spot_img
spot_img

ಜ.೭ ರಂದು ಸಾಹಿತ್ಯ ಸಿರಿ ಪ್ರದಾನ ಹಾಗೂ ವಿಚಾರ ಸಂಕಿರಣ

Must Read

- Advertisement -

ಸಿಂದಗಿ: ಜ.೭ ರಂದು ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಕಲಬುರ್ಗಿ ಫೌಂಡೇಶನ್, ಡಾ. ಎಂ.ಎಂ ಕಲಬುರ್ಗಿ ಸಹಯೋಗದಲ್ಲಿ ವಚನ ಸಿರಿ ಮತ್ತು ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಜಾನಪದ ವಿದ್ವಾಂಸ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು.

ಪಟ್ಟಣದ ಬಸವ ಮಂಟಪದಲ್ಲಿ ಜ. ೭ ರಂದು ನಡೆಯುವ ಕಾರ್ಯಕ್ರಮದ ಪೂರ್ವಭಾವಿಯಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಿಗ್ಗೆ ೯.೪೦ ಗಂಟೆಗೆ ವಚನ ಪ್ರಾರ್ಥನೆಯೊಂದಿಗೆ ಷಟ್ಸ್ಥಲ ಧ್ವಜಾರೋಹಣ ನಂತರ ೧೦ ಗಂಟೆಗೆ ನ್ಯೂಜಿಲೆಂಡ್ ಏಷ್ಯಾ ಪೆಸಿಫಿಕ್ ಬಸವ ಸಮಿತಿ ಚೇರ್ಮನ್ ಡಾ. ಲಿಂಗಣ್ಣ ಕಲಬುರ್ಗಿ ಅವರ ಅಧ್ಯಕ್ಷತೆಯಲ್ಲಿ ಶಾಸಕ ರಮೇಶ ಭೂಸನೂರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧಾರವಾಡ ಅಂತಾರಾಷ್ಟ್ರೀಯ ಹಿಂದೂಸ್ತಾನಿ ಗಾಯಕ ಡಾ. ಮೃತ್ಯುಂಜಯ ಶೆಟ್ಟರ ಆಗಮಿಸಲಿದ್ದಾರೆ.

೧೧.೩೦ ಗಂಟೆಗೆ ಗೋಷ್ಠಿ ೧. ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ವಿಚಾರ ಸಂಕಿರಣದಲ್ಲಿ ದಾರವಾಡ ಖ್ಯಾತ ಸಂಶೋಧಕಿ ಡಾ. ವೀಣಾ ಹೂಗಾರ ನನ್ನ ಗುರು, ಇಂಡಿಯ ಡಾ. ಎಸ್.ಕೆ.ಕೊಪ್ಪಾ ಶಾಸನ ಅಧ್ಯಯನಗಳು, ವಿಜಯಪುರ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಸಂಚಾಲಕ ಡಾ ಎಂ.ಎಸ್.ಮದಬಾವಿ ಅವರು ವಚನಾಧ್ಯಯನಗಳು ಎಂಬ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಆಗಮಿಸಲಿದ್ದಾರೆ.

- Advertisement -

ಮದ್ಯಾಹ್ನ ೧ ಗಂಟೆಗೆ ಗೋಷ್ಠಿ ೨ ರಲ್ಲಿ ಡಾ ಮೃತ್ಯುಂಜಯ ಶೆಟ್ಟರ, ನಯನಾ ಗಿರಿಗೌಡರ, ವಿಧಾ ಮಗದುಮ್ ವಚನ ಗಾಯನ ಮಾಡಲಿದ್ದಾರೆ.

ಗೋಷ್ಠಿ-೩ ಮಹಿಳಾ ಗೋಷ್ಠಿಯ ಬಾದಾಮಿಯ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ. ಶಾರದಾ ಪಾಟೀಲ ಅಧ್ಯಕ್ಷತೆಯಲ್ಲಿ ಶರಣೆ ಪ್ರೇಮಕ್ಕ ಅಣ್ಣಿಗೇರಿ ಗೋಷ್ಟಿಯನ್ನು ಉದ್ಘಾಟಿಸಲಿದ್ದಾರೆ.

ಮದ್ಯಾಹ್ನ ೩ ಗಂಟೆಗೆ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭದ ವಿಶ್ರಾಂತ ಪ್ರಾಚಾರ್ಯ ಬಿ.ಎಂ.ಬಿರಾದಾರ ಅಧ್ಯಕ್ಷತೆಯಲ್ಲಿ ವಚನ ಸಿರಿ ಪ್ರಶಸ್ತಿ ಭಾಜನರಾದ ಸಾಂಗ್ಲಿ ಜಿಪಂ ಮಾಜಿ ಸಭಾಪತಿ ಸುಜಾತಾ ಪಾಟೀಲ, ಸಾಹಿತ್ಯ ಸಿರಿ ಪ್ರಶಸ್ತಿಗೆ ಭಾಜನರಾದ ಪುಣೆ ವಚನ ಅಧ್ಯಯನ ವೇದಿಕೆಯ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ಅವರನ್ನು ಉಮಾದೇವಿ ಎಂ.ಕಲಬುರ್ಗಿ ಅವರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಕಾರಣ ಈ ಕಾರ್ಯಕ್ರಮಕ್ಕೆ ಕಲಬುರ್ಗಿ ಅಭಿಮಾನಿಗಳು, ಸಾಹಿತ್ಯಾಭಿಮಾನಿ ಬಳಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿಕೊಂಡರು.

- Advertisement -

ಈ ಪತ್ರಿಕಾಗೋಷ್ಠಿಯಲ್ಲಿ ಡಾ ಲಿಂಗಣ್ಣ ಕಲಬುರ್ಗಿ, ಡಾ. ಸಿ.ಕೆ ಕಟ್ಟಿ, ಶಿಪ್ಪ ಗವಸಾನಿ, ಶಿವಲಿಂಗಪ್ಪ ಕಲಬುರ್ಗಿ, ಆರ್.ಆರ್. ಪಾಟೀಲ, ಶಿವಾನಂದ ಕಲಬುರ್ಗಿ ಇದ್ದರು.

- Advertisement -
- Advertisement -

Latest News

ಎಸ್ ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗೆ ಸತ್ಕಾರ

ಮುಧೋಳ:  ನಗರ ಶಾಮೇಲ್ಸ್ ಪ್ರೌಢ ಶಾಲೆಯ  ಸಹನಾ ಶ್ರೀಶೈಲ್ ಚಿಕಲಕ್ಕಿ ವಿದ್ಯಾರ್ಥಿ ಕಳೆದ ಮಾರ್ಚ-ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್.ಎಸ್. ಎಲ್. ಸಿ ಪರೀಕ್ಷೆಯ ಮರು ಮೌಲ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group