ಕಾಲ್ತುಳಿತಕ್ಕೆ ಕಾರಣವಾದ ಕುಕ್ಕರ್ ಗಿಫ್ಟ್; ಇಬ್ಬರ ಕಾಲ್ಮುರಿತ

Must Read

ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ   ಮುಂಬರುವ 2023 ರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳ ‘ಗಿಫ್ಟ್ ಪಾಲಿಟಿಕ್ಸ್’ ಜೋರಾಗಿ ನಡೆಯುತ್ತಿದೆ. ಆದರೆ ಅದರಿಂದ ಕಾಲ್ತುಳಿತ ಉಂಟಾಗಿ ಇಬ್ಬರ ಕಾಲು ಮುರಿತಕ್ಕೆ ಕಾರಣವಾಗಿದೆ.

ಜಿಲ್ಲೆಯ ಹುಮ್ನಾಬಾದ್ ಕ್ಷೇತ್ರದ ಕಾಂಗ್ರೆಸ್​​​ ಶಾಸಕ ರಾಜಶೇಖರ್ ಪಾಟೀಲ್​​ ಅವರು ಮತದಾರರಿಗೆ ಗಿಫ್ಟ್ ಆಗಿ ಸೀರೆ, ಕುಕ್ಕರ್ ನೀಡುತ್ತಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಕುಕ್ಕರ್ ಪಡೆಯಲು ಮುಗಿ ಬಿದ್ದ ಮಹಿಳೆಯರು. ನನಗೆ ಕುಕ್ಕರ್ ಸಿಗಲಿಲ್ಲ ಅಂದರೆ ರಾಜಶೇಖರ ಪಾಟೀಲ ಅವರಿಗೆ ಓಟ ನಾ ಹಾಕೊಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು !

ಮಗನ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಮತ್ತು ಮಾತೃ ನಮನ ಕಾರ್ಯಕ್ರಮ ಹಮ್ಮಿಕೊಂಡಿರುವ ಹುಮನಬಾದ ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ. ಮಹಿಳೆಯರಿಗೆ ಕಾಣಿಕೆಯಾಗಿ ಕುಕ್ಕರ್ ಕೊಡಲು ಮುಂದಾದಾಗ ಪಡೆಯಲು ಮಹಿಳೆಯರು ನಾ ಮುಂದೆ ನಿ ಮುಂದೆ ಎಂದು ನೂಕು ನುಗ್ಗಲು ಸಂಭವಿಸಿದ್ದು ಈ ಸಂದರ್ಭದಲ್ಲಿ ಪೊಲೀಸ ಇಲಾಖೆಯ  ನಿರ್ಲಕ್ಷ್ಯವೂ ಈ ಘಟನೆ ನಡೆಯಲು ಕಾರಣವಾಯಿತೆನ್ನಲಾಗಿದೆ ಯಾಕೆಂದರೆ ಕುಕ್ಕರ್ ವಿತರಣೆ ಕಾರ್ಯಕ್ರಮದ ಬಗ್ಗೆ  ಪೊಲೀಸ ಇಲಾಖೆಗೆ ಮಾಹಿತಿಯೇ ಇರಲಿಲ್ಲವೆ ಎಂಬ ಪ್ರಶ್ನೆ ಏಳುತ್ತಿದ್ದು ಒಂದು ವೇಳೆ  ಪೊಲೀಸ ಇಲಾಖೆಗೆ ಮಾಹಿತಿ ಇದ್ದರೆ ಯಾಕೆ ನೂಕು ನುಗ್ಗಲು ಆಯಿತು ಎಂಬ ಪ್ರಶ್ನೆ ಏಳುತ್ತದೆ. 

ಮತದಾರರಿಗೆ ‘ಮಾತೃ ನಮನ’ ಕಾರ್ಯಕ್ರಮದಲ್ಲಿ ಗಿಫ್ಟ್ ಕೊಡುತ್ತಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಪುರುಷರು ಸೇರಿಕೊಂಡಿದ್ದರು. ಇದೇ ವೇಳೆ ಗಿಫ್ಟ್​ಗಾಗಿ ನೂಕುನುಗ್ಗಲು ಉಂಟಾಗಿ ಇಬ್ಬರು ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಮನಾಬಾದ್‌ನ ರಾಜೇಶ್ವರಿ ಮೈದಾನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ವೇಳೆ ಅವಘಡ ಸಂಭವಿಸಿದೆ.

ಈ ಕುರಿತು ಗಂಭೀರವಾಗಿ ಗಾಯಗೊಂಡ ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ. ಆ ಇಬ್ಬರಿಗೆ ಏನಾದರೂ ಆದರೆ ಅದಕ್ಕೆ ನಾನೇ ಜವಾಬ್ದಾರಿಯಾಗುತ್ತೇನೆ ಎಂದೂ ರಾಜಶೇಖರ ಪಾಟೀಲ ಹುಮನಬಾದ ಅವರು ಹೊಣೆ ಹೊತ್ತಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

Latest News

ತೆರಿಗೆಗಳ ಬಗ್ಗೆ ಎಲ್ಲರಲ್ಲಿ ಅರಿವು ಮುಖ್ಯ : ಪ್ರೊ. ಎಂ.ವಾಯ್. ಕಂಬಾರ

ಮೂಡಲಗಿ: ಸರಕು ಮತ್ತು ಸೇವಾ ತೆರಿಗೆ ಚೌಕಟ್ಟು ಭಾರತದಲ್ಲಿ ಜುಲೈ 1, 2017 ರಿಂದ ಜಾರಿಗೆ ಬಂದಿರುವ ಏಕರೂಪದ, ಗುರಿ-ಆಧಾರಿತ, ಪರೋಕ್ಷ ತೆರಿಗೆ ವ್ಯವಸ್ಥೆಯಾಗಿದೆ. ಇದು...

More Articles Like This

error: Content is protected !!
Join WhatsApp Group