ಮೂಡಲಗಿ – ಎಲ್ಲ ಜಾತಿಯ ಎಲ್ಲ ಎಲ್ಲೆಯನ್ನು ಮೀರಿ ಎಲ್ಲಾ ಜಾತಿಯ ಜನರಿಗೆ ಉಪಯೋಗವಾಗುವ ಮೌಲ್ಯಗಳನ್ನು ಸಮಾನತೆಯ ಮೌಲ್ಯಗಳನ್ನು ಸಮಾಜಕ್ಕೆ ಕೊಟ್ಟವರು ಶ್ರೀಮದ್ ಜಗದ್ಗುರು ಶ್ರೀ ರೇಣುಕಾಚಾರ್ಯರು ಎಂದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದ ಶ್ರೀ ರೇಣುಕಾಚಾರ್ಯರ ಜಯಂತಿಯ ಉತ್ಸವವನ್ನು ಜ್ಯೋತಿ ಬೆಳಗಿಸುವ ಮುಲಕ ಉದ್ಘಾಟಿಸಿ ಮಾತನಾಡಿದ ಶ್ರೀಗಳು ವೀರಶೈವ ಧರ್ಮ ಪರಂಪರೆಯಲ್ಲಿ ಮೂರು ಚಿಂತನೆಗಳು ಅಷ್ಟಾವರ್ಣ, ಪಂಚಾಚಾರ, ಷಟ್‌ಸ್ಥಲ. ಅಷ್ಟಾವರ್ಣ ಎಂದರೆ ಗುರು, ಲಿಂಗ ಜಂಗಮ , ವಿಭೂತಿ , ರುದ್ರಾಕ್ಷಿ , ಮಂತ್ರ , ಪಾದೋದಕ , ಪ್ರಸಾದ. ಪಂಚ ಆಚಾರಗಳು ಎಂದರೆ ಲಿಂಗಾಚಾರ , ಸದಾಚಾರ , ಶಿವಾಚಾರ , ಘನಾಚಾರ , ವೃತ್ತಾಚಾರ. ಷಟಸ್ಥಲಗಳು ಎಂದರೆ ಭಕ್ತ , ಮಹೇಶ , ಪ್ರಸಾದಿ, ಪ್ರಾಣಲಿಂಗಿ , ಶರಣ , ಐಕ್ಯ ಇವು ಮೂರು ಚಿಂತನೆಗಳು ಈ ಮೌಲ್ಯಗಳ ಪ್ರತಿಪಾದನೆಯನ್ನು ಮೀರಿ ಎಲ್ಲಾ ಜಾತಿಯ ಜನರಿಗೆ ಉಪಯೋಗವಾಗುವ ಮೌಲ್ಯಗಳನ್ನು ಸಮಾನತೆಯ ಮೌಲ್ಯಗಳನ್ನು ಸಮಾಜಕ್ಕೆ ಕೊಟ್ಟವರು ಶ್ರೀಮದ್ ಜಗದ್ಗುರು ಶ್ರೀ ರೇಣುಕಾಚಾರ್ಯರು ಎಂದರು.
ವೀರಶೈವ ಧರ್ಮ ಪರಂಪರೆಗೆ ಬಹಳ ಹೆಸರುಗಳು ಇವೆ ಇದಕ್ಕೆ ಸನಾತನ ಧರ್ಮ ಅಂತಲೂ ಕರೆಯುತ್ತಾರೆ ಸನಾತನ ಧರ್ಮ ಎಂದರೆ ಹಿಂದೆ ಇದ್ದು ಈಗ ಇರುವ ಮುಂದೆಯೂ ಇರುವ ಶಾಶ್ವತ ಮಾನವೀಯ ಮೌಲ್ಯಗಳನ್ನು ಯಾವ ಧರ್ಮ ಒಳಗೊಂಡಿರುತ್ತದೆಯೋ ಅದಕ್ಕೆ ಸನಾತನ ಧರ್ಮ ಎನ್ನುತ್ತಾರೆ ಆ ಎಲ್ಲ ಜೀವನದ ಮೌಲ್ಯಗಳನ್ನು ವೀರಶೈವ ಧರ್ಮ ಒಳಗೊಂಡಿದೆ ಎಂದರು.
ಮಂಗಳವಾರ ಮುಂಜಾನೆ ಶರಣ ಮಾತೆಯರಿಂದ ಪವಿತ್ರ ಉದಕ ಕುಂಭ ಮತ್ತು ಮುತೈದೆಯರ ಆರತಿಗಳೊಂದಿಗೆ ಶ್ರೀಮದ್ ಜಗದ್ಗುರು ರೇಣುಕಾಚಾರ್ಯರ ದಿವ್ಯಮುರ್ತಿಯ ಭವ್ಯ ಮೆವಣಿಗೆಯು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಗ್ರಾಮದೇವತೆ ಶ್ರೀ ಹೊನ್ನಮ್ಮದೇವಿ ದೇವಸ್ಥಾನದವರೆಗೆ ನಡೆಯಿತು.
ಬಾಗೋಜಿಕೊಪ್ಪದ ಶಿವಲಿಂಗ ಶಿವಾಚಾರ್ಯರು ಮಾತನಾಡಿ, ಜಾತಿಯ ಕೆಲಸವೆ ಬೇರೆ ಧರ್ಮದ ಕೆಲಸವೆ ಬೇರೆ ಜಾತಿಯು ಕತ್ತರಿಯ ಕೆಲಸ ಮಾಡುತ್ತದೆ ಧರ್ಮ ಸೂಜಿಯ ಕೆಲಸ ಮಾಡುತ್ತದೆ . ನೀವು ಟೇಲರನ ಗಮನಿಸಿ ಅವನು ಕತ್ತರಿಯನ್ನು ಒಂದು ಕಡೆ ದೂರ ಇಟ್ಟಿರುತ್ತಾನೆ ಅದರೆ ಸೂಜಿಯನ್ನು ತನ್ನ ತಲೆಯ ಟೋಪಿಗೆ ಚುಚ್ಚಿಕೊಂಡಿರುತ್ತಾನೆ ಏಕೆ ಅಂದರೆ ಕತ್ತರಿಯ ಕೆಲಸ ಒಂದು ಬಟ್ಟೆಯನ್ನು ಹತ್ತಾರು ತುಂಡುಗಳನ್ನಾಗಿ ಮಾಡುವುದು , ಸೂಜಿಯ ಕೆಲಸ ಹತ್ತಾರು ತುಂಡುಗಳನ್ನು ಒಂದು ಮಾಡುವುದು ಅದೇ ರೀತಿ ಜಾತಿಯು ನಮ್ಮನ್ನು ಹಲವಾರು ತುಂಡುಗಳನ್ನಾಗಿ ಮಾಡುತ್ತದೆ ಧರ್ಮವು ಸೂಜಿಯಂತೆ ಎಲ್ಲರನ್ನು ಒಂದು ಮಾಡುವ ಕೆಲಸ ಮಾಡುತ್ತದೆ ಎಂದರು ನಾವೆಲ್ಲರೂ ಧರ್ಮವಂತರಾಗಬೇಕು ಅನ್ನುವ ಉಪದೇಶವನ್ನು ಜಗತ್ತಿಗೆ ಮೊಟ್ಟಮೊದಲು ಕೊಟ್ಟವರೆ ಶ್ರೀಮದ ಜಗದ್ಗುರು ರೇಣುಕಾಚಾರ್ಯರು ಎಂದರು .
ನಮ್ಮ ಮಕ್ಕಳಿಗೆ ನಾವು ನಮ್ಮ ಧರ್ಮ ಯಾವುದು ನಮ್ಮ ಧರ್ಮ ಗ್ರಂಥ ಯಾವುದು ನಮ್ಮ ಗ್ರಂಥದ ಬಾಯಲಾ ಯಾವುದು ಎಂದು ತಿಳಿಹೇಳಬೇಕು ನಮ್ಮ ಮಕ್ಕಳಿಗೆ ಮುಸ್ಲಿಮ್‌ರ ಧರ್ಮಗಂಥ ಕುರಾನ ಅಂತಾ ಗೊತ್ತು ಕ್ರಿಶ್ಚಿಯನರ ಧರ್ಮಗ್ರಂಥ ಬೈಬಲ ಅಂತ ಗೊತ್ತು ಆದರೆ ನಮ್ಮ ವೀರಶೈವ ಧರ್ಮಗ್ರಂಥ ಸಿದ್ದಾಂತ ಶಿಖಾಮಣಿ ಅಂತ ಗೊತ್ತಿಲ್ಲ ಇದನ್ನು ಹೇಳುವ ಕೆಲಸ ನಮ್ಮ ತಾಯಂದಿರು ಮಾಡಬೇಕು ಧರ್ಮದ ಬಗ್ಗೆ ನಮ್ಮ ತಾಯಂದಿರು ತಿಳ್ಕೋಬೇಕು ಮಕ್ಕಳಿಗೂ ತಿಳಿಹೇಳಬೇಕು ಎಂದರು.
ಜಂಗಮ ಸಮಾಜದ ಸಂಘಟನೆಯಿಂದ ಎಲ್ಲ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು . ಈ ಸಂದರ್ಭದಲ್ಲಿ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಶ್ರೀಗಳು , ಶ್ರೀ ಬಸವಲಿಂಗ ಶ್ರೀಗಳು ,ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು, ,ಚೌಕಿಮಠದ ಶ್ರೀಗಳು , ಯಾದವಾಡ ಗ್ರಾಮದ ಜಂಗಮ ಸಮಾಜದ ಎಲ್ಲ ಕುಟುಂಬದವರು, ಗುರುಮಾತೆಯರು ಗ್ರಾಮದ ಅನ್ಯ ಸಮಾಜದ ಪ್ರಮುಖರು ಮತ್ತು ಗುರುಹಿರಿಯರು ಉಪಸ್ಥಿತರಿದ್ದರು.