spot_img
spot_img

ಕವನ: ಕ್ಷಮಿಸಿ ಬಿಡು ಗಾಂಧಿ ತಾತ ನಿನ್ನ ಹುಟ್ಟು ಹಬ್ಬಕ್ಕೆ ಶುಭಾಶಯ ನಾ ಕೋರಲಾರೆ…!

Must Read

- Advertisement -

ಈ ಕವನ ವಾಟ್ಸಪ್ ನಲ್ಲಿ ಬಂದಿದ್ದು ತುಂಬಾ ಜೋರಾಗಿ ಹರಿದಾಡುತ್ತಿದೆ. ಗಾಂಧೀಜಿಗೆ ವಾಸ್ತವ ಪ್ರಶ್ನೆಗಳನ್ನು ಕೇಳಿರುವ ಈ ಕವನ ನಮ್ಮ ಪತ್ರಿಕೆಯಲ್ಲೂ ಪ್ರಕಟಿಸಬೇಕೆನ್ನಿಸಿತು.

ಕ್ಷಮಿಸಿ ಬಿಡು ಗಾಂಧಿ ತಾತ ನಿನ್ನ ಹುಟ್ಟು ಹಬ್ಬಕ್ಕೆ ಶುಭಾಶಯ ನಾ ಕೋರಲಾರೆ…!

ಹೇಗೆ ತಿಳಿಸಲಿ ನಾ..?
ಪ್ರತಿ ದಿನ ಎನ್ನ ದೇಶ ಕಾಯೋ ಯೋಧರು ಕಾಶ್ಮೀರದಲ್ಲಿ ಪಾಪಿಗಳ ಗುಂಡಿಗೆ ಬಲಿಯಾಗುತಿರೆ..!
ಆ ಸಾವು ನೋವಿಗೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಕಾರಣ ನೀನೆ ಅಲ್ಲವೇ ತಾತ…?
ನೀನೇನೋ ಪಕ್ಷ ಕಟ್ಟಿ ಹೆಸರಿಗೊಂದು ಸ್ವಾತಂತ್ರ್ಯ ಕೊಡಿಸಿದೆ..
ಆದರೆ ಆ ಪಕ್ಷವನ್ನು ವಿಸರ್ಜನೆ ಮಾಡುವ ಮೊದಲೇ ನೀ ಉಸಿರು ನಿಲ್ಲಿಸಿದಿಯಲ್ಲವೋ ತಾತ
ವಂಶವಾಹಿ ಆಡಳಿತಕ್ಕೆ ಕಾರಣ ನೀನಲ್ಲವೇ..?

ಹೇಳು ಹೇಗೆ ಮನಸಾದಿತು ನಿನಗೆ ಶುಭಾಶಯ ಸಲ್ಲಿಸಲು..?

- Advertisement -

ನಿನ್ನ ಹೆಸರೇ ಭ್ರಷ್ಟರಿಗೆ ರಾಜಕೀಯ ಸರಕು
ಹೆಸರಲ್ಲೊಂದು ಗಾಂಧಿ
ಇದ್ದರೆ ಸಾಕು ಅಶಕ್ತನಿಗೂ ಅಧಿಕಾರದ ಗಾದಿ
ನೀ ಹೋದ ಮೇಲೂ ನಿನ್ನ ಹೆಸರ ಮೇಲೆ ಹಗಲು ದರೋಡೆ

ಹೇಗೆ ತಿಳಿಸಲಿ ಗಾಂಧಿ ಹೆಸರಿಗೊಂದು ಶುಭಾಶಯ…?

ಮತ್ತೆ ಹುಟ್ಟಿ ಬಾ ಎಂದು ನಿನ್ನ ಕೇಳಲಾರೆ
ಹಾಗಂತ ನಿನ್ನ ನಿಸ್ವಾರ್ಥ ಸೇವೆ ಮರೆಯಲಾರೆ
ಮಾಲೆ ಹಾಕಿ ನಿನ್ನ ಪೂಜಿಸಲಾರೆ…!
ಹಿಂದುಸ್ತಾನ್ ನಲ್ಲಿ ಹಿಂದೂಗಳನ್ನು ಅನಾಥ  ಮಾಡಿ ಹೋದ
ನಿನಗೆ ಹೇಗೆ ಶುಭಾಶಯ ಸಲ್ಲಿಸಲಿ,
ಹೇ ತಾತಪ್ಪ, ನೀನು ಮನಸು ಮಾಡಿದ್ದರೆ,
ಭಾರತ ತುಂಡಾಗುವುದು ತಡೆಯಬಹುದಿತ್ತು. ಭಗತ್ ಸಿಂಗ್ ನೇಣು ಕುಣಿಕೆ ತಡೆಯಬಹುದಿತ್ತು.
ಸ್ವಾತಂತ್ರ ಚಳವಳಿಯ ಮುಖವಾಡ ಹೊತ್ತು ದಂಗೆ ಎಬ್ಬಿಸಿದ ಮುಸಲ್ಮಾನರ ಕತ್ತಿಗಳಿಗೆ ಬಲಿಯಾದ ಕೇರಳದ ಸಾವಿರಾರು ಹಿಂದೂಗಳ ಜೀವ ಉಳಿಸಬಹುದಿತ್ತು. ಪಾಕಿಸ್ಥಾನದಿಂದ ಜೀವ ಉಳಿಸಿಕೊಳ್ಳಲು ಓಡಿ ಬಂದ ಹಿಂದೂಗಳಿಗೆ ರಕ್ಷಣೆ ಒದಗಿಸಬಹುದಿತ್ತು.
ಕಡೆ ಪಕ್ಷ, ಒಬ್ಬ ಗಂಡಸಿನಂತೆ ಮುಸಲ್ಮಾನರ ಕ್ರೌರ್ಯ ಖಂಡಿಸಬಹುದಿತ್ತು.
ನೀನು ಯಾವುದೂ ಮಾಡಲಿಲ್ಲ. ಆದರೂ ನೀನು ಮಹಾತ್ಮನಾದೆ.
ದೇಶಕ್ಕಾಗಿ ತಮ್ಮ ತನು ಮನ ಜೀವನ ಅರ್ಪಿಸಿದ ಅದೆಷ್ಟೋ ಕ್ರಾಂತಿಗಳ ಬಲಿದಾನಕ್ಕೆ ಸಿಗಬೇಕಾದ ಗೌರವ ಸಿಗಲೇ ಇಲ್ಲ
ನಿನಗೆ ತುಂಬು ಹೃದಯದ ಶುಭಾಶಯ ಸಲ್ಲಿಸಲು ಆ ಪಾಕಿಸ್ತಾನಿ ಯರಿದ್ದಾರೆ ಕೇಳಿ ತಗೋ

- Advertisement -

ಕ್ಷಮಿಸಿಬಿಡು ತಾತ ಶುಭಾಶಯ ನಿನಗೆ ಕೋರಲಾರೆ…!

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group