ಯರಗಟ್ಟಿ: “ಭೌತಿಕ ಚಿಕಿತ್ಸೆಗಳು ಜೀವನದ ಗುಣಮಟ್ಟವನ್ನು ಸುಧಾರಿಸುವ ಜೊತೆಗೆ ಅವರ ಸ್ವಾತಂತ್ರವನ್ನು ಮರಳಿ ಪಡೆಯಲು ಅಧಿಕಾರ ನೀಡುತ್ತದೆ. ಗಾಯದಿಂದ ಗುಣಮುಖವಾಗಲು ಅಥವಾ ದೀರ್ಘ ಆರೋಗ್ಯ ಪರಿಸ್ಥಿತಿ ನಿರ್ವಹಣೆ ಅಥವಾ ಚಲನಶೀಲತೆ ಹೆಚ್ಚಿಸಲು ದೈಹಿಕ ಸವಾಲುಗಳಿಂದ ಹೊರಬರಲು ಈ ಚಿಕಿತ್ಸೆಗಳು ಸಾಕಷ್ಟು ಸಹಾಯ ಮಾಡುತ್ತದೆ”ಎಂದು ಫಿಸಿಯೋಥೆರಪಿಸ್ಟ ಡಾ. ಸೋನಾಲಿ ಬಾಂದುಗಿ೯ ತಿಳಿಸಿದರು.
ಅವರು ಪಟ್ಟಣ ದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಕನ್ನಡ ಶಾಲೆಯಲ್ಲಿ ಸಮನ್ವಯ ಶಿಕ್ಷಣ ಯೋಜನೆಯಡಿ ಯರಗಟ್ಟಿ ಯರಝರ್ವಿ ತಲ್ಲೂರು ಸತ್ತಿಗೇರಿ ಶಿವಾಪುರ ಸಮೂಹ ಸಂಪನ್ಮೂಲ ಕೇಂದ್ರಗಳ ವ್ಯಾಪ್ತಿಯ ವಿಕಲಚೇತನ ಮಕ್ಕಳ ಫಿಸಿಯೋಥೆರಪಿ ಕಾರ್ಯವನ್ನು ಕುರಿತು ಪಾಲಕರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುನವಳ್ಳಿ ವಲಯದ ಸಮನ್ವಯ ಶಿಕ್ಷಣದ ಸಂಪನ್ಮೂಲ ಶಿಕ್ಷಕರಾದ ಸಿ. ವ್ಹಿ.ಬಾರ್ಕಿ,ಯರಗಟ್ಟಿ ವಲಯದ ಸಮನ್ವಯ ಸಂಪನ್ಮೂಲ ಶಿಕ್ಷಕರಾದ ವೈ. ಬಿ. ಕಡಕೋಳ, ಮುರಗೋಡ ವಲಯದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಡಿ. ಎಲ್. ಭಜಂತ್ರಿ, ಪರಸಗಡ ತಾಲೂಕು ಸಹಕಾರಿ ಪತ್ತಿನ ಸಂಘದ ಅಧ್ಯಕ್ಷರಾದ ಮನೋಹರ ಚೀಲದ, ಮುಖ್ಯ ಶಿಕ್ಷಕ ಎ. ಎ. ಮಕ್ಕುಂನವರ,ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಎಸ್. ಬಿ. ಮಿಕಲಿ ಉಪಸ್ಥಿತರಿದ್ದರು.
ಮನೋಹರ ಚೀಲದ ಮಾತನಾಡಿ, ಅಪಘಾತ, ಸರ್ಜರಿ ಅಥವಾ ಅನಾರೋಗ್ಯದಲ್ಲಿ ಈ ದೈಹಿಕ ಚಿಕಿತ್ಸೆಗಳು ಪುನರ್ಜೀವನದ ಸಾಧನವಾಗಿದೆ. ರೋಗಿಗಳಿಗೆ ಶಕ್ತಿ, ಚಲನಶೀಲತೆ ಮತ್ತು ಕಾರ್ಯವನ್ನು ಮರಳಿ ಪಡೆಯಲು ನೆರವಾಗುತ್ತದೆ. ಜಾಗತಿಕವಾಗಿ ದೀರ್ಘಕಾಲಿಕ ನೋವುಗಳಿಂದ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ದೈಹಿಕ ಚಿಕಿತ್ಸಕರು ತಮ್ಮ ತಂತ್ರ, ಸ್ವಯಂಚಿಕಿತ್ಸೆ ಮತ್ತು ವ್ಯಾಯಾಮದ ಮೂಲಕ ಈ ನೋವುಗಳನ್ನು ಪರಿಹರಿಸಿ, ರೋಗಿಗಳ ಯೋಗಕ್ಷೆಮಕ್ಕೆ ಸಹಾಯ ಮಾಡುತ್ತಾರೆ. ಇದು ನೋವಿನ ಔಷಧಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಈ ಕಾರ್ಯಕ್ರಮದ ಪ್ರಯೋಜನ ಪಾಲಕರು ಪಡೆಯುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪಾಲಕರಿಗೆ ಫಿಸಿಯೋಥೆರಪಿ ಕಾರ್ಯ ಮಾಡುವ ವಿಧಾನವನ್ನು ಸ್ವತಃ ಮಾಡುವ ಮೂಲಕ ಮನೆಯಲ್ಲಿ ದಿನನಿತ್ಯದ ಬದುಕಿನಲ್ಲಿ ಆ ಮಕ್ಕಳ ಫಿಸಿಯೋಥೆರಪಿ ಕಾರ್ಯ ಕೈಗೊಳ್ಳುವ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ವೈ. ಬಿ. ಕಡಕೋಳ ಸ್ವಾಗತಿಸಿದರು. ಸಿ. ವ್ಹಿ. ಬಾರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ. ಎಲ್ ಭಜಂತ್ರಿ ನಿರೂಪಿಸಿದರು.