- Advertisement -
ಬಸವ ಮರಳಿ ಬರುವುದಿಲ್ಲ
—————————-
ವಿಶ್ವ ಬಂಧು ಮಹಾಪುರುಷ
ಜಗದ ಅಣ್ಣ ಬಸವನು
ಮತ್ತೆ ಬಾರನು ಮರಳಿ ಭೂಮಿಗೆ
ವ್ಯರ್ಥವಾಯಿತು ಕ್ರಾಂತಿಯು
ದುಡಿವ ಕೈಗೆ ಕೆಲಸವಿತ್ತು.
ಹಸಿದ ಹೊಟ್ಟೆಗೆ ಪ್ರಸಾದವು
ಜಾತಿ ಕಸದ ಬೇರು ಕಿತ್ತು
ಹಸನ ಮಾಡಿದ ಬಾಳನು
ಉಚ್ಚ ನೀಚ ರಾಜ ರಂಕ
ದುಡಿಮೆ ಸೂತ್ರ ಮಂತ್ರವು
ಒಂದು ಮಾಡಿದ ಹಿರಿಮೆ ಗರಿಮೆ
ಈಗ ಭ್ರಮೆ ಇಲ್ಲ ಶಾಂತಿ.
- Advertisement -
ಬಸವನೆಸರಲಿ ಕೊಳ್ಳೆ ಹೊಡೆವರು
ಅಕ್ಕ ಮಾತೆ ಸ್ವಾಮಿ ಶರಣರು
ಗ್ರಂಥ ಕದ್ದು ವಚನ ತಿದ್ದಿ
ದೊಂಬರಾಟದ ಭ್ರಾಂತಿಯು
ಮಠಗಳಲಿ ಬಸವ ಬಂಧಿಯು
ತತ್ವ ಯಜ್ಞ ಹೋಮವು
ಅರುಹು ಮರೆತು ಕುಣಿಯುತಿಹರು
ಬಸವ ಮೌನವಾದನು
ಬಸವ ಮರಳಿ ಬರುವದಿಲ್ಲ
ಸಮತೆ ಹಣತೆ ಒಡೆಯಿತು
——————————
ಡಾ.ಶಶಿಕಾಂತ.ಪಟ್ಟಣ. ರಾಮದುರ್ಗ