- Advertisement -
ಸಿಂದಗಿ: ನಗರದ ಕಾಂಗ್ರೆಸ್ ಪಕ್ಷದ ವತಿಯಿಂದ ವಾರ್ಡ್ ನಂಬರ್ 9 ಮತ್ತು 6 ರಲ್ಲಿ ವಿಜಯಪುರ ಲೋಕಸಭಾ -04 ಚುನಾವಣೆ ಅಂಗವಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಶಾಸಕರಾದ ಅಶೋಕ ಮನಗೂಳಿ ಯವರು ಬಿಡುಗಡೆ ಗೊಳಿಸಿದರು.
ಇದೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷರಾದ ಶ್ರೀಶೈಲ ಕೌಲಗಿ, ಯೋಜನೆಯ ಸದಸ್ಯರಾದ ಸುನಂದಾ ಯಂಪುರೆ, ರಜತ ತಾಂಬೆ, ಪುರಸಭೆ ಸದಸ್ಯರಾದ ಹಸೀಮ ಆಳಂದ, ಹಣಮಂತ ಸುಣಗಾರ, ಸದಸ್ಯರಾದ ಬಸವರಾಜ ಯರನಾಳ, ಆಶ್ರಯ ಸಮಿತಿ ನಾಮ ನಿರ್ದೇಶಕ ಸದಸ್ಯರಾದ ರಹೀಮ ದುದನಿ, ಪಕ್ಷದ ಮುಖಂಡರಾದ ಅಮೀನುದ್ದಿನ ವಾಲಿಕಾರ, ಇಸ್ಮಾಯಿಲ್ ಆಳಂದ, ಚಾಂದಸಾಬ ಆಲಮೇಲ, ಅಹ್ಮದ್ ಸಿಂಧೆ, ಬಂದೇನವಾಜ್ ಕರ್ಜಗಿ, ಮೈಬುಸಾಬ ಕರ್ಜಗಿ, ಮೈಬೂಬ್ ಮರ್ತುರ, ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.