spot_img
spot_img

ಮಲ್ಲಿಕಾರ್ಜುನ ಖರ್ಗೆಯವರ ಜೀವನ ಕಥನ ಕೃತಿ ಬಿಡುಗಡೆ

Must Read

- Advertisement -

ಇದೇ ಜುಲೈ 21 ರಂದು ಪ್ರೊ. ಎಚ್.ಟಿ.ಪೋತೆ ಅವರ “ಬಾಬಾಸಾಹೇಬರೆಡೆಗೆ” ಶ್ರೀ ಮಲ್ಲಿಕಾರ್ಜುನ ಖರ್ಗೆಜಿ ಯವರ ಜೀವನ ಕಥನ ಕೃತಿ ಬಿಡುಗಡೆ ಮತ್ತು ವಿಶೇಷೋಪನ್ಯಾಸವನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕುಟುಂಬ ಪ್ರಕಾಶನ, ಕಲಬುರಗಿ ಸಹಯೋಗದೊಂದಿಗೆ ಏರ್ಪಡಿಸಲಾಗಿದೆ.
ಬೆಳಿಗ್ಗೆ 10.30ಕ್ಕೆ ನಗರದ ಕುಮಾರಪಾರ್ಕ್‍ನಲ್ಲಿರುವ ಗಾಂಧಿ ಭವನದಲ್ಲಿ ಪ್ರೊ. ಎಚ್.ಟಿ.ಪೋತೆ ಅವರ “ಬಾಬಾಸಾಹೇಬರೆಡೆಗೆ” ಶ್ರೀ ಮಲ್ಲಿಕಾರ್ಜುನ ಖರ್ಗೆಜೀ ಅವರ ಜೀವನ ಕಥನ ಕೃತಿ ಬಿಡುಗಡೆ ಮತ್ತು ವಿಶೇಷೋಪನ್ಯಾಸವನ್ನು ಆಯೋಜಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ನಾಡೋಜ ಪ್ರೊ.ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ಗ್ರಂಥ ಲೋಕಾರ್ಪಣೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮತ್ತು ಗಾಂಧಿ ಶಾಂತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಭಾಗವಹಿಸುವರು. ಕವಿ ಹಾಗೂ ಸಂಸ್ಕೃತಿ ಚಿಂತಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿರವರು ‘ಪ್ರಸ್ತುತ ಭಾರತ : ಗಾಂಧೀ ಮತ್ತು ಬಿ.ಆರ್.ಅಂಬೇಡ್ಕರ್’ ವಿಷಯದ ಕುರಿತು ವಿಶೇಷೋಪನ್ಯಾಸವನ್ನು ನಡೆಸಿಕೊಡುವರು.

ಕೃತಿಯ ಲೇಖಕ ಗುಲಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮತ್ತು ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್ ಉಪಸ್ಥಿತರಿರುವರು ಎಂದು ಆಯೋಜಕರು ತಿಳಿಸಿರುತ್ತಾರೆ.

- Advertisement -

ಕೃತಿಯ ಕುರಿತು : ಬಾಬಾಸಾಹೇಬರೆಡೆಗೆ ಖರ್ಗೆ ಜೀವನಕಥನ – ಪ್ರೊ.ಎಚ್.ಟಿ. ಪೋತೆ

ಬಾಬಾಸಾಹೇಬರೆಡೆಗೆ ಖರ್ಗೆ ಜೀವನಕಥನ ಪುಸ್ತಕವು ಕುಟುಂಬ ಪ್ರಕಾಶನ ಕಲಬುರಗಿ ಪ್ರಕಟಿಸಿದೆ. ಈ ಪುಸ್ತಕವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು, ಕಲಾನಿಕಾಯದ ಡೀನರು ಆದ ಪ್ರಿ. ಎಚ್.ಟಿ. ಪೋತೆ ಅವರು ಬರೆದಿದ್ದಾರೆ. ಪುಸ್ತಕವು ಒಟ್ಟು 18 ಅಧ್ಯಾಯಗಳನ್ನು ಒಳಗೊಂಡಿದೆ.

ಬಾಬಾಸಾಹೇಬರೆಡೆಗೆ ಖರ್ಗೆ ಜೀವನಕಥನ ಕೇವಲ ಮಲ್ಲಿಕಾರ್ಜುನ ಖರ್ಗೆಯವರ ಜೀವನ ಚರಿತ್ರೆ ಮಾತ್ರವಾಗಿರದೆ. ಅವರ ಬದುಕಿನ ಸಮಗ್ರ ಮಾಹಿತಿಗಳನ್ನೊಳಗೊಂಡ ಪುಸ್ತಕ ಇದಾಗಿದೆ. ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿಯಿಂದ ದೆಹಲಿಯವರೆಗೆ ಅವರು ನಡೆದು ಬಂದ ಈ ಚರಿತ್ರೆಯಲ್ಲಿ ಕಟ್ಟಿಕೊಟ್ಟಿದೆ.

- Advertisement -

ಅವರ ಜೀವನದ ಎಲ್ಲ ಮಜುಲುಗಳನ್ನು ಪರಿಚಯಿಸಿಕೊಡುವಲ್ಲಿ ಪುಸ್ತಕ ಯಶಸ್ವಿಯಾಗಿದೆ. ಪ್ರೊ. ಎಚ್.ಟಿ. ಪೋತೆಯವರು ಪುಸ್ತಕವನ್ನು ಸಮರ್ಥವಾಗಿ ನಿರೂಪಿಸಿದ್ದಾರೆ. ಖರ್ಗೆಜಿಯವರ ಬಾಲ್ಯದ ಆ ದಿನಗಳು, ಶಿಕ್ಷಣ, ಚಳವಳಿ-ಹೋರಾಟ, ರಾಜಕೀಯ, ಧಾರ್ಮಿಕ, ಸಾಮಾಜಿಕ ಚಿಂತನೆಗಳು, ಜನಪರ ಕಾಳಜಿ ಮತ್ತು ರಾಷ್ಟ್ರ ನಾಯಕರಾಗಿ ದೆಹಲಿಯ ಲೋಕಸಭೆಯಲ್ಲಿ ಮಾತಾನಾಡಿದ ಚರ್ಚೆ/ಭಾಷಣಗಳು ಇವೆಲ್ಲವನ್ನು ಒಳಗೊಂಡಿವೆ.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group