ಕವನ

Must Read

ಯೋಗದಿಂದ ದೂರ ರೋಗ

ದಿನವೂ ಯೋಗ ಮಾಡಬೇಕು
ರೋಗದಿಂದ ದೂರ ಇರಬೇಕು
ಯೋಗ ಧ್ಯಾನದಿಂದ ಮನಸ್ಸು ಹಿಡಿತದಲ್ಲಿರುತ್ತದೆ
ಏಕಾಗ್ರತೆ ಹೆಚ್ಚಿಸುತ್ತದೆ ಶಾಂತಿ ನೆಮ್ಮದಿ ದೊರಕಿಸುತ್ತದೆ.

ಯೋಗ ಮಾಡಿದರೆ ಮನಸ್ಸು ಪ್ರಫುಲ್ಲವಾಗಿರುತ್ತದೆ
ಲವಲವಿಕೆ ಇಂದಿರಲು ಸಹಾಯಮಾಡುತ್ತದೆ
ಹೊಸ ಚೈತನ್ಯ ಉಲ್ಲಾಸದ ಚಿಲುಮೆ ದೊರಕಿಸುತ್ತದೆ
ಸಹನೆ, ತಾಳ್ಮೆ, ಸೌಂದರ್ಯ ಹೆಚ್ಚಿಸುತ್ತದೆ.

ಆತ್ಮಬಲ ವೃದ್ಧಿಸುವ ಶಕ್ತಿಯು ಈ ಯೋಗವು
ಯೋಗದ ಮಹತ್ವ ಅರಿತುಕೊಂಡು ನಡೆಯೋಣ
ನಿತ್ಯ ಯೋಗಸ್ತರಾಗಿ ಧ್ಯಾನಸ್ತರಾಗೋಣ
ಸುಂದರ ಜೀವನವನ್ನು ಅನುಭವಿಸೋಣ.

ಅನಾರೋಗ್ಯಕ್ಕೆ ವಿದಾಯ ಹೇಳಿರಿ
ಆರೋಗ್ಯವೇ ಭಾಗ್ಯ ಎಂದು ತಿಳಿಯಿರಿ
ಯೋಗದಿಂದ ಕ್ರಿಯಾಶೀಲತೆ ಬೆಳೆಸಿಕೊಳ್ಳೋಣ
ರೋಗ ಮುಕ್ತ ಜೀವನ ನಮ್ಮದಾಗಿಸಿಕೊಳ್ಳೋಣ

ಜ್ಯೋತಿ ಸಂಜು ಮುರಾಳೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group