- Advertisement -
ತಿಮ್ಮಾಪುರ: ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿನಿಯರು ಕುಂಭ ಹೊತ್ತು ದಾಖಲಾತಿ ಆಂದೋಲನದ ಪ್ರಭಾತಫೇರಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು
ಶಾಲೆಯ ಹಳೆಯ ವಿದ್ಯಾರ್ಥಿನಿಯರು ಕುಂಭ ಹೊತ್ತು ದಾಖಲಾತಿ ಆಂದೋಲನದ ಪ್ರಭಾತಫೇರಿಯಲ್ಲಿ ಭಾಗವಹಿಸಿದ್ದರು.
ತಾಯಂದಿರು ಹಾಗೂ ಶಿಕ್ಷಕರು ನೂತನವಾಗಿ ಶಾಲೆಗೆ ದಾಖಲಾಗುವ ಮಕ್ಕಳಿಗೆ ಆರತಿ ಬೆಳಗಿ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ವೀರನಗೌಡ ಮಾಗಿ, ಬಿ ಆರ್ ಪಿ ಗಿರಿಯಪ್ಪ ಆಲೂರ, ಸಿಆರ್‌ಪಿ ಸಂಗಪ್ಪ ಚಲವಾದಿ, ಎಸ್ ಡಿ ಎಂ ಸಿ ಅಧ್ಯಕ್ಷ ರಾಮನಗೌಡ ಪವಾಡಿಗೌಡ್ರ ಮುಖ್ಯಗುರು ಎಂ ಜಿ ಬಡಿಗೇರ, ಸಂಗಪ್ಪ ಈರಣ್ಣವರ, ಬಸವಂತಪ್ಪ ಕೊಣ್ಣೂರ ಶಿಕ್ಷಕ ಅಶೋಕ ಬಳ್ಳಾ ಸಿಬ್ಬಂದಿ ಉಪಸ್ಥಿತರಿದ್ದರು.