ಶಾಲೆಯ ಮಕ್ಕಳಿಗೆ ಸ್ಪೋರ್ಟ್ಸ್ ಡ್ರೆಸ್ ನೀಡಿದ ಹಳೆ ವಿದ್ಯಾರ್ಥಿಗಳು

Must Read

ಹುನಗುಂದ : ತಾಲೂಕಿನ ತಿಮ್ಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗ್ರಾಮದ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳ ಸಂಘದಿಂದ ಅಮರಾವತಿಯಲ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ತೆರಳುತ್ತಿರುವ ಶಾಲಾ ಮಕ್ಕಳ ಸ್ಪೋರ್ಟ್ಸ್ ಡ್ರೆಸ್ಸುಗಳನ್ನು ಕೊಡುವುದರ ಮೂಲಕ ಶಾಲಾ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆಂದು ಮುಖ್ಯೋಪಾಧ್ಯಾಯರಾದ ಕೆ ಎಚ್ ಬೆಲ್ಲದ ತಿಳಿಸಿದ್ದಾರೆ

ಕಳೆದ ವರ್ಷ ಇದೆ ಹಳೆ ವಿದ್ಯಾರ್ಥಿಯ ಗೆಳೆಯರು( ಹಿಂದೆ ಸುಮಾರು 36,000ಗಳ ರೂಪಾಯಿಗಳಲ್ಲಿ whiteboard, ಕೊಡಿಸಿದ್ದ) ಉಳಿದ 7,500 ರೂಪಾಯಿಗಳು, ಜೊತೆಗೆ ತಿಮ್ಮಾಪುರ ಗ್ರಾಮದ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಗಿರೀಶ ಸಂಗನಗೌಡ ದಾದ್ಮಿ ಅವರು 5,000ಗಳನ್ನು ಕೊಡಮಾಡುವುದರ ಮೂಲಕ ಪ್ರೋತ್ಸಾಹ ನೀಡಿದ್ದಾರೆ

ಇವರಿಗೆ ಹಾಗೂ ಈ ಒಂದು ಕಾರ್ಯಕ್ಕೆ ಸಹಕಾರ ನೀಡಿದ, ಮುಂದಿನ ದಿನಮಾನದಲ್ಲಿ ಎಲ್ಲರೂ ಇದೇ ರೀತಿಯಾದ ಸಮಾಜಮುಖಿ ಕೆಲಸಗಳನ್ನು ಮಾಡುವುದರ ಮೂಲಕ ಇವರ ಈ ಕ್ರೀಡಾ ಪ್ರೋತ್ಸಾಹಕ್ಕೆ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಶಾಲೆಯ ಮುಖ್ಯ ಗುರುಗಳು ಮತ್ತು ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಕೊಡಮಾಡಿದ ದಾನಿಗಳಿಗೆ ಅಭಿನಂದಿಸಿದ್ದಾರೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group