ಬೀದರ – ನಗರದಲ್ಲಿ ಕರ್ಕಶ ಶಬ್ದ ಮಾಡುತ್ತ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಬಿಸಿ ಮುಟ್ಟಿಸಿರುವ ಪೊಲೀಸರು ನೂರಾರು ಬೈಕ್ ಗಳ ಸೈಲೆನ್ಸರ್ ಗಳನ್ನು ಧ್ವಂಸ ಮಾಡಿದ್ದಾರೆ.
ನಗರದ ಅಂಬೇಡ್ಕರ್ ವೃತ್ತದಲ್ಲಿ ೧೪೭ ಸೈಲೆನ್ಸರ್ ಗಳ ಮೇಲೆ ರೋಡ್ ರೋಲರ್ ಹತ್ತಿಸಿ ಧ್ವಂಸ ಮಾಡಿದ್ದಲ್ಲದೆ ರೂ. ೧.೩೭ ಲಕ್ಷ ದಂಡ ಕೂಡ ವಸೂಲಿ ಮಾಡಿದರು.
ಎಸ್ ಪಿ ಪ್ರದೀಪ ಗುಂಟಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಸಾರಿಗೆ ನಿಯಮಗಳನ್ನು ಪಾಲಿಸದ ವಾಹನ ಸವಾರರಿಗೆ ಚುರುಕು ಮುಟ್ಟಿಸಿದರು.
ಕಾರ್ಯಾಚರಣೆಯ ನಂತರ ಎಸ್ ಪಿ ಯವರು ವಾಹನ ಚಾಲಕರು ಸಾರಿಗೆ ನಿಯಮಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ವರದಿ : ನಂದಕುಮಾರ ಕರಂಜೆ, ಬೀದರ