ಕವನ : ಸಾವಿನ ಜೊತೆ ಆಟ ಆಡುವ ಧರ್ಮ ಯಾವುದಯ್ಯ?

Must Read

ಸಾವಿನ ಜೊತೆ ಆಟ ಆಡುವ ಧರ್ಮ ಯಾವುದಯ್ಯ

ಸತಿಯ ಎದುರು ಪತಿಯನ್ನು ಕೊಂದು
ಅವಳ ಸೌಭಾಗ್ಯವನ್ನೇ ನುಂಗಿ ನೀರು ಕುಡಿದು
ಸತಿಯನ್ನು ಜೀವಂತ ಶವವಾಗಿ ಮಾಡಿದ ಈ ಧರ್ಮ ಯಾವುದಯ್ಯ?

ತಾಯಿಯ ಎದುರು ಕಂದನನ್ನು ಕೊಂದು ಅವಳ ತಾಯ್ತನ ಒಡಲಿಗೆ ಬೆಂಕಿ ಇಟ್ಟು ಪುತ್ರಶೋಕ ನಿರಂತರವಾಗಿ ಇರಲು ಕಾರಣವಾದ ಈ ಧರ್ಮ ಯಾವುದಯ್ಯ?

ನವ ಜೋಡಿ ಹಕ್ಕಿಗಳು ಸ್ವಚ್ಛಂದವಾಗಿ ಪ್ರಣಯದಲ್ಲಿ ಹಾರಾಡುವಾಗ
ಪ್ರಿಯಕರನ ಎದೆಗೆ ಗುಂಡಿಟ್ಟು ಅವಳಿಗೆ ಬಲವಾಗಿರುವ ರೆಕ್ಕೆಯನ್ನೇ ಮುರಿದ ಕೈಯಲ್ಲಿರುವ ಇನ್ನೂ ಮದರಂಗಿ ಮಾಸದೇ ಇರುವಾಗ ಪತಿಯ ಎದೆಯ ನೆತ್ತರ ಕೈಗೆ ಮೆತ್ತಿಕೊಂಡಂತೆ ಮಾಡಿರುವ ಈ ಧರ್ಮ ಯಾವುದಯ್ಯ?

ಧರ್ಮ ಅಧರ್ಮಗಳ ನಡುವೆ ಅಮಾಯಕರ ಜೀವ ತೆಗೆದು
ಅವರ ಮನೆ ದೀಪ ಆರುವಂತೆ ಮಾಡಿದ ಈ ಧರ್ಮ ಯಾವುದಯ್ಯ?

ಧರ್ಮದ ಹೆಸರಿನಲ್ಲಿ ಅಮಾಯಕರ ಪ್ರಾಣ ಜೊತೆ ಆಟ ಆಡುವ ಮಾನವೀಯ ಕೃತ್ಯ ಎಸೆದು ಡೊಂಬರಾಟ ಆಡುವ ಈ ಹೀನ ಧರ್ಮ ಯಾವುದಯ್ಯ?

ಅಂಗಲಾಚಿ ಬೇಡಿಕೊಂಡರು ಮನ ಕರಗದವರ
ಉಡಿ ಒಡ್ಡಿ ಬೇಡಿಕೊಂಡರು ಕರುಣೆ ತೋರದವರ
ಜನರಲ್ಲಿ ಸಾವಿನ ಭಯ ಉಂಟು ಮಾಡಿದವರ ಧರ್ಮ ಹೇಯವಾದದ್ದು ಮನುಷತ್ವ ಸತ್ತ ಧರ್ಮ ಯಾವುದಯ್ಯ?

ನೊಂದವರ ಗೋಳಾಡಿದವರು ಕಣ್ಣೀರಿಟ್ಟವರ ಶಾಪ ಈ ಧರ್ಮವನ್ನು ಈ ಭಯೋತ್ಪಾದಕರನ್ನು ಸುಮ್ಮನೆ ಬಿಡದಯ್ಯಾ
ಹೆಣ್ಣಿನ ಕಣ್ಣೀರಿನ ಕಡಲಿನಲ್ಲಿ ಭಯೋತ್ಪಾದಕರು ಕೊಚ್ಚಿ ಹೋಗುವವರಯ್ಯ
ಆ ಮುಗ್ಧಪತಿ ಮಗುವಿನ ನೆತ್ತರದಲ್ಲಿ ಇವರ ನೆತ್ತರ ಹರಿದು ಬಿಡಬೇಕಯ್ಯ.

ಸಹಬಾಳ್ವೆ ಸಮಾನತೆ ಸೋದರತೆ ಧರ್ಮವಾಗಬೇಕಯ್ಯ
ಎಲ್ಲರೂ ನಮ್ಮವರು ಎಂಬ ಪ್ರೀತಿಯಿಂದ ಅಪ್ಪಿಕೊಳ್ಳುವ ಗೂಡಾಗಬೇಕಯ್ಯ
ಆನಂದ ಸಾಗರವಾಗಿ ಕಷ್ಟದಲ್ಲಿದ್ದವರಿಗೆ ಹೆಗಲಾಗಬೇಕಯ್ಯ ದಮನೀಯರಿಗೆ ನೆರಳಾಗಬೇಕಯ್ಯ
ಪ್ರೀತಿ, ಸ್ನೇಹ. ದಯೆ ತೋರುವ ಮಂದಿರವಾಗುವ ಧರ್ಮ ಮಾನವ ಧರ್ಮ ಮನುಷ್ಯತ್ವದ ಧರ್ಮ ಅಲ್ಲವೇ
ಮನುಷ್ಯತ್ವ ಮಾನವೀಯ ಧರ್ಮ ದೊಡ್ಡದಯ್ಯ
ಮನುಷ್ಯತ್ವ ಮಾನವೀಯ ಧರ್ಮ ಬಿಟ್ಟವರು ರಾಕ್ಷಸರಯ್ಯ.

ಶ್ರೀಮತಿ ಜ್ಯೋತಿ ಸಂಜು ಮುರಾಳೆ.

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...

More Articles Like This

error: Content is protected !!
Join WhatsApp Group