Homeಸುದ್ದಿಗಳುಅ.೩ರಿಂದ ಶ್ರೀ ವೇಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಶರನ್ನವರಾತ್ರಿ ಉತ್ಸವ

ಅ.೩ರಿಂದ ಶ್ರೀ ವೇಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಶರನ್ನವರಾತ್ರಿ ಉತ್ಸವ

ಮೈಸೂರು -ನಗರದ ಶ್ರೀರಾಂಪುರದಲ್ಲಿರುವ ಉತ್ತರಾದಿ ಮಠಕ್ಕೆ ಸೇರಿರುವ ಶ್ರೀ ವೇಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಅ.೩ರಿಂದ ೧೨ರವರೆಗೆ ಶ್ರೀ ೧೦೦೮ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಜ್ಙಾನುಸಾರ ಪ್ರತಿ ವರ್ಷದಂತೆ ಈ ವರ್ಷವೂ ‘ಶರನ್ನವರಾತ್ರಿ ಉತ್ಸವ’ವನ್ನು ಆಯೋಜಿಸಲಾಗಿದೆ.

ಪ್ರತಿದಿನ ಬೆಳಿಗ್ಗೆ ೮ಕ್ಕೆ ಪುರುಷರಿಂದ ‘ವಿಷ್ಣುಸಹಸ್ರನಾಮ ಪಾರಾಯಣ’, ಪಂ.ಶ್ರೀ ಶ್ರೀನಿವಾಸಾಚಾರ್ಯ ಋಗ್ವೇದಿ ಅವರ ನೇತೃತ್ವದಲ್ಲಿ ‘ಋಗ್ ಸಂಹಿತಾ ಹೋಮ’, ಶ್ರೀ ವೇಂಕಟೇಶ ದೇವರಿಗೆ ವಿನೂತನ ಅಲಂಕಾರ, ಬೆಳಿಗ್ಗೆ ೧೦.೩೦ಕ್ಕೆ ಸ್ತ್ರೀಯರಿಂದ ‘ವೇಂಕಟೇಶ ಸ್ತವರಾಜ ಪಾರಾಯಣ’, ಮಧ್ಯಾಹ್ನ ೧೧ಕ್ಕೆ ನಗರದ ವಿವಿಧ ಭಜನಾ ಮಂಡಳಿಯವರಿಂದ ‘ಭಜನೆ ಕಾರ್ಯಕ್ರಮ’, ಸಂಜೆ ೫ರಿಂದ ೫.೩೦ರವರೆಗೆ ಪಂ.ಹೇಮಂತಾಚಾರ್ಯ ಗುಡಿರವರಿಂದ ‘ಶ್ರೀ ವೇಂಕಟೇಶ ಮಹಾತ್ಮ್ಯೆ ಪ್ರವಚನ’, ಸಂಜೆ ೫.೩೦ರಿಂದ ೬ರವರೆಗೆ ಪಂ.ಜಯರಾಜ ಆಚಾರ್ಯರವರಿಂದ ‘ವಾಯು ಮಹಿಮೆ ಪ್ರವಚನ’, ಸಂಜೆ ೬ರಿಂದ ೭ರವರೆಗೆ ‘ಶ್ರೀ ವೇಂಕಟೇಶ ದೇವರಿಗೆ ವಿಷ್ಣು ಸಹಸ್ರನಾಮಾವಳಿಯಿಂದ ಅರ್ಚನೆ’, ನಂತರ ಸ್ವಸ್ತಿವಾಚನ, ಮಹಾಮಂಗಳಾರತಿ ಏರ್ಪಡಿಸಲಾಗಿದೆ.

ಅ.೧೨ರಂದು ವಿಜಯದಶಮಿ ಪ್ರಯುಕ್ತ ಬೆಳಿಗ್ಗೆ ೭ಕ್ಕೆ ಮಹಾಪಂಚಾಮೃತ ಅಭಿಷೇಕ ನಂತರ ಋಗ್‌ಸಂಹಿತಾ ಯಾಗದ ಪೂರ್ಣಾಹುತಿ, ಮಧ್ಯಾಹ್ನ ೪ಕ್ಕೆ ‘ಶ್ರೀ ವೇಂಕಟೇಶ ಕಲ್ಯಾಣ’, ಸಾಯಂಕಾಲ ೫ರಿಂದ ೬.೩೦ರವರೆಗೆ ವಿವೇಕಾನಂದ ವೃತ್ತದಿಂದ ಶ್ರೀಮಠದವರೆಗೆ ‘ಭವ್ಯ ಮೆರವಣಿಗೆ’ ನಂತರ ಅಕ್ಷತಾರೋಪಣ, ಸ್ವಸ್ತಿವಾಚನ, ಮಹಾಮಂಗಳಾರತಿ ಏರ್ಪಡಿಸಲಾಗಿದೆ.

ಈ ಎಲ್ಲಾ ಧಾರ್ಮಿಕ ಕೈಂಕರ್ಯಗಳಿಗೆ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಮಠದ ವ್ಯವಸ್ಥಾಪಕರಾದ ಪಂ.ಹೇಮಂತಾಚಾರ್ಯ ಗುಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ೮೧೪೭೨೦೫೩೨೬ ಸಂಪರ್ಕಿಸಬಹುದು.

RELATED ARTICLES

Most Popular

error: Content is protected !!
Join WhatsApp Group