Homeಕವನಕವನ

ಕವನ

ಮಾತೆ -ಜನ್ಮದಾತೆ

ಭೂಲೋಕದ ಸುಂದರ ದೇವತೆ
ಜಗವ ಪೊರೆವ ಜೀವದಾತೆ
ಮುಕ್ಕೋಟಿ ದೇವರುಗಳ ಮಾತೆ
ಸಕಲಜೀವ ಜೀವಗಳ ಮಾತೆ -ಜನ್ಮದಾತೆ

ತನ್ನ ಪಾಲಿನ ಅನ್ನವ ಪತಿಸುತರ ಪಾಲಿಗೊಪ್ಪಿಸಿ
ಜಗದಳುವು ತನಗಿರಲಿ ಎಂಬ ಭಾವದಿ ಜೀವ ಸವೆಸುತ
ಮನೆ ಮನ ಬೆಳಗುವ ಮಾತೆ-ಜನ್ಮದಾತೆ

ಸೂರ್ಯೋದಯಕೆ ಮನೆ ಬೆಳಗಿ
ಕಾಯಕದಲಿ ಕೈಲಾಸ ಕಂಡು
ಇರುಳಿನ ನಿದ್ದೆಯವರೆಗೆ
ಜೀವ ಸವೆಸುವ ಮಾತೆ-ಜನ್ಮದಾತೆ

ಕಷ್ಟ ಸುಖದಲಿ ಸಮಭಾಗಿಣಿ
ಮಕ್ಕಳ ಪಾಲಿನ ಕಾಮಧೇನು
ಮನೆಯೆಂಬ ಮಂತ್ರಾಲಯದ ಭಾಗ್ಯದೇವತೆ
ಜಗವ ಪೊರೆವ ಗೃಹಲಕ್ಷ್ಮಿ ಮಾತೆ-ಜನ್ಮದಾತೆ

ಶಿವಕುಮಾರ ಕೋಡಿಹಾಳ ಮೂಡಲಗಿ

RELATED ARTICLES

Most Popular

error: Content is protected !!
Join WhatsApp Group