ಕವನ: ಅಕ್ಷಯ ತೃತೀಯ

Must Read

ಅಕ್ಷಯ ತೃತೀಯ

ಕ್ಷಯವಾಗದ ಪಾತ್ರೆಯ
ಪಡೆದ ದ್ರೌಪದಿ
ಕೃಷ್ಣನ ಅನುಗ್ರಹದ
ಅಕ್ಷಯ ತೃತೀಯ
ಸವಿ ಶುಭದಿನವಾಯಿತು

ಭಗೀರಥ ಪ್ರಯತ್ನದ
ಫಲದಿ ಭುವಿಗವತರಿಸಿದಳು
ಗಂಗೆ ಪವಿತ್ರ ಪಾವನವಾಯಿತು
ಭರತಖಂಡ ಅಕ್ಷಯ ತೃತಿಯ ದಿನದಿ
ಕ್ಷಯವಾಗದ ಮಹತ್ವದ ಕಾರ್ಯವು

ವೈಶಾಖ ಮಾಸದ
ಶುಕ್ಲ ಪಕ್ಷದ ಶುಭದಿನವು
ಅಕ್ಷಯ ತೃತೀಯ
ಜಗಜ್ಯೋತಿ ಬಸವೇಶ್ವರರ
ಜನುಮ ದಿನದ ಸಡಗರದ ದಿನ

ಶ್ರೇಷ್ಠವಾದ ಕಾರ್ಯಗಳ
ಮಾಡಿರಿ ಈ ದಿನ ಎನುವ
ಹಿರಿಯರ ವಾಣಿಯಂತೆ
ಮಹತ್ವದ ದಿನವಾಗಿಹದು
ಅಕ್ಷಯ ತೃತೀಯ

ಮಹಾತ್ಮರರ ಜನ್ಮದಿನವು
ಸಕಲ ಕಾರ್ಯಕೆ ಶುಭ ದಿನವು
ಬಂಗಾರ ಖರೀದಿಗೆ ಶುಭವು
ಶುಭ ಕಾರ್ಯವ ಈ ದಿನ
ಮಾಡಿರೆನುತ ಆಚರಿಸುತಲಿ

ಗಂಗೋತ್ರಿ ಯಮನೋತ್ರಿ
ದೇಗುಲಗಳ ಭಕ್ತರ ದರ್ಶನ
ನೀಡಲು ತೆರೆಯುತಲಿ
ವಿಷ್ಣುವು ಪರಶುರಾಮನ ಅವತಾರ
ತಾಳಿದ ದಿನವಿದು ಅಕ್ಷಯ ತೃತೀಯ

ಭಕ್ತಿ ಭಾವದಿ ಪೂಜಿಸುವ
ಶುಭ ದಿನವು ಅಕ್ಷಯ ತೃತೀಯ
ಒಳ್ಳೆಯದನು ಮಾಡಿ ಒಳ್ಳೆಯದನು ಬಯಸಿ
ಉತ್ತಮ ಕೆಲಸಗಳ ಈ ದಿನ ಮಾಡಿರೆನುವ
ಅಕ್ಷಯ ತೃತೀಯ ಅಕ್ಷಯ ತೃತೀಯ


ವೈ.ಬಿ.ಕಡಕೋಳ
ಶಿಕ್ಷಕ ಸಾಹಿತಿಗಳು
ಮುನವಳ್ಳಿ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group