ಕವನ : ಭರವಸೆಯ ಬಂಧು ಅಪ್ಪ

Must Read

ಭರವಸೆಯ ಬಂಧು ಅಪ್ಪ

ನನಗೆ ಯಾವತ್ತೂ ಕಣ್ಣೀರೇ ಗೊತ್ತಿಲ್ಲ
ಕಾರಣ ನಿಮ್ಮ ಬೆವರ ಹನಿ ನಿಂತಿಲ್ಲ
ಉಸಿರಿಗೆ ಹೆಸರು ನೀಡಿದವನು ನೀನು
ನಿಮ್ಮ ಹೆಸರುಳಿಸುವ ಮಗನಾಗುವೆ ನಾನು

ಭರವಸೆ ಎಂದರೆ ಅಪ್ಪ
ಜವಾಬ್ದಾರಿ ಎಂದರೆ ಅಪ್ಪ
ಪ್ರಯತ್ನ ಅಂದರೆ ಅಪ್ಪ
ಕಾಳಜಿ ಅಂದರೆ ಅಪ್ಪ

ನಿನಗಾಗಿ ಎಂದೆಂದಿಗೂ ನೀ ದುಡಿಯಲಿಲ್ಲ
ಯಾವುದಕ್ಕೂ ಕೊರತೆ ಮಾಡಲಿಲ್ಲ
ನಿನ್ನ ದುಃಖವ ನಮಗೆ ಹೇಳಲಿಲ್ಲ
ಬಾಳಿನ ಉದ್ದಕ್ಕೂ ನೋವನ್ನು ನುಂಗಿದೆಯಲ್ಲ

ನಾ ಮರವಾದರೆ ನೀ ಬೇರು ಆದೆ
ನಾ ಹನಿಯಾದರೆ ನೀ ಮೋಡವಾದೆ
ನಾ ಹೂವಾದರೆ ನೀ ಬಳ್ಳಿಯಾದೆ
ನಾ ಕಣ್ಣಾದರೆ ನೀ ರೆಪ್ಪೆಯಾದೆ

ನನಗೆ ಚೆಂದದ ಅರಿವೆ ತೊಡಿಸಿದೆ
ನಿನ್ನಂಗಿ ಹರಿದುದನೇ ಮರೆಮಾಚಿದೆ
ಹಗಲಿರುಳು ನೀ ದುಡಿದು ಓದಿಸಿದೆ
ನೋವಿದ್ದರೂ ಒಳಗೊಳಗೇ ರೋಧಿಸಿದೆ

ನಿನ್ನ ಬೆವರಲಿ ತಂದ ಬೂಟು ನಾ ತೊಟ್ಟೆ
ನಿನ್ನ ಅಂಗಾಲ ಗಾಯ ಬಿರುಕುಗಳ ಮುಚ್ಚಿಟ್ಟೆ
ಮಗ ಕೋಟು ಧರಿಸಲೆಂದು ಬಯಸಿದೆ
ನೀ ಅನ್ಯರ ತೋಟದಲಿ ಬೆವರು ಬಸಿದೆ

ನನಗೆ ಮಾತು ಕಲಿಸಿದ ಮಾಣಿಕ್ಯ ನನಗೆ ನೀತಿ ಹೇಳಿದ ಚಾಣಕ್ಯ
ನನಗೆ ಸತ್ಯದ ಅರಿವು ತೋರಿಸಿದ ಗಾಂಧೀಜಿ
ಸರಳತೆ ವಿನಯ ಕಲಿಸಿದ ಶಾಸ್ತ್ರೀಜಿ

ಮುತ್ತು ಯ.ವಡ್ಡರ
ಶಿಕ್ಷಕರು
ಬಾಗಲಕೋಟ
9845568484

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...

More Articles Like This

error: Content is protected !!
Join WhatsApp Group