spot_img
spot_img

ಸೆ.೨ ಮತ್ತು೩ ರಂದು ಪ್ರವಚನ ಮಂಗಲೋತ್ಸವ

Must Read

- Advertisement -

ಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತವಾಗಿ ಒಂದು ತಿಂಗಳ ಕಾಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಳೆದ ೨೪ ವರ್ಷಗಳಿಂದ ಪ್ರತಿವರ್ಷ ಜರುಗುತ್ತಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮ ಸೆ.೨ ಮತ್ತು ೩ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಮಂಡಳಿಯ ಮುರಿಗೆಪ್ಪ ಹುಬ್ಬಳ್ಳಿ ತಿಳಿಸಿದ್ದಾರೆ.

ಸೋಮವಾರ ಸೆ.೨ ರಂದು ರಾತ್ರಿ ೧೦ ಗಂಟೆಗೆ ಭಜನಾ ಕಾರ್ಯಕ್ರಮ ಜರುಗುವುದು, ಮಂಗಳವಾರ ಸೆ.೩ ರಂದು ಮುಂಜಾನೆ ೪ ಗಂಟೆಗೆ ವೇದಮೂರ್ತಿ ಶ್ರೀ ದಾನಯ್ಯ ಶಾಸ್ತ್ರಿಗಳು ಮಠಪತಿ ಅವರ ವೈದಿಕತ್ವದಲ್ಲಿ ಶ್ರೀ ಬಸವೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಜರುಗುವುದು. ಮುಂಜಾನೆ ೯ ಗಂಟೆಗೆ ಸಕಲ ಮಂಗಲ ವಾದ್ಯಗಳೊಂದಿಗೆ ಕುಂಭೋತ್ಸವ ಹಾಗೂ ಶ್ರೀ ಬಸವೇಶ್ವರ ಪಲ್ಲಕ್ಕಿ ಉತ್ಸವ ಜರುಗುವುದು.

ನಂತರ ಜರುಗುವ ಧರ್ಮ ಸಭೆಯಲ್ಲಿ ಮುನ್ಯಾಳ-ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಶ್ರೀಗಳು, ಬನಹಟ್ಟಿಯ ಶ್ರೀ ಶರಣಬಸವ ಶಿವಾಚಾರ್ಯ ಶ್ರೀಗಳು, ಚಿಮ್ಮಡದ ಶ್ರೀ ಪ್ರಭು ಶ್ರೀಗಳು, ಚಿಪ್ಪಲಕಟ್ಟಿಯ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು, ರಬಕವಿಯ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಮತ್ತು ಪ್ರವಚನಕಾರ ರನ್ನಬೆಳಗಲಿಯ ಶ್ರೀ ಸಿದ್ಧರಾಮ ಶಿವಯೋಗಿ ಶ್ರೀಗಳು ಆಶೀವರ್ಚನ ನೀಡುವರು ಹಾಗೂ ಅರಭಾವಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಭಾಗವಹಿಸುವರು. ಮಧ್ಯಾಹ್ನ ೧೨ಕ್ಕೆ ಅನ್ನಪ್ರಸಾದ ಜರುಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group