spot_img
spot_img

ಜನತೆಯ ಆರೋಗ್ಯಕ್ಕಾಗಿ ೧೨೦ ಕೋಟಿ ರೂ. ಮಂಜೂರು – ಶಾಸಕ ಮನಗೂಳಿ

Must Read

spot_img
- Advertisement -

ಸಿಂದಗಿ; ತಾಲೂಕು ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಚಿಕಿತ್ಸೆ ಪಡೆದುಕೊಳ್ಳಲು ಅಸಹಾಯಕತೆ ವ್ಯಕ್ತ ಪಡಿಸುತ್ತಿದ್ದರು ಉತ್ತಮವಾದ ಚಿಕಿತ್ಸೆ ಪಡೆದು ಆರೋಗ್ಯ ಸುಧಾರಣೆಗೆ ಸಾರ್ವಜನಿಕರು ಸಮಸ್ಯೆಗಳನ್ನು ಎದುರಿಸಬಾರದು ಎನ್ನುವ ನಿಟ್ಟಿನಲ್ಲಿ ಮೂಲ ಸೌಕರ್ಯಗಳಿಗಾಗಿ ರೂ. ೧೨೦ ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಜನರು ಆರೋಗ್ಯವಂತ ಜೀವನ ಸಾಗಿಸಬೇಕು ಇದರ ಸದುಪಯೋಗವಾಗಲಿ ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ವಿಜಯಪುರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜನೀರಿಂಗ ಘಟಕ ಬೆಂಗಳೂರು, ೪೨೧೦-೦೧-೧೧೦-೧-೦೧-೧೩೩ ಯೋಜನೆಯ ಅನುದಾನ ಅಡಿಯಲ್ಲಿ ತಾಲೂಕು ಆಸ್ಪತ್ರೆಯ ಮೂಲ ಸೌಕರ್ಯಗಳ ಉನ್ನತೀಕರಣ ರೂ. ೧೨೦ ಕೋಟಿ ವೆಚ್ಚದ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಲಮೇಲ ಆಸ್ಪತ್ರೆ ರೂ ೨೦ ಲಕ್ಷ, ಮೋರಟಗಿ ಆಸ್ಪತ್ರೆಗೆ ರೂ ೪೦ ಲಕ್ಷ ಅಲ್ಲದೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಚಾಂದಕವಟೆ, ಮಲಗಾಣ ಸೇರಿದಂತೆ ಹಲವರು ಗ್ರಾಮಗಳಲ್ಲಿನ ಆಸ್ಪತ್ರೆಗಳ ಉನ್ನತೀಕರಣಕ್ಕೆ ಅನುದಾನ ಮಂಜೂರು ಪಡಿಸಲಾಗಿದೆ. ತಾಲೂಕು ಆಸ್ಪತ್ರೆಯ ಹೆಡ್ ರೂಮ್, ಮೇಲ್ಛಾವಣಿ ದುರಸ್ತಿ ಹೊರಗಡೆ ಕಾಂಕ್ರೀಟ್ ಅಳವಡಿಸುವುದು, ಶೌಚಾಲಯ, ಹಾಗೂ ಒಳಚರಂಡಿ ದುರಸ್ಥಿ, ಎರಡು ಸೆಪ್ಟಿಕ ಟ್ಯಾಂಕಗಳ ನಿರ್ಮಾಣ, ಕಿತ್ತುಹೋದ ಹೊರಗೋಡೆಗಳ ಪ್ಲಾಸ್ಟರಿಂಗ್, ನೀರು ಸರಬರಾಜು ದುರಸ್ಥಿ, ನವೀಕರಣ, ಆಸ್ಪತ್ರೆಯ ಒಳಾಂಗಣ, ಹೊರಾಂಗಣ ಸುಣ್ಣ ಬಣ್ಣ ಮತ್ತು ವಿದ್ಯುತ್ತೀಕರಣ ದುರಸ್ಥಿ ಸೇರಿದಂತೆ ಇತರೆ ಕಾಮಗಾರಿಗಳನ್ನು ಗುಣಮಟ್ಟದಾಗಿ ನೋಡಿಕೊಳ್ಳುವಂತೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರು.

ದಂತ ವೈದ್ಯ ಡಾ. ರಮೇಶ ರಾಠೋಡ ಮಾತನಾಡಿ, ನನ್ನ ಸೇವಾವಧಿಯ ೨೫ ವರ್ಷಗಳಲ್ಲಿ ತಾಲೂಕು ಆಸ್ಪತ್ರೆಗೆ ಇಷ್ಟು ದೊಡ್ಡ ಮೊತ್ತದ ಅನುದಾನ ಬಂದಿರುವುದು ಇದೇ ಮೊದಲು ಈ ಅನುದಾನ ತರುವಲ್ಲಿ ಶಾಸಕ ಅಶೋಕ ಮನಗೂಳಿ ಅವರ ಕಾರ್ಯ ಶ್ಲಾಘನೀಯ ಎಂದರು.

- Advertisement -

ಈ ಸಂದರ್ಭದಲ್ಲಿ ಬ್ಲಾಕ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ. ಆರೋಗ್ಯ ಸುರಕ್ಷಾ ಸಮಿತಿ ಸದಸ್ಯ ಶಾಂತೂ ರಾಣಾಗೋಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜನೀರಿಂಗ ಉಪ ವಿಬಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಆರ್.ಜಾಧವ, ತಾಲೂಕಾ ಆಸ್ಪತ್ರೆ ಅಧಿಕಾರಿ ಡಾ. ಎ.ಎ.ಮಾಗಿ, ಡಾ. ಮಹಾಂತೇಶ ಹಿರೇಮಠ, ಗುತ್ತಿಗೆದಾರ ಎ.ಡಿ.ನದಾಫ್, ಚೇತನಗೌಡ ಪಾಟೀಲ, ಸಿಬ್ಬಂದಿಗಳಾದ ರಾಜಶೇಖರ ನರಗೋದಿ, ಈರಣ್ಣ ಪಾಟೀಲ ಸೇರಿದಂತೆ ಅನೇಕರಿದ್ದರು.

- Advertisement -
- Advertisement -

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group