Homeಸುದ್ದಿಗಳುರಾಣಿ ಚನ್ನಮ್ಮ ವಿವಿಯ ಅಂತರ ಕಾಲೇಜು ಬಾಲ್-ಬ್ಯಾಡ್ಮಿಂಟನ್ ಟೂರ್ನಿ

ರಾಣಿ ಚನ್ನಮ್ಮ ವಿವಿಯ ಅಂತರ ಕಾಲೇಜು ಬಾಲ್-ಬ್ಯಾಡ್ಮಿಂಟನ್ ಟೂರ್ನಿ

ಮೂಡಲಗಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ತಂಡ ಚಾಂಪಿಯನ್

ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಬಿ.ಪಿ.ಇಡಿ ಮತ್ತು ಎಮ್.ಪಿ.ಇಡಿ ಮಹಾವಿದ್ಯಾಲಯದ ಆಶ್ರಯದಲ್ಲಿ  ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಜರುಗಿದ ಹಮ್ಮಿಕೊಂಡ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಅಂತರ ಮಹಾವಿದ್ಯಾಲಯಗಳ ಪುರುಷರ ಬಾಲ್-ಬ್ಯಾಡ್ಮಿಂಟನ್ ಪಂದ್ಯಾವಳಿ ಗುರುವಾರ ಮುಕ್ತಾಯಗೊಂಡ ಪಂದ್ಯಾವಳಿಯಲ್ಲಿ ಮೂಡಲಗಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಬಾಲ್ ಬ್ಯಾಡ್ಮಿಂಟನ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.

ಗುರುವಾರದಂದು ಜರುಗಿದ ಉಪಾಂತ್ಯ ಪಂದ್ಯದಲ್ಲಿ ಮೂಡಲಗಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ತಂಡ ಹುನಗುಂದ ವಿ.ಎಂ.ಎಸ್.ಆರ್.ವಿ ಕಾಲೇಜು ತಂಡವನ್ನು 35-22, 35-27 ಅಂಕಗಳಿಂದ ಸೋಲಿಸಿತು, ತಾಳಿಕೋಟಿ  ಎಸ್.ಕೆ.ಎಸ್ ಕಾಲೇಜು ತಂಡ ಬನಹಟ್ಟಿ ತಂಡವನ್ನು 35-31, 33-35, 26-35 ಅಂಕಗಳಿಂದ ಸೋಲಿಸಿ ಅಂತಿಮ ಅಂತ್ಯಕ್ಕೆ ತಲುಪಿದವು.

ಅಂತಿಮ ಪಂದ್ಯದಲ್ಲಿ ಮೂಡಲಗಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ತಂಡ ತಾಳಿಕೋಟಿ ತಂಡವನ್ನು 35-21, 35-29 ಎರಡೂ ನೇರ ಸೆಟ್‍ಗಳಿಂದ ಸೋಲಿಸಿ ಚಾಂಪಿಯನ್ ಪಡೆಯಿತು. ತಾಳಿಕೋಟಿ ತಂಡ ದ್ವಿತೀಯ ಸ್ಥಾನ ಪಡೆದರೆ ಬನಹಟ್ಟಿ ತಂಡ ಮೂರನೇ ಸ್ಥಾನ ಪಡೆಯಿತು. ಪಂದ್ಯಾವಳಿಯ ಸರ್ವೋತ್ತಮ ಆಟಗಾರ ಪ್ರಶಸ್ತಿಯನ್ನು ಮೂಡಲಗಿ ತಂಡ ಮಲ್ಲು ಸವದಿ ಪಡೆದುಕೊಂಡರು. 

ಬಹುಮಾನ ವಿತರಣೆ: ಆರ್‍ಸಿಯು ಅಂತರ ಕಾಲೇಜು ಬಾಲ್-ಬ್ಯಾಡ್ಮಿಂಟನ್ ಟೂರ್ನಿಯ ವಿಜೇತ ತಂಡಗಳಿಗೆ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ನಿರ್ದೇಶಕ ವಿಜಯಕುಮಾರ ಸೋನವಾಲಕರ, ಮೂಡಲಗಿ ಪಿಎಸ್‍ಐ ಹಾಲಪ್ಪ ಬಾಲದಂಡಿ, ಡಾ.ಎಸ್.ಎಸ್.ಪಾಟೀಲ, ರಾ.ಚ.ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜಗದೀಶ ಗಸ್ತಿ ಬಹುಮಾನ ವಿತರಿಸಿದರು. 

ಬಹುಮಾನ ವಿತರಣಾ ಸಮಾರಂಭದಲ್ಲಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ, ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಮ.ಕೆ.ಕಂಕಣವಾಡಿ, ರಾಣಿ ಚನ್ನಮ್ಮ ವಿವಿ ಬಾಲ್ ಬ್ಯಾಡ್ಮಿಂಟನ್ ತಂಡ ಆಯ್ಕೆದಾರರಾದ ಡಾ.ವೆಂಕಟಚಲಪತಿ, ಡಾ.ಹರೀಶ ಪಿ.ಎಂ, ಮಂಜಣ್ಣ ಬಿ.ಪಿ ಮತ್ತಿತರರು ಇದ್ದರು.

ದೈಹಿಕ ಉಪನ್ಯಾಸಕರಾದ ಬಿ.ಎಸ್.ಕಂಬಾರ ನಿರೂಪಿಸಿದರು,  ಭೀಮಶಿ ಬಡಗಣ್ಣವರ ಸ್ವಾಗತಿಸಿ, ಎಲ್.ಬಿ.ಮನಾಪೂರ ವಂದಿಸಿದರು.

RELATED ARTICLES

Most Popular

close
error: Content is protected !!
Join WhatsApp Group