spot_img
spot_img

ಮೂಡಲಗಿ ಪುರಸಭೆ ಅವ್ಯವಹಾರ; ಆರೋಪಿಸಿ ಸುಮ್ಮನಾದ ಸದಸ್ಯರು, ಉತ್ತರ ನೀಡದ ಅಧ್ಯಕ್ಷರು

Must Read

- Advertisement -

ಇವರ ತರ್ಕವೇ ತಿಳಿಯದ ನಾಗರಿಕರು ಗೊಂದಲದಲ್ಲಿ!

ಮೂಡಲಗಿ: ಇದೇ ದಿ. ೧೭ ರಂದು ಪುರಸಭಾ ಕಾರ್ಯಾಲಯದಲ್ಲಿ ನಡೆದ ಸದಸ್ಯರ ಸಭೆಯಲ್ಲಿ ೨೩ ವಾರ್ಡ್ ಸದಸ್ಯರ ಪೈಕಿ ಕೇವಲ ೮-೯ ಜನರು ಹಾಜರಿದ್ದದ್ದು ವ್ಯಾಪಕ ಟೀಕೆಗೆ ಒಳಗಾಗಿತ್ತು.

ಆ ಬಗ್ಗೆ ಪತ್ರಿಕೆಗಳಲ್ಲಿ ಬಂದಾಗ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದ ಪುರಸಭೆಯ ಅಧ್ಯಕ್ಷರು ಇನ್ನೂ ಸ್ಪಷ್ಟೀಕರಣ ನೀಡದೆ ಇರುವುದು ಹಲವು ಗುಮಾನಿಗಳಿಗೆ ಕಾರಣವಾಗಿದೆ.

- Advertisement -

ಕಳೆದ ಶುಕ್ರವಾರದಂದು ನಡೆದ ಸಭೆಗೆ ಹಾಜರಾಗದ ಕೆಲವು ಜೆಡಿಎಸ್ ಸದಸ್ಯರು ಹಾಗೂ ಕೆಲವು ಆಡಳಿತ ಪಕ್ಷದ ಸದಸ್ಯರು ಅಧ್ಯಕ್ಷರ ವಿರುದ್ಧ ನೇರ ಆರೋಪ ಮಾಡಿ ತಮಗೆ ತಿಳಿಸದೆ ಸಭೆ ನಡೆಸಲಾಗಿದೆ, ತಮ್ಮ ಬೇಡಿಕೆಗಳನ್ನು ಕಡೆಗಣಿಸಲಾಗಿದೆ ತಮ್ಮ ವಾರ್ಡ್ ಗಳಿಗೆ ಯಾವುದೇ ಕಾಮಗಾರಿಗೆ ಅನುದಾನ ನೀಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಪತ್ರಿಕೆಯೊಡನೆ ಮಾತನಾಡಿ ನೇರ ಆರೋಪ ಮಾಡಿದ್ದರು.

ಅಲ್ಲದೆ ಅಧ್ಯಕ್ಷ ಹನುಮಂತ ಗುಡ್ಲಮನಿಯವರ ವಿರುದ್ಧವೂ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಬಗ್ಗೆ ಪತ್ರಿಕೆಯು ಅಧ್ಯಕ್ಷರನ್ನು ಸಂಪರ್ಕಿಸಿದಾಗ, ಯಾರು ಏನೇ ಆರೋಪ ಮಾಡಿದರೂ ಅದಕ್ಕೆ ಸೂಕ್ತ ಸಾಕ್ಷ್ಯ ಒದಗಿಸಬೇಕು ಎಂದು ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಎಲ್ಲ ವಾರ್ಡ್ ಗಳಿಗೆ ನಾವು ಅನುದಾನ ನೀಡಿದ್ದೇವೆ ಎಂದು ಹೇಳಿದ್ದರು.

ಈ ಬಗ್ಗೆ ಲಿಖಿತ ಸ್ಪಷ್ಟೀಕರಣವನ್ನೂ ನೀಡುವುದಾಗಿ ಅವರು ಹೇಳಿದ್ದರು ಆದರೆ ಮತ್ತೊಂದು ಶುಕ್ರವಾರ ಬಂದರೂ ಅಧ್ಯಕ್ಷರ ಸ್ಪಷ್ಟೀಕರಣ ಬರಲೇ ಇಲ್ಲ. ಈ ಬಗ್ಗೆ ಜೆಡಿಎಸ್ ಸದಸ್ಯರು ಹೇಳುವುದೇನೆಂದರೆ ಅವರು ನುಡಿದಂತೆ ನಡೆದಿದ್ದರೆ ತಾನೆ ಸ್ಪಷ್ಟೀಕರಣ ಕೊಡುತ್ತಿದ್ದರು ಎಂಬ ಅಭಿಪ್ರಾಯ ಬರುತ್ತಿದೆ. ಅಷ್ಟೇ ಅಲ್ಲದೆ ಕೆಲವು ನಿವೇಶನ ಹಗರಣ ಕುರಿತಂತೆಯೂ ಸದಸ್ಯರು ಮಾತನಾಡುತ್ತಿದ್ದು ಅದಕ್ಕೆಲ್ಲ ನಮ್ಮಲ್ಲಿ ಪುರಾವೆಗಳಿವೆ ಪುರಾವೆ ಇಲ್ಲದೆ ನಾವು ಮಾತನಾಡುವುದಿಲ್ಲ ಆದರೆ ಅಧ್ಯಕ್ಷರು ಮಾತ್ರ ಯಾವುದಕ್ಕೂ ಗಮನಹರಿಸುತ್ತಿಲ್ಲ ಎನ್ನುತ್ತಾರೆ.

- Advertisement -

ಮೂಡಲಗಿ ಪುರಸಭೆ ಎನ್ನುವುದು ಭ್ರಷ್ಟಾಚಾರ, ಅವ್ಯವಹಾರದ ಗೂಡಾಗಿದ್ದು ಕೆದಕಿದಷ್ಟೂ ಹಗರಣಗಳು ಹೊರಬೀಳುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಸಾರ್ವಜನಿಕರ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಹಲವು ವರ್ಷಗಳಿಂದ ಇಲ್ಲಿಯೇ ಬೇರು ಬಿಟ್ಟಿರುವ ಅಧಿಕಾರಿಗಳಿಂದಾಗಿ ಸಾರ್ವಜನಿಕರಿಗೆ ಕಿಮ್ಮತ್ತು ಸಿಗುತ್ತಿಲ್ಲ. ಮುಖ್ಯಾಧಿಕಾರಿಗಳು ಒಂದೇ ಜಾಗದಲ್ಲಿ ಇರುವುದಿಲ್ಲ, ಅವರು ಇಲ್ಲದಾಗ ಸಾರ್ವಜನಿಕರನ್ನು ಕೇಳುವವರಿರುವುದಿಲ್ಲ. ಹೀಗೆ ಅನೇಕ ಆರೋಪಗಳಿಂದ ಪುರಸಭೆ ತುಂಬಿಕೊಂಡಿದೆ.

ಈ ಹಿಂದೆ ಲಕ಼್ಮೀ ನಗರದಲ್ಲಿನ ಪುಠಾಣಿ ಬಾವಿಯನ್ನು ಮುಚ್ಚುವ ವಿಷಯದಲ್ಲಿ ಸಾರ್ವಜನಿಕರು ಪುರಸಭೆಯ ದ್ವಾರಕ್ಕೆ ಬಂದು ಧರಣಿ ಕುಳಿತಿದ್ದರು ಆ ಸಮಯದಲ್ಲಿ ಅವರು ಆರೋಪಿಸಿದ್ದ ಯಾವುದಕ್ಕೂ ಇನ್ನೂ ಉತ್ತರ ಸಿಕ್ಕಿಲ್ಲ. ಅದರ ಬಗ್ಗೆಯೇ ಒಂದು ದೊಡ್ಡ ಬರಹ ಆಗಬಹುದು. 

ಸದ್ಯಕ್ಕಂತೂ ಪುರಸಭಾ ಸದಸ್ಯರಲ್ಲಿ ಅಸಮಾಧಾನ ಮನೆ ಮಾಡಿದ್ದು ಚುನಾವಣೆಯ ಸಮಯದಲ್ಲಿ ಇದು ಒಳ್ಳೆಯ ಲಕ್ಷಣವಲ್ಲ. ಅಲ್ಲದೆ ನಗರದ ಅಭಿವೃದ್ಧಿಯ ದೃಷ್ಟಿಯಿಂದಲೂ ಒಳ್ಳೆಯ ಲಕ್ಷಣವಲ್ಲ. ಈ ಆರೋಪ ಪ್ರತ್ಯಾರೋಪಗಳು ಯಾವ ಮಟ್ಟಕ್ಕೆ ಮುಟ್ಟುತ್ತವೆ ಎಂಬುದನ್ನು ಕಾದು ನೋಡಬೇಕು.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

Shahid Kapoor Birthday: ಈ ಬಾಲಿವುಡ್ ಹೀರೊ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಶಾಹಿದ್ ಕಪೂರ್ ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ಇಂದು (ಫೆಬ್ರವರಿ 25) ಅವರ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಎರಡು ದಶಕಗಳಿಂದ...
- Advertisement -

More Articles Like This

- Advertisement -
error: Content is protected !!
Join WhatsApp Group