spot_img
spot_img

ಮೂಡಲಗಿ ಹಳೆಯ ಸೇತುವೆ ಈಗ ವಾಹನಗಳ ನಿಲ್ಲಿಸುವ ಸ್ಥಳ !      

Must Read

   ಮೂಡಲಗಿ –  ಪಟ್ಟಣದ ಬಸ್ಟ್ಯಾಂಡ್ ಹತ್ತಿರ ಇರುವ ಜೋಡು ಸೇತುವೆಯಲ್ಲಿ ಹಳೆಯ ಸೇತುವೆ ಈಗ ಪಾರ್ಕಿಂಗ್ ಜಾಗವಾಗಿ ಪರಿವರ್ತಿತವಾಗಿದೆ.
ಸುಮಾರು ಐವತ್ತಕ್ಕಿಂತ ಹೆಚ್ಚು ವರ್ಷವಾಗಿರಬಹುದು ಈ ಹಳೆಯ ಸೇತುವೆಗೆ ಇನ್ನೂ ಗಟ್ಟಿಮುಟ್ಟಾಗಿದ್ದು ವಾಹನಗಳು ಓಡಾಡಲು ಪ್ರಶಸ್ತವಾಗಿದೆ ಆದರೆ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದಾಗಿ ಡಾಂಬರಿಕರಣ ಕಾಣದೆ ಅದರ ಮೇಲೆ ಯಾವ ವಾಹನಗಳೂ ತಿರುಗಾಡುತ್ತಿಲ್ಲ. ಈ ಹಳೆಯ ಸೇತುವೆ ಪಕ್ಕದಲ್ಲಿ ನಿರ್ಮಾಣವಾದ ಹೊಸ ಸೇತುವೆ ಕೆಲವೇ ವರ್ಷದಲ್ಲಿ ಕಬ್ಬಿಣದ ಸಳಿಗಳು ಹೊರಗಡೆ ಬಂದಿದ್ದವು ಅವುಗಳ ಮೇಲೆ ಕಾಂಕ್ರೀಟ್ ಹಾಕಿ ಮುಚ್ಚಲಾಯಿತು.
    ಎದುರು ಬದುರು ಗಾಡಿಗಳು ಬಂದರೆ ಕೆಲ ಹೊತ್ತು ಅಲ್ಲೇ..ಸೇತುವೆ ಮೇಲೆ ನಿತ್ತು ಬಿಡುತ್ತವೆ. ಇದರಿಂದ ಪಾದಚಾರಿಗಳಿಗೂ ದ್ವಿಚಕ್ರ ವಾಹನದಾರರಿಗೂ ತೊಂದರೆಯಾಗಿ, ಟ್ರಾಫಿಕ್ ಸಮಸ್ಯೆಯಾಗುತ್ತದೆ. ಒಟ್ಟಿನಲ್ಲಿ ಅಲ್ಲಿ ಸಿಲುಕಿ ಕೊಂಡವರಿಗೆಲ್ಲರಿಗೂ ಸಮಸ್ಯೆ. ಹಳೆಯ ಸೇತುವೆ ದುರಸ್ತಿ ಮಾಡಿ ಒನ್-ವೇ ಮಾಡಿದರೆ ಈ ಸಮಸ್ಯೆ ಕಡಿಮೆ ಆಗುವುದು ಅಂತ  ನಾಗರಿಕರು ಹೇಳುತ್ತಾರೆ.
ಅದರಲ್ಲೂ ಸಕ್ಕರಿ ಪ್ಯಾಕ್ಟರಿ ಪ್ರಾರಂಭವಾಯಿತೆಂದರೆ ಕಬ್ಬು ತುಂಬಿಕೊಂಡು ಬರುವ ಟ್ಯಾಕ್ಟರದಿಂದ ಟ್ರಾಫಿಕ್ ಜಾಮ್ ಆಗುತ್ತದೆ.
  ಪಟ್ಟಣದ ಬಹುತೇಕ ಜನರ ಆಸೆ ಈ ಎರಡು ಸೇತುವೆ ಒನ್-ವೇ ಆದರೆ ವಾಹನಗಳ ದಟ್ಟಣೆ ನಿಲ್ಲಿಸಬಹುದು ಎಂದು ನಾಗರಿಕರು ಹೇಳುತ್ತಿದ್ದಾರೆ. ಬಸ್ಟ್ಯಾಂಡ್ ಹತ್ತಿರ ಇರುವುದರಿಂದ ಜನಸಂದಣಿಯ ಹಾಗೂ ವಾಹನಗಳ ಹೆಚ್ಚು ಓಡಾಟ ಇದೆ ಆದ್ದರಿಂದ ಒನ್-ವೇ ಆದರೆ ಎಲ್ಲರಿಗೂ ಅನುಕೂಲ ವಾಗುವುದು ಇನ್ನಾದರು  ಪುರಸಭೆಯವರು ಇದರ ಬಗ್ಗೆ ಗಮನ ಹರಿಸಬೇಕಾಗಿದೆ.
ವರದಿ: ಸುಭಾಸ ಕಡಾಡಿ
- Advertisement -
- Advertisement -

Latest News

ಶಿವಾನಂದ ಮಹಾವಿದ್ಯಾಲಯದಲ್ಲಿ ವರಕವಿ ಬೇಂದ್ರೆಯವರ ೪೩ನೇ ಪುಣ್ಯಸರಣೆ

ಕಾಗವಾಡ: ನಗರದ ಶಿವಾನಂದ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಪ್ರಾಯೋಜಿತ ಕನ್ನಡ ವಿಭಾಗ ವರಕವಿ ಶಬ್ದಗಾರುಡಿಗ ಡಾ. ದ. ರಾ. ಬೇಂದ್ರೆಯವರ ೪೩ನೇ ಪುಣ್ಯಸ್ಮರಣೆಯನ್ನು ಆಯೋಜಿಸಲಾಗಿತ್ತು. ಈ ಸಮಾರಂಭದ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group