ಪವ್ಯಾ… ಗಂಟಲತನಕ ಕುಡದು ತಡರಾತ್ರಿ ತೂರ‌್ಯಾಡಕೋಂತ ಮನೆಕಡೆ ಹೊಂಟಿದ್ದ. ಹಾದ್ಯಾಗ್ ಚೈನೀಸ್ ಸ್ನ್ಯಾಕ್ಸ್ ಗಾಡಿ ಕಾಣಿಸಿತು. ಪವ್ಯಾ ” ಚಿಕನ್ ಮಂಚೂರಿ” ಕೊಡ್ರಿ ಅಂದ. ಅಂಗಡಿಯವ ” ಎಲ್ಲ ಮುಗದೈತಿ ಅಂಗಡಿ ಬಂದ್ ಮಾಡಾಕ ಹತ್ತೇನಿ ಬೇಕಾದ್ರ ಹಸಿ ಚಿಕನ್ ಐತಿ ಪಾರ್ಸೆಲ್ ಕೊಡ್ಲೆನ್” ಅಂದ.
ಕುಡದ ಮನಿಗಿ ಹೋಗಾಂವಗ ಸಿಗೋ ಮರ್ಯಾದೆ ನೆನಸಕೊಂಡು ಹೆಂಡ್ತಿಗೆ ಖುಷ್ ಮಾಡಿದರಾಯಿತು ಅಂದುಕೊಂಡ ” ಆಯ್ತು ಒಂದು ಕೆ ಜಿ ಕೊಡು” ಅಂದು ಪ್ಲಾಸ್ಟಿಕ್ ನ್ಯಾಗ ತಗೊಂಡು ತೂರಾಡಕೊತ ಮನಿಕಡೆ ಹೊಂಟ.
ಹಾದ್ಯಾಗ ನಾಯಿಗೋಳು ಬೋಗಳಕೋಂತ ಬೆನ್ನು ಬಿದ್ದು. ಹಂಗ ನಡಕೋತ ಹೋಗಾಗ ಕತ್ತಲ್ಯಾಗ ಒಂದು ನಾಯಿ ಎದುರಿಗಿ ಬತ್ತು ಅದು ಬೋಗಳಲಾರದ ಪವ್ಯಾನ ಕಡೆ ನೋಡಾಕ ಹತ್ತಿತ್ತು.
ಪವ್ಯಾ ಆ ನಾಯಿಗೆ ” ನೀ ಒಬ್ಬ ನೋಡು ನನ್ನ ಅರ್ಥ ಮಾಡಿಕೊಂಡಾಂವ ನಿನ್ನಂತಹ ಗೆಳ್ಯಾ ಮತ್ತೊಬ್ಬ ಇಲ್ಲ. ತಗೋ ತಿನ್ನು ಅಂದು ಎಲ್ಲ ಚಿಕನ್ ಅದಕ್ಕ ಹಾಕಿ ಅದರ ಮೈಮ್ಯಾಲ ಪ್ರೀತಿಲೆ ಕೈ ಆಡಿಸಿದ. ನಂತರ ಹೆಂಡ್ತಿಯನ್ನು ಹೇಗೆ ಎದುರುಸೋದು ಅಂತ ಚಿಂತಿ ಮಾಡಕೊತ್ತ ಮನಿಗಿ ಬಂದ.
ಹೆಂಡ್ತಿ ಬಾಗ್ಲಾ ತಗದು ಶಾಂತ ಚಿತ್ತದಿಂದ ಪವ್ಯಾಗ ಊಟ ಬಡಿಸಿದಳು. ಊರಾಗ ಚಿರತೆ ಬಂದಿರುವ ಸುದ್ದಿಯಾಗಿ, ಎಲ್ಲರೂ ತಮ್ಮ ಮನಿ ಮಂದಿ ಸುರಕ್ಷಿತ ಮನೆಗೆ ಬರಲಿ ಅಂತ ಕಾಳಜಿ ಮಾಡು ಟೈಮ್ ದಾಗ ಪವ್ಯಾ ಮನಿಗೆ ಬಂದಿದ್ದರಿಂದ ಹೆಂತಿಗೂ ಸಮಾಧಾನ ಆಗಿತ್ತು.
ಅಷ್ಟರಲ್ಲಿ ಮಕ್ಕಳು ವೈರಲ್ ಆಗಿದ್ದ ವಿಡಿಯೋ ಕ್ಲಿಪ್ ಅವರ ಅವ್ವಗ ತೋರಿಸಿದರು. ಪವ್ಯಾ ಚಿರತಿ ಮೈಮ್ಯಾಲ ಕೈ ಆಡಸಕೋಂತ ಪ್ರೀತಿಯಿಂದ ಜೊತೆಗಿದ್ದ ವಿಡಿಯೋ ಅದಾಗಿತ್ತು. ಜೊತೆಗೆ ಅದಕ್ಕೆ ಕ್ಯಾಪ್ಶನ್ ಬೇರೆ ಹಾಕಿದ್ರು “ನಮ್ಮ ಊರಿನ ಹೀರೋ”….
ಪವ್ಯಾನ ಹೆಂಡ್ತಿ ಅದನ್ನ ನೋಡಿದಕ್ಕೆ ಎಚ್ಚರ ತಪ್ಪಿ ಬಿದ್ದಳು
ಇದೇ
ಎಣ್ಣೆ ತಾಕತ್ತು…!!
*31 ಡಿಸೆಂಬರ್* ಶುಭಾಶಯಗಳು
ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ತಪ್ಪದೆ ನಿಮ್ಮ ಮನೆ ಅಥವಾ ಆಫಿಸಿನ ಕ್ಯಾಲೆಂಡರ್ ಬದಲಿಸಿ ನನ್ನಲ್ಲಿ ಯಾವ ಬದಲಾವಣೆಯನ್ನೂ ಬಯಸಬೇಡಿ…ನಾನು ಇರೋದೇ ಹೀಗೆ..!
ದೀಪಕ ಶಿಂಧೆ