spot_img
spot_img

ಸಾವನ್ನು ಸಂಭ್ರಮವಾಗಿ ಆಚರಿಸಿದ ಶರಣರು

Must Read

- Advertisement -

ಹುಟ್ಟು ಎಂಬ ಆರಂಭದ ಕಾಲದಲ್ಲಿ ಸಾವು ಅದಕ್ಕೆ ಪ್ರತಿಯಾಗಿ ಕೊನೆ ಎಂದರ್ಥ.

ಶರಣರಿಗೆ ಸಾವಿಲ್ಲ ಶರಣರು ಸಾವನ್ನು ಅರಿಯರು.

ಮರಣವೆ ಮಹಾನವಮಿ

- Advertisement -

ಹೀಗೆ ಸಾವು ಸೂತಕ ಸಾವು
ದುಃಖ ದುಮ್ಮಾನಗಳ ಬಂಧನದಲ್ಲಿ ಶೋಕ ಆಚರಿಸುವ ಅಗತ್ಯವಿಲ್ಲ.

ಶರಿಫರು ತಮ್ಮ ಸಾವಿನ ಮುಂಚೆ ‘ಬಿಡತೀನಿ ದೇಹ ಬಿಡತೀನಿ’ ಎಂದು ಹಾಡಿದ್ದು ದಾಖಲೆ ಇದೆ.

ಅಲ್ಲಮರು ‘ನಿಮ್ಮ ಸಾವನ್ನರಸುವೆ ಗುಹ್ವೆಶ್ವರ’ ಎಂದು ಹೇಳುತ್ತಾ ಜನರಲ್ಲಿರುವ ದೇವರ ಭಕ್ತಿ ಭೀತಿ ಭಯ ದೂರ ಮಾಡುತ್ತಾ ಭೌತಿಕ ದೇವರ ಸಾವನ್ನು ನೋಡಬೇಕೆನ್ನುವ ಅವರ ತಾತ್ವಿಕ ನಿಷ್ಠೆ ಒಂದು ಮಾದರಿ. ಅನೇಕ ಶರಣರು ಎಲ್ಲಿ ಐಕ್ಯ ಆದರು ಎನ್ನುವುದು ಒಂದು ಯಕ್ಷ ಪ್ರಶ್ನೆ.

- Advertisement -

ಉಳವಿಯ ಸಮೀಪ ಒಂದು ಪುಟ್ಟ ಊರು ಅದರ ಹೆಸರು
*ಹೆಣ ಕೊಳ್ಳ* ವಚನ ಚಳವಳಿಯಲ್ಲಿ ಪಾಲ್ಗೊಂಡ
ಅನೇಕ ಶರಣರು ದಾರಿಯಲ್ಲಿ ಸಾವಿಗೆ ತುತ್ತಾದರು. ಅವರ ಶವ ಸಂಸ್ಕಾರ ಮಾಡಲು ಆಗದ ಚೆನ್ನ ಬಸವಣ್ಣ ಮತ್ತು ಆತನ ಕೆಲವು ಸಹಚರರು ಸತ್ತ ಹೆಣಗಳನ್ನು ಕೊಳ್ಳಕ್ಕೆ ತಳ್ಳಿದರು.ಕಳೆದ ಕೆಲವು ವರ್ಷಗಳಲ್ಲಿ ನಾಡಿನ ಬಹು ದೊಡ್ಡ ಸ್ವಾಮಿಗಳು ಮಾತೆ ಅಕ್ಕ ಮುಂತಾದವರ ಶವ ಸಂಸ್ಕಾರ ಶರಣ ಪರಂಪರೆಯನ್ನು ಹೊರತುಪಡಿಸಿ ಅತ್ಯಂತ ಭವ್ಯ ಮಂಟಪ ವೇದಿಕೆ ಮೂಲಕ ಸಾವಿರಾರು ಜನರ ಸಮ್ಮುಖದಲ್ಲಿ ದಿವ್ಯ ಮೆರವಣಿಗೆ ಡೊಳ್ಳು ವಾದ್ಯ ಕರಡಿ ಮಜಲು ಹೀಗೆ ವೈಭವಯುಕ್ತ ಪ್ರಕ್ರಿಯೆ ಎಷ್ಟು ಸರಿ. ಅದರಲ್ಲಿ ಟಿವಿ ಮಾಧ್ಯಮಗಳು ನಾಡಿನ ಸಮಸ್ಯೆಗಳನ್ನೇ ಮರೆತು ಇಂತಹ ಕೆಲ ದೃಶ್ಯಗಳ ಬಿತ್ತರವು ಹಾಸ್ಯಾಸ್ಪದ.

ನಡೆದಾಡುವ ದೇವರು ಎಂದು
ಪ್ರತಿತಿ ಪಡೆದ ಅನೇಕ ಮಠಾಧಿಶರ ಶವ ಸಂಸ್ಕಾರ ಸಂಪೂರ್ಣ ವೈದಿಕ ಆಚರಣೆಯಲ್ಲಿ
ನಡೆದಿದ್ದು ವಚನ ಚಳವಳಿಯ ವೈರುಧ್ಯತೆಗೆ ಕೈಗನ್ನಡಿ. ಸಾವು ಖಂಡಿತ ನೋವು ತರುತ್ತದೆ ಆದರೆ ಶರಣ ಐಕ್ಯ ಸಂಸ್ಕೃತಿ ಪರಂಪರೆ ಬಿಟ್ಟು ಗದ್ದುಗೆ ಮಾಡಿ ಮುಂದೆ ಅಂತಹ ಗದ್ದುಗೆ ಪೂಜಿಸಿ ಕಾಯಿ ಕರ್ಪುರ ದೀಪ ಧೂಪ ಪ್ರಸಾದ ನಡೆದು ಸಂಪೂರ್ಣ ವೈದಿಕತೆಗೆ ಲಿಂಗಾಯತ ಮಠಗಳು ಆಶ್ರಮ ಪೀಠ ವಾಲುತ್ತಿವೆ.

ಬಸವ ತತ್ವ ಪ್ರಸಾರ ತೋರಿಕೆ ಆಗ ಬಾರದು. ಗುರು ಲಿಂಗ ಕಾಣ ಬಾರದ ಘನ ಸತ್ತವರಿಗೆ ಗೌರವ ನಮನ ಸಲ್ಲಿಸೋಣ
ಆದರೆ ಇದನ್ನೇ ದೊಡ್ಡ ಕಾರ್ಯ ಮಾಡಿ ಇನ್ನೊಂದು ಸ್ಥಾವರ ಹುಟ್ಟು ಹಾಕುವದು ಬೇಡ.

ಮಾಡುವನ್ತಿರ ಬೇಕು
ಮಾಡದಂತಿರ ಬೇಕು
ಮಾಡುವ ಮಾಟದೊಳಗೆ
ತಾನಿಲ್ಲದಂತಿರ ಬೇಕು
ಶರಣರ ನಿಲುವು ಉದಾತ್ಥಿಕರಣ ಸಿದ್ದಾಂತವು
ಶುದ್ಧೀಕರಣ (Sublimation)

ಬಸವ ತತ್ವ ಲಿಂಗಾಯತ ಧರ್ಮ ಆಚರಣೆಯಲ್ಲಿ ಅನೇಕ ಶೈವ ಆಚರಣೆಗಳ ವೈದಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಳವಡಿಸಿದ ಅನೇಕ ಪ್ರಸಂಗಗಳು ಕಂಡು ಬರುತ್ತವೆ.

ಹುಟ್ಟು ಸಾವು ಇವೆರಡು ನೈಸರ್ಗಿಕ ಪ್ರಕ್ರಿಯೆಗಳು

ಡಾ ಶಶಿಕಾಂತ ಪಟ್ಟಣ, ರಾಮದುರ್ಗ

- Advertisement -
- Advertisement -

Latest News

ಕವನ : ಹೀಗೇ ಒಮ್ಮೆ

ಹೀಗೇ ಒಮ್ಮೆ ____________ ಹೀಗೇ ಒಮ್ಮೆ ನಾನು ನೀನು ಅದೇ ಮರದ ನೆರಳಲಿ ಕುಳಿತು ಮಾತಾಡಬೇಕಿದೆ ನೆನಪಿಸಿಕೊಳ್ಳಬೇಕಿದೆ ಮತ್ತೆ ಹಳೆಯ ಕ್ಷಣಗಳ ಹಂಚಿಕೊಂಡ ಕಥೆ ಕವನ ಮಾತು ಚರ್ಚೆ ಸಂವಾದ ನಗೆ ಪ್ರೀತಿಯ ಸವಿಯ ಸವಿಯಬೇಕಿದೆ. ಆಗ ನಮ್ಮಿಬ್ಬರ ಮಧ್ಯೆ ಮೆರೆದ ಆದರ್ಶಗಳ ಮೆಲುಕು ಹಾಕಬೇಕಿದೆ ಅಂದು ಮಳೆಯಲ್ಲಿ ತಪ್ಪನೆ...
- Advertisement -

More Articles Like This

- Advertisement -
close
error: Content is protected !!
Join WhatsApp Group