spot_img
spot_img

ಮೂಡಲಗಿ-ಧರ್ಮಸ್ಥಳ ನೂತನ ಬಸ್ ಸೇವೆ ಆರಂಭ

Must Read

- Advertisement -

ಮೂಡಲಗಿ: ಮೂಡಲಗಿ ಹಾಗೂ ಸುತ್ತಮುತ್ತಲಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮೂಡಲಗಿ-ಧರ್ಮಸ್ಥಳ ಬಸ್ ಸೇವೆಗೆ ಮೂಡಲಗಿ ತಾಲೂಕಾ ಕಾನಿಪ ಸಂಘದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಸಾರಿಗೆ ಇಲಾಖೆಯ ಗೋಕಾಕ ಘಟಕದ ವ್ಯವಸ್ಥಾಪಕ ಅಪ್ಪಣ್ಣ  ಛಬ್ಬಿ ಮಾತನಾಡಿ, ಪ್ರತಿ ದಿನ ಮೂಡಲಗಿಯಿಂದ  ಮಧ್ಯಾಹ್ನ 3-15 ಗಂಟೆಗೆ ಮೂಡಲಗಿ ಹೊರಟು ಮುಂಜಾನೆ 6-30ಕ್ಕೆ ಧರ್ಮಸ್ಥಳ ತಲುಪಿ ಮರಳಿ ಮಧ್ಯಾಹ್ನ 3-15ಕ್ಕೆ ಧರ್ಮಸ್ಥಳ ದಿಂದ ಹೊರಟು ಮುಂಜಾನೆ 6 ಗಂಟೆಗೆ ಮೂಡಲಗಿ ತಲುಪಿ ಮರಳಿ ಗೋಕಾಕಕ್ಕೆ ಬಸ್ಸು ಹೋಗುವುದು. ಮೂಡಲಗಿ-ಧರ್ಮಸ್ಥಳ ಬಸ್ಸಿನ ಸೌಕರ್ಯ ಕಲ್ಪಿಸುವುದರಿಂದ ಮೂಡಲಗಿ ಪಟ್ಟಣದಿಂದ ಮುಂಜಾನೆಯ ಬಸ್ಸಿನ ಕೊರತೆಯನ್ನು ಹೊಗಲಾಡಿಸಲಾಗಿದ್ದು, ಈ ಬಸ್ಸಿನ ಸೌಲಭ್ಯವನ್ನು ಸಾರ್ವಜನಿಕರು  ಸದುಪಯೋಗ ಪಡಿಸಿಕೊಳ್ಳಬೇಕೆಂದರು.  

ಈ ಸಂದರ್ಭದಲ್ಲಿ ಸಾರ್ವಜನಿಕರು ಮೂಡಲಗಿಯಿಂದ ಮೈಸೂರ, ಬಾಗಲಕೋಟ, ಕೊಲ್ಹಾಪೂರ ಹಾಗೂ ವಿವಿಧ ನಗರಗಳಿಗೆ ಬಸ್ಸಿನ ಸೌಕರ್ಯಗಳನ್ನು ಒದಗಿಸಬೇಕೆಂದು ಸಾರಿಗೆ ಇಲಾಖೆಯ ಅಧಿಕಾರಿಗಳಲ್ಲಿ ಒತ್ತಾಯಿಸಿದರು.

- Advertisement -

ಈ ವೇಳೆಯಲ್ಲಿ ತಹಶೀಲ್ದಾರ ಶಿವಾನಂದ ಬಬಲಿ, ತಾ.ಪಂ ಇಒ ಎಫ್.ಜಿ.ಚಿನ್ನನ್ನವರ, ಬಿ.ಇ.ಒ ಅಜೀತ ಮನ್ನಿಕೇರಿ, ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ನಿರ್ದೇಶಕರ ರವೀಂದ್ರ ಸೋನವಾಲಕರ, ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ಅಬ್ದುಲ್ ಮಿರ್ಜಾನಾಯ್ಕ, ಮೂಡಲಗಿ ಬಸ್ ನಿಲ್ದಾಣಾಧಿಕಾರಿಗಳಾದ ಬಿ.ಬಿ.ದಂಡಾಪೂರ, ಶ್ರೀಶೈಲ ದೇಸಾರಟ್ಟಿ, ಇಲಾಖೆಯ ಸಿಬ್ಬಂದಿಗಳಾದ ಪ್ರಕಾಶ ಕಳಿಮನ್ನಿ, ಹನೀಪ ಡಾಂಗೆ ಮತ್ತು ಮೂಡಲಗಿ ಕಾನಿಪ ಘಟಕದ ಅಧ್ಯಕ್ಷ ಕೆ.ಬಿ.ಗಿರೆಣ್ಣವರ, ಸದಸ್ಯ ರಾಜು ಮಗದುಮ್, ಮತ್ತಿತರರು ಇದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group