Homeಕವನಕವನ: ಜೀವನದ ಜೋಕಾಲಿ

ಕವನ: ಜೀವನದ ಜೋಕಾಲಿ

ಜೀವನದ ಜೋಕಾಲಿ

ಸೈರಿಸು ಮನವೇ ಸೈರಿಸು
ಜೀವನದ ಜೋಕಾಲಿ
ಜೀಕು ನೀ ಸುವ್ವಿ ಸುವ್ವಾಲಿ
ಇರಲಿ ಮೊದಲು ನಿಧಾನ
ಸಿಗುವುದು ನಿನಗೆ ಸಮಾಧಾನ
ಅವಸರವೇಕೆ ಮನವೇ
ತಡೆದುಕೊಂಡಷ್ಟು ಇದೆ ಸುಖ

ತಣ್ಣನೆಯ ಗಾಳಿ ಹಿತಕರ
ನೀ ಜೊತೆಗಿದ್ದರೆ ಎಲ್ಲಿಯ ಭಯ
ಇರಲಿ ನಮ್ಮ ಮೇಲೆ ದೇವರ ಅಭಯ
ಜೊತೆಯಲ್ಲಿಯೇ ಗಗನಕ್ಕೆರುವಾ ಬಾ ಬಾರ
ಅಲ್ಲಿದೆ ನೋಡು ಒಲವಿನ ಚಿತ್ತಾರ
ಶುಭ್ರ ಬಿಳಿ ಮೋಡಗಳ ನೀಲಾಕಾಶ
ಮತ್ತೆ ಮತ್ತೆ ಸಿಗದು ಈ ಅವಕಾಶ

ನೋವಿರಲಿ ನಲಿವಿರಲಿ
ಹೃದಯ ಹೃದಯ ಬೆಸುಗೆಯಾಗಲಿ
ಭಾವನೆಗಳು ಮಾತಾಗಿ ಹರಿಯಲಿ
ನೋವನ್ನು ಹಂಚಿಕೊಳ್ಳುತ ಮನವು
ನೀ ನನ್ನೊಳು ಬೆರೆಯಲು
ಸಾಗಬೇಕಿದೆ ಹಿಂತಿರುಗಿ ಮತ್ತದೇ
ದಾರಿಯಲಿ ಬೆರೆತ ಮನಗಳು
ಸೈರಿಸು ಮನವೇ ಸೈರಿಸು


ಮುಕ್ತಾ ಎಸ್ ಪಶುಪತಿಮಠ
ಶ್ರೀ ರೇಣುಕಾ ಶುಗರ್ಸ ಕಾರ್ಖಾನೆ ಹತ್ತಿರ ಬೈಲಹೊಂಗಲ ಕ್ರಾಸ್ ಶಿವಕೃಪಾ ನಿಲಯ ಮುನವಳ್ಳಿ ೫೯೧೧೧೭ ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ

RELATED ARTICLES

Most Popular

error: Content is protected !!
Join WhatsApp Group