿರುದ್ಧ ಆಮ್ ಆದ್ಮಿ ಪಕ್ಷದ ಮುಖಂಡ ಬ್ಯಾಂಕ್ ರೆಡ್ಡಿ, ಹುಮ್ನಾಬಾದ್ ಕಾಂಗ್ರೆಸ್ ಶಾಸಕ ರಾಜಶೇಖರ್ ಬಿ ಪಾಟೀಲ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ