ಪಹಲ್ಗಾಮ್ ಪ್ರವಾಸ
ಪಹಲ್ಗಾಮ್
ಹಸಿರು ಕಾನನದೊಳಗೆ
ನುಸುಳಿದ ಸಿಪಾಯಿ
ಬಂದೂಕುದಾರಿಗಳು
ಸಿಡಿಸಿದ ಗುಂಡಿಗೆ
ಎದೆ ಕೊಟ್ಟು ನಿಂತ ಪ್ರವಾಸಿಗರು
ಹಸಿರು ಹುಲ್ಲಿನ ಮೇಲೆ
ಬರೆದ ರಕ್ತದ ಕಲೆ
ಆರಿ ಹೋದವು ಹಗಲು ದೀಪ
ಹೆಗಲಿಗೆ ಹೆಗಲು ಆಗಲಿಲ್ಲ ಮಗ
ಹಸೆ ಮನೆಯ ಹುಡುಗಿಗೆ
ಹೆಸರಾಗಲಿಲ್ಲ ಗಂಡ
ಕಳೆದುಕೊಂಡ ತಾಳಿ
ಕಸಿದುಕೊಂಡ ಕುಂಕುಮ
ಮುಕ್ಕಿ ನಿಂತವು ಸುತ್ತುವರೆದು
ಹೌಹಾರಿದ ಕುದುರೆ ಸವಾರ
ಕಿತ್ತು ಕೊಂಡನು ಕೋವಿ
ಚೆಲ್ಲಿತು ರಕ್ತ
ಕೆಂಪಾದವು ಹಸುರೆಲೆ
ಕೂಗಿದರೂ ಧ್ವನಿ ಕೇಳದ ಜನ
ಮೂಕ ವಿಸ್ಮಿತ ಆಕ್ರೋಶ
ನಲುಗಿದ ಎದೆಗೆ
ಗುಡುಗಿದ ಸಿಡಿ ಮದ್ದು
ಹಿಂದೂ ಆದರೇನು ?
ತಂಪಾದ ತವರು ನೆಲಕ್ಕೆ
ಬೆಂಕಿ ಇಟ್ಟ ಪಾಪಿ ಪಾತಕಿ
ಘೋರಿ ಕಟ್ಟಿತು ನಟ್ಟ ನಡುವೆ
ಗುಡುಗು ಸಿಡಿಲು
ಸಿಡಿ ಮಿಡಿ ಗೊಂಡ ವೈರಿ ಪಡೆ
ಸಿಡಿಸಿ ಬಿಟ್ಟವು
ದಂಗು ದಳಪತಿ
ಓಡಿ ಹೋದವು ರಣ ಹದ್ದು
ರೆಕ್ಕೆ ಮುರಿದು ಗೂಡು ಬಿಟ್ಟು
ಛಿದ್ರವಾಯಿತು ಪಾತಕಿ
ಡಾ. ಸಾವಿತ್ರಿ ಕಮಲಾಪೂರ