ಹುನಗುಂದ: ತಾಲೂಕಿನ, ಅಮೀನಗಡ ಹೋಬಳಿ ವ್ಯಾಪ್ತಿಯ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 2024-25 ನೇ ಸಾಲಿನ ನಾಗೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು.
ಜಿಲ್ಲಾ ಪಂಚಾಯತ್ ಬಾಗಲಕೋಟೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮೂಹ ಸಂಪನ್ಮೂಲ ಕೇಂದ್ರ ನಾಗೂರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಬಾದವಾಡಗಿಯವರ ಸಂಯುಕ್ತ ಆಶ್ರಯದಲ್ಲಿ ನಡೆದ ಕ್ರೀಡಾಕೂಟದಲ್ಲಿ ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ ಮೊದಲಾದ ವೈಯಕ್ತಿಕ ಸ್ಪರ್ಧೆಗಳು ಮತ್ತು ಖೋಖೋ, ಕಬಡ್ಡಿ, ಥ್ರೋಬಾಲ್, ವಾಲಿಬಾಲ್, 4×100 ಮೀ. ರಿಲೇ ಸಾಮೂಹಿಕ ಸ್ಪರ್ಧೆಗಳು ನಡೆದವು.
ವೈಯಕ್ತಿಕ ಬಾಲಕಿಯರ ವಿಭಾಗ: ಗುಂಡು ಎಸೆತ: ಸೌಮ್ಯ ತುಳಸಿಗೇರಿ(ಪ್ರಥಮ), (ಪ್ರಥಮ), 600ಮೀ. ಓಟ: ಅಮೃತಾ ನರಸಪ್ಪನವರ(ಪ್ರಥಮ), 200ಮೀ ಓಟ: ಅಮೃತಾ ನರಸಪ್ಪನವರ (ದ್ವಿತೀಯ)100ಮೀ. ಓಟ: ಸಾವಿತ್ರಿ ಪವಾಡಿಗೌಡರ (ದ್ವಿತೀಯ)
ವೈಯಕ್ತಿಕ ಬಾಲಕರ ವಿಭಾಗ:
ಉದ್ದ ಜಿಗಿತ: ಅರ್ಜುನ ಬಾರಕೇರ (ಪ್ರಥಮ) 100ಮೀ. ಓಟ: ನಾಗರಾಜ ಸೂಳಿಬಾವಿ (ಪ್ರಥಮ) 200ಮೀ. ಓಟ: ಅರ್ಜುನ ಬಾರಕೇರ (ಪ್ರಥಮ)
100ಮೀ. ಓಟ: (ತೃತೀಯ), 600ಮೀ. ಓಟ: (ತೃತೀಯ),
ಸಾಮೂಹಿಕ ಬಾಲಕಿಯರ ವಿಭಾಗ: ಖೋಖೋ, ಕಬಡ್ಡಿ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ, ಥ್ರೋಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ
ಸಾಮೂಹಿಕ ಬಾಲಕರ ವಿಭಾಗ: ಖೋಖೋ, ಕಬಡ್ಡಿ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ, ವಾಲಿಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಸಮಗ್ರ ವೀರಾಗ್ರಣಿಯಾಗಿ ಮುಂದಿನ ಹಂತದ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ.
ವಿಜೇತ ಮಕ್ಕಳನ್ನು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಾಮನಗೌಡ ಪವಾಡಿಗೌಡ್ರ, ಉಪಾಧ್ಯಕ್ಷೆ ರತ್ನವ್ವ ಕಡಿವಾಲ, ಪ್ರಭಾರಿ ಮುಖ್ಯಗುರು ಎಂ ಜಿ ಬಡಿಗೇರ, ಗ್ರಾಮ ಪಂಚಾಯಿತಿ ಸದಸ್ಯ ವೀರಪ್ಪ ಮಾಗಿ, ಎಸ್ಡಿಎಂಸಿ ಸದಸ್ಯ ಸಂಗಪ್ಪ ಈರಣ್ಣವರ, ಶಾಲಾ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.