ಸರ್ಕಾರಿ ಶಾಲೆಗಳ ಕಾರ್ಯಾರಂಭ
ನಹಿ ಜ್ಞಾನೇನ ಸದೃಶಂ ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ,ಈ ಜಗತ್ತಿನಲ್ಲಿ ಶಿಕ್ಷಣದ ಬಗ್ಗೆ, ಅದರ ಮಹತ್ವದ ಬಗ್ಗೆ ಹೇಳದವರೇ ಇಲ್ಲ, ಎಲ್ಲಾ ಹಂತದಲ್ಲಿರುವವರು ಈ ಕುರಿತು ಹೇಳಿದವರೇ, ಅದರ ಸಲುವಾಗಿ ಚಿಂತನೆ ಮಾಡಿದವರೆ, ಪ್ರಾಥಮಿಕ ಶಿಕ್ಷಣ ರಾಷ್ಟ್ರದ ಭದ್ರ ಬುನಾದಿ ಎನ್ನುವರು ಹಿರಿಯರು, ಸಮಾಜದ ಮುಖ್ಯ ವಾಹಿನಿಯಲ್ಲಿರುವವರು ಉನ್ನತವಾಗಿರುವವರು,ವಿವಿಧ ಸ್ಥರದಲ್ಲಿರುವವರು ಸೇರಿದಂತೆ ಎಲ್ಲರಿಗೂ ಶಿಕ್ಷಣದ ಕಳಕಳಿ ಕಾಳಜಿ ಇದೆ, ಯಾಕೆಂದರೆ ಮಗುವಿನ ಭವಿಷ್ಯ ನಿರ್ಧರಿಸುವುದು ಶಿಕ್ಷಣ, ಪ್ರತಿಯೊಬ್ಬರಿಗೂ ತಮ್ಮ ಮಗು ಉತ್ತಮ ಶಿಕ್ಷಣ ಪಡೆದುಕೊಂಡು ಯೋಗ್ಯಪ್ರಜೆಯಾಗಬೇಕು,ಸಮಾಜದಲ್ಲಿ ಯೋಗ್ಯ, ಸಮರ್ಥ ವ್ಯಕ್ತಿಯಾಗಿ, ತನ್ನ ಜೀವನ ತಾನೇ ರೂಪಿಸಿಕೊಳ್ಳಬೇಕು, ಎಂಬ ಆಶೆ ಸಹಜ,ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಮಾಡಿ ಶಾಲೆಗಳ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕಾದ ಅಗತ್ಯವಿದೆ,
ಸನ್ 2024-2025 ನೆಯ ಶೈಕ್ಷಣಿಕ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಇದೇ ತಿಂಗಳ ದಿ 31ರಿಂದ ಅಭ್ಯಾಸ ಚಟುವಟಿಕೆಗಳು ಪ್ರಾರಂಭವಾಗಲಿವೆ. ಈ ಸಲ ಪೂರ್ವಭಾವಿಯಾಗಿ ಎಲ್ಲಾ ತಯಾರಿಗಳನ್ನು ಶಾಲಾ ಶಿಕ್ಷಣ ಇಲಾಖೆಯು ಮಾಡಿಕೊಂಡಿದೆ, ಇಲಾಖೆಯ ಮುಖ್ಯಸ್ಥರು ಈಗಾಗಲೇ ಈ ಕುರಿತು ಸಭೆ ನಡೆಸಿ ಮಾಹಿತಿ ನೀಡಿರುವರು, ಈ ಶೈಕ್ಷಣಿಕ ವರ್ಷದ ಘೋಷಣಾವಾಕ್ಯ *ಶೈಕ್ಷಣಿಕ ಕಲಿಕಾ ಬಲವರ್ಧನೆ ವರ್ಷ -2024-2025* ಎಂದು ನೀಡಿದೆ, ಸರ್ವರೂ ಶೈಕ್ಷಣಿಕ ವರ್ಷದ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ, ಈ ನೂತನ ಶೈಕ್ಷಣಿಕ ವರ್ಷ ಉತ್ತಮ ಆರಂಭ ಕಾಣಲೆಂದು ಶುಭ ಹಾರೈಸೋಣ
ಕೆಲವು ದಿನಗಳಿಂದ ವಾಟ್ಸಪ್, ಸೇರಿದಂತೆ ವಿವಿಧ ಜಾಲತಾಣ ಗಳಲ್ಲಿ ಸರಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಚರ್ಚೆ, ಪರಸ್ಪರ ಮಾಹಿತಿ ಹಂಚಿಕೆ ನಡೆದಿದೆ, ಸರಕಾರಿ ಶಾಲೆಗಳಲ್ಲಿ ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಕಲಿಯುವರೆಂಬ ಮನೋಭಾವನೆ ಇದೆ, ಜೊತೆಗೆ ಅಲ್ಲಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳು ವಿರಬಹುದು , ಕೆಲವು ಕಡೆ ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಸರಕಾರಿ ಶಾಲೆಗಳು ಸೌಲಭ್ಯಗಳಲ್ಲಿ ಹಿಂದೆ ಬಿದ್ದರು ಕಲಿಕೆಯಲ್ಲಿ ಉನ್ನತ ಶ್ರೇಣಿಯನ್ನು ಉಳಿಸಿಕೊಂಡು ಬಂದಿವೆ ಎನ್ನಬಹುದು, ಸರಕಾರಿ ಶಾಲೆಗಳ ಉಳಿಯುವ, ಬೆಳೆಯುವ ನಿಟ್ಟಿನಲ್ಲಿ ಸರಕಾರ, ಶಾಲಾ ಶಿಕ್ಷಣ ಇಲಾಖೆಯು ಹಲವಾರು ಯೋಜನೆಗಳ ಮೂಲಕ ಶ್ರಮಿಸುತ್ತಿದೆ ಈ ಕಾರ್ಯದಲ್ಲಿ, ಸಮುದಾಯ, ಸಂಘ ಸಂಸ್ಥೆಗಳು ಕೈ ಜೋಡಿಸುವ ಅನಿವಾರ್ಯತೆ ಇದೆ, ಸರಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಸ್ವಲ್ಪ ತಿಳಿಯುವ ಪ್ರಯತ್ನ ಮಾಡೋಣ, ಈ ಕೆಳಗಿನ ಸೌಲಭ್ಯಗಳು ಎಲ್ಲಾ ಕಡೆ ಸಿಗುತ್ತವೆ, ಅನಿವಾರ್ಯವಾಗಿ ಕೆಲವು ಅಲ್ಪ ಸ್ವಲ್ಪ ಶಾಲೆಗಳಲ್ಲಿ ಸಿಗದಿರಬಹುದು ಆದರೆ ಸಾರ್ವತ್ರಿಕ ವಾಗಿ ಈ ಸೌಲಭ್ಯಗಳು ಸಿಗುತ್ತವೆ,ಯಾವುದೇ ರೀತಿಯ ವಂತಿಗೆ ಹಣದ ವಹಿವಾಟು ಇಲ್ಲದೆ ಇರುವದರಿಂದ ಪಾಲಕರಿಗೆ ಪೋಷಕರಿಗೆ ಯಾವುದೇ ಆರ್ಥಿಕವಾಗಿ ಹೊರೆ ಯಾಗಲಾದು, ಹೀಗಾಗಿ ಸರಕಾರಿ ಶಾಲೆಗಳಲ್ಲಿ ತಮ್ಮ ತಮ್ಮ ಮಕ್ಕಳನ್ನು ಪಾಲಕರು ಪೋಷಕರು ಸೇರಿಸಲು ಈ ಮೂಲಕ ಕೋರುತ್ತಿದ್ದೇನೆ, ಸರಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯ ಸವಲತ್ತುಗಳು ಈ ರೀತಿಯಲ್ಲಿವೆ
1)ಸಂವಿಧಾನದಲ್ಲಿ ಉಲ್ಲೇಖವಾಗಿರುವ ಹಾಗೂ ಸರಕಾರಗಳ ಆಶಯದಂತೆ ಸರ್ವ ವಿದ್ಯಾರ್ಥಿಗಳಿಗೆ ಉಚಿತವಾದ ಶಿಕ್ಷಣ ಸಿಗುತ್ತದೆ, 6ರಿಂದ 14 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಹಾಗೂ ಉಚಿತವಾಗಿ ದೊರೆಯುತ್ತಿದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳಹಕ್ಕು ಅಧಿನಿಯಮ -2009 ಜಾರಿಯಲ್ಲಿದೆ, ಇದು ಕಲಿಕೆಗೆ ಸಹಾಯಕವಾಗಿದೆ, ಜೊತೆಗೆ ಹಲವು ಪ್ರಯತ್ನಗಳು, ಆದೇಶಗಳು ನಿರಂತರವಾಗಿ ಬರುತ್ತವೆ, ಹೊಸ ಹೊಸ ಯೋಜನೆಗಳು ಜಾರಿ ಯಾಗುತ್ತಿವೆ
2)ಸರಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ-ಶಿಕ್ಷಕಿಯರು ಉನ್ನತ ಶಿಕ್ಷಣ ಹೊಂದಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಆಯ್ಕೆ ಯಾಗಿರುವ ಪ್ರತಿಭಾವಂತ ಶಿಕ್ಷಕರಿಂದ ಬೋಧನೆ ನಡೆಯುತ್ತಿದೆ
3)ಸರಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ಪೋಷಕರಿಗೆ ಯಾವುದೇ ರೀತಿಯ ವಂತಿಗೆ,ಆರ್ಥಿಕ ಹೊರೆ ಇಲ್ಲ. 4)ಪ್ರತಿವರ್ಷಕ್ಕೆ ಶಾಲಾ ಆರಂಭಕ್ಕೆ ಮುನ್ನವೇ ಉಚಿತವಾದ ಎರಡು ಜೊತೆ ಸಮವಸ್ತ್ರಗಳು.
5)ಶಾಲಾ ಆರಂಭಕ್ಕೆ ಮುನ್ನವೇ ವಿದ್ಯಾರ್ಥಿಗಳಿಗೆ ಉಚಿತವಾದ ಪಠ್ಯಪುಸ್ತಕಗಳ ಪೂರೈಕೆ ನಡೆಯುತ್ತಿದೆ
6)ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾದ ಸೈಕಲ್ ಗಳ ಪೂರೈಕೆ
7)ವಾರದಲ್ಲಿ ಐದು ದಿನ ಕ್ಷೀರಭಾಗ್ಯ.ಅದರಲ್ಲಿ ಮೂರು ದಿನ ಆರೋಗ್ಯಕ್ಕಾಗಿ ಹೊಸದಾಗಿ ರಾಗಿ ಮಾಲ್ಟ್ ಕೂಡ ನೀಡಲಾಗುತ್ತಿದೆ
8)ಪ್ರತಿವರ್ಷಕ್ಕೊಮ್ಮೆ ವಿದ್ಯಾರ್ಥಿಗಳಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ, ಸರ್ವರಿಗೂ ಉಪಯುಕ್ತ ವಾಗಿರುವ ಯೋಜನೆಯಡಿ ಪ್ರತಿ ವಿದ್ಯಾರ್ಥಿಗಳಿಗೆ ಉತ್ತಮ ಕಂಪನಿಯ ಗುಣಮಟ್ಟದ ಒಂದು ಜೊತೆ ಶೂ ಹಾಗೂ ಸಾಕ್ಸ್ ಗಳ ಪೂರೈಕೆ ಯಾಗುತ್ತದೆ
9)ಶಾಲಾ ಶಿಕ್ಷಣ ಇಲಾಖೆಯ ಹಾಗೂ ವಿವಿಧ ಇಲಾಖೆಯ ಮುಖಾಂತರ ಶಾಲಾ ಕಲಿಯುವ ವಿದ್ಯಾರ್ಥಿಗಳಿಗೆ ಸಹಾಯ ವಾಗುವಲ್ಲಿ ವಿದ್ಯಾರ್ಥಿ ವೇತನ ದೊರೆಯುತ್ತದೆ
10)ಶಾಲೆಗಳಲ್ಲಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ಕಲಿಕೆಯ ನಿಟ್ಟಿನಲ್ಲಿ ವಿಶೇಷ ಸೌಲಭ್ಯಗಳು.ಅವಶ್ಯಕತೆ ಇರುವ ವಸ್ತು,ಸೌಲಭ್ಯಗಳು ಇಲಾಖೆಯ ವತಿಯಿಂದ ದೊರೆಯುತ್ತದೆ,
11)ವಿದ್ಯಾರ್ಥಿಗಳಿಗೆ ಪಠ್ಯ ಬಿಟ್ಟು ಇತರೆ ಸರ್ವ ವಿಷಯಗಳ ಜ್ಞಾನ ನೀಡುವ ಗ್ರಂಥಾಲಯ ಸೌಲಭ್ಯಗಳಿವೆ
12)ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯ ಕುರಿತು ಅಧ್ಯಯನ ಮಾಡುವ ಜೊತೆಗೆ ವಿಜ್ಞಾನಪ್ರಯೋಗ ಮಾಡಲು ಸಹಾಯ ನೀಡುವ ಪ್ರಯೋಗಾಲಯಗಳ. ಸೌಲಭ್ಯಗಳಿವೆ
13)ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹುಮ್ಮಸು ಪ್ರೋತ್ಸಾಹ ನೀಡುವಂತ ಸುಸಜ್ಜಿತಶಾಲಾ ಕೊಠಡಿಗಳು ಬಹುತೇಕ ಶಾಲೆಗಳಲ್ಲಿ ಇಂದು ಕಂಡು ಬರುತ್ತವೆ
14)ಶಾಲೆಗಳಲ್ಲಿ ಹೊಸ ಮಾದರಿಯ ನವ ನವೀನ ಶೌಚಾಲಯಗಳ ಸೌಲಭ್ಯಗಳಿವೆ
15)ವಿವಿಧ ಸೌಲಭ್ಯ ಗಳೊಂದಿಗೆ ಕ್ರೀಡೆಗಳ ಅಂಕಣ ಹೊಂದಿರುವ ಆಟದ ಮೈದಾನಗಳು
16)ವಿವಿಧ ಕ್ರೀಡೆ ಗಳ ಚಟುವಟಿಕೆ ನಡೆಸುವ ನಿಟ್ಟಿನಲ್ಲಿ ಉಚಿತ ಕ್ರೀಡಾ ಸಾಮಗ್ರಿಗಳು ದೊರೆಯುತ್ತವೆ
17)ವಿದ್ಯಾರ್ಥಿಗಳಲ್ಲಿ ಆಸಕ್ತಿ ಕೆರಳಿಸುವ,ಮೋಜು ಉತ್ಸಾಹದಾಯಕ ವಾದ ಚಟುವಟಿಕೆ ಗಳ ಮೂಲಕ ನಲಿ-ಕಲಿ ಬೋಧನೆ ನಡೆಯುತ್ತಿದೆ
18)ಒಂದನೆಯ ತರಗತಿಯಿಂದಲೇ ಇಂಗ್ಲೀಷ್ ಭಾಷೆಯ ಬೋಧನೆ.
19)ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣ ಮಾಡುವ ನಿಟ್ಟಿನಲ್ಲಿ ಪ್ರತಿಭಾಕಾರಂಜಿಯನ್ನು ಶಾಲಾ ಶಿಕ್ಷಣ ಇಲಾಖೆಯು ಕೇಂದ್ರ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನಡೆಸಲಾಗುತ್ತದೆ ಇದರಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಗಮನ ಸೆಳೆದು ರಾಷ್ಟ್ರ ಮಟ್ಟದ ವರೆಗೂ ಮಿಂಚಿದ್ದಾರೆ, ಜೊತೆಗೆ ವಿವಿಧ ಹಂತದಲ್ಲಿ ಕ್ರೀಡಾಕೂಟ ಆಯೋಜನೆಮಾಡಿ ವಿದ್ಯಾರ್ಥಿಗಳನ್ನು
20)ವಿವಿಧ ಆಸಕ್ತಿದಾಯಕ ವಿಧಾನಗಳಿಂದ, ಚಟುವಟಿಕೆಗಳಿಂದ ವಿದ್ಯಾರ್ಥಿಗಳಿಗೆ ಬೋಧನೆಯನ್ನ ಮಾಡಲಾಗುತ್ತದೆ
21)ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ (ಸಿಸಿಇ)ಮೂಲಕ ಬೋಧನೆಯು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ
22)ಆಧುನಿಕ ತಂತ್ರಜ್ಞಾನ ಪಾಠಗಳ ಮೂಲಕ ಬೋಧನೆ ನಡೆಯುತ್ತಿದೆ
23)ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದಲ್ಲಿ ಆಸಕ್ತಿ ಮೂಡಿಸುವ ಅವರಿದ್ದ ವೈಜ್ಞಾನಿಕ ಮನೋಭಾವನೆ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಇನ್ಸಪೈರ್ ಅವಾರ್ಡ್ ಮೂಲಕ ಭಾವಿ ವಿಜ್ಞಾನಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಶಾಲೆಯಲ್ಲಿ ಆಗುತ್ತಿದೆ 24)ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಡಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ, ಇದರಲ್ಲಿ ಆರೋಗ್ಯ ಸಮಸ್ಯೆ ಇದ್ದರೆ ಉಚಿತವಾಗಿ ವೈದ್ಯಕೀಯ ಸೇವೆ ಸಿಗುತ್ತದೆ,
25)ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಶುಚಿ ಪ್ಯಾಡ್ ತಲುಪಿಸುವ ಸೌಲಭ್ಯವಿದೆ
26)ಶಾಲೆಯಲ್ಲಿ ನಿರಂತರ ವಿದ್ಯಾರ್ಥಿಗಳಲ್ಲಿಯ ಕಲೆ, ಸಾಂಸ್ಕೃತಿಕ ಪ್ರತಿಭೆ ಅನಾವರಣ ಮಾಡುವ ಹಾಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಾಗುತ್ತದೆ
27)ವಿದ್ಯಾರ್ಥಿಗಳಲ್ಲಿ ಕಲಿಕೆಯ ದೃಡೀಕರಣ ಮಾಡುವ ಅಂಗವಾಗಿ ರೇಡಿಯೋ ಮೂಲಕ ಚುಕ್ಕಿ ಚಿನ್ನ, ಕೇಳಿ ಕಲಿ ಕಾರ್ಯಕ್ರಮಗಳ ಮೂಲಕ ರೇಡಿಯೋ ಪಾಠಗಳ ಪ್ರಸಾರ, ವಿದ್ಯಾರ್ಥಿಗಳಿಗೆ ಉಪಯುಕ್ತ ಯೋಜನೆಇದಾಗಿದೆ
28)ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಉಚಿತವಾದ ಕಂಪ್ಯೂಟರ್ ಶಿಕ್ಷಣದ ಪ್ರಾರಂಭಿಕ ಕಲಿಕೆಗೆ ಅವಕಾಶದೊರೆಯುತ್ತದೆ
29)ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳ ಅನಾವರಣ ಮಾಡುವ ನಿಟ್ಟಿನಲ್ಲಿ ಮೌಲ್ಯಶಿಕ್ಷಣದ ಕಲಿಸುವಿಕೆ
30)ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಬದುಕಿನ ಉನ್ನತ ಮೌಲ್ಯ ಬೆಳಸುವಿಕೆಗೆ ಸಹಾಯಕ ವಾಗುವಲ್ಲಿ ವಿದ್ಯಾರ್ಥಿಗಳಿoದಲೇ ಸುಂದರ ಕೈ ತೋಟ ನಿರ್ಮಿಸುವ ಹಾಗೂ ಪೋಷಣೆ ಮಾಡುವ ಅವಕಾಶವಿದೆ
31)ರಾಜ್ಯಮಟ್ಟದ ಅಕ್ಷರ ಪೌಂಡೇಷನ್ ಸಹಯೋಗದಲ್ಲಿ ಗಣಿತ ಕಲಿಕೆಗೆ ಉಚಿತ ಸಾಮಗ್ರಿಗಳು ದೊರೆಯುತ್ತವೆ, ಇದರಲ್ಲಿ ಕಲಿಕೆಗೆ ಪ್ರೋತ್ಸಾಹದೊರೆಯುತ್ತದೆ
32)ನಿರಂತರ ಶಿಕ್ಷಣ ಕಲಿಕೆಯ ತಪಾಸಣೆಗಾಗಿ ಶಾಲಾ ಶಿಕ್ಷಣ ಇಲಾಖೆಯದಕ್ಷಅಧಿಕಾರಿಗಳ ಭೇಟಿ ಜೊತೆಗೆ ಮಾರ್ಗದರ್ಶನ
33)ಕಾಲ ಕಾಲಕ್ಕೆ ವಿಷಯಗಳ ಹಾಗೂ ಕಲಿಕೆಯ ಬದಲಾವಣೆ ಅಥವಾ ದೃಡೀಕರಣಕ್ಕಾಗಿ ಕಾರ್ಯ ನಿರತ ಶಿಕ್ಷಕರಿಗೆ ತರಬೇತಿ.ಪ್ರೋತ್ಸಾಹ, ಉತ್ತಮ ಕಾರ್ಯ ಚಟುವಟಿಕೆಗಳಿಗೆ ಮೆಚ್ಚುಗೆ ದೊರೆಯುತ್ತವೆ
34)ಶಾಲಾ ವಿದ್ಯಾರ್ಥಿಗಳ ಕಲಿಕೆಯ ಪ್ರಗತಿ ಹಾಗೂ ದೈನಂದಿನ ಶಾಲಾ ಹಾಜರಾತಿಯನ್ನು ಎಸ್ ಎ ಟಿ ಎಸ್ ನಲ್ಲಿ ದಾಖಲಿಸಲು ಅವಕಾಶವಿದೆ, ಇದರಿಂದ ಶಿಸ್ತುಬದ್ಧ ದಾಖಲೆಗಳ ನಿರ್ವಹಣೆ ಸಾಧ್ಯವಾಗುತ್ತದೆ 35)ಕಲಿಕೆಯ ವಿಷಯಗಳಲ್ಲಿ ನಿರ್ಧಾರಿತ ಕಲಿಕಾ ಹಂತವನ್ನು ಪೂರೈಸದ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ ಮಾಡಿ ಅವರ ಕಲಿಕಾ ಗುರಿ ತಲುಪಲು ಅವಕಾಶ ದೊರೆಯುತ್ತದೆ
36)ಮಧ್ಯಾಹ್ನ ಉಪಹಾರ ಯೋಜನೆಯಡಿ (ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ)ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ದೊರೆಯುವ ಉಚಿತ ಮಧ್ಯಾಹ್ನದ ಬಿಸಿಯೂಟ ಯೋಜನೆ ಇದೆ,ವಿದ್ಯಾರ್ಥಿಗಳಿಗೆ ಮೊಟ್ಟೆ, ಚಕ್ಕಿ, ಬಾಳೆಹಣ್ಣು, ರಾಗಿ ಮಾಲ್ಟ ಸಹ ದೊರೆಯುತ್ತದೆ
37)ಶಾಲಾ ಸಂಸತ್ ರಚನೆ ಮಾಡಿ ಅವುಗಳ ಮೂಲಕ ಕಾರ್ಯ ಚಟುವಟಿಕೆ ಮಾಡಿಸಿ ಪ್ರಜಾಪ್ರಭುತ್ವ ಪರಿಚಯ ಮಾಡಿಸಲಾಗುತ್ತದೆ
38)ಶಾಲೆ ಉಸ್ತುವಾರಿಗಾಗಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳ ರಚನೆ, ಅವರಿಂದ ಶಾಲೆಯ ಸಮಗ್ರ ಅಭಿವೃದ್ಧಿ ಮಾಡಿಸಲಾಗುವುದು
39)ಶಾಲೆಗಳಲ್ಲಿ ವಿವಿಧ ಸಂಘಗಳ ರಚನೆಯ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ 40)ಪ್ರತಿವರ್ಷ ಶಾಲಾ ವಾರ್ಷಿಕೋತ್ಸವ ಏರ್ಪಡಿಸಲಾಗುತ್ತದೆ, ಆಯಾ ವರ್ಷದ ಉತ್ತಮ ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ, ಬಹುಮಾನ ನೀಡುವ ಪರಂಪರೆ ಇದೆ
41)ಸರಕಾರಿ ಶಾಲೆಗಳಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಂಡೆ ವಿವಿಧ ವಸತಿ ಗಳಲ್ಲಿ ಕಲಿಯುವ ಅವಕಾಶ ವಿರುವ ನವೋದಯ ಶಾಲೆ ಆದರ್ಶ, ಮೊರಾರ್ಜಿವಸತಿ ಶಾಲೆ , ಕಸ್ತೂರಿಬಾ ವಸತಿ ಶಾಲೆ,, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ , ಇಂದಿರಾ, ಏಕಲವ್ಯ, ವಾಜಪೇಯಿ ಹೆಸರಿನ ವಸತಿ ಶಾಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕುಳಿತುಕೊಂಡು ಆಯ್ಕೆ ಯಾಗುವ ಅವಕಾಶವಿದೆ
42)ಶಾಲಾ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಮೌಲ್ಯಗಳ ಬೆಳವಣಿಗೆಗೆ ಮುಕ್ತ ಅವಕಾಶವಿದೆ 43)ವಿದ್ಯಾರ್ಥಿಗಳಲ್ಲಿ ದೈರ್ಯ, ಆತ್ಮವಿಶ್ವಾಸ, ನಾಯಕತ್ವಗುಣ,ಕಷ್ಟ ಸಹಿಷ್ಣುತೆ, ಬಡತನ ಸಿರಿತನ ಇತ್ಯಾದಿಗಳ ನೈಜ ಅನುಭವ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದೊರೆಯುತ್ತದೆ . 44)ಗ್ರಾಮೀಣ ಭಾಗದ ಸರಕಾರಿ ಶಾಲೆ ಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಸರಕಾರಿ ಸೇವೆಯಲ್ಲಿ ಕನ್ನಡ ಮಾಧ್ಯಮ, ಗ್ರಾಮಾಂತರ ಕೋಟಾದಲ್ಲಿ ವಿಶೇಷ ಅಂಕಗಳ ಪ್ರಾಧ್ಯಾನತೆ ದೊರೆಯುತ್ತದೆ
45)ಇಂದಿನ ಸರಕಾರಿ ಶಾಲೆಗಳಲ್ಲಿ ಸಿಗುತ್ತಿರುವ ಸೌಲಭ್ಯಗಳನ್ನು ನೋಡಿ ಹಿರಿಯರು ಹೇಳುವ ಮಾತು ನಾವು ಶಾಲೆ ಕಲಿಯುವಾಗ ಈಗಿನಂತೆಇಷ್ಟೆಲ್ಲಸೌಕರ್ಯವಿರಲಿಲ್ಲ, ಈಗಿನ ವಿದ್ಯಾರ್ಥಿಗಳು ಅದೃಷ್ಟವಂತರು ಸರಕಾರ ಹಾಗೂ ಸಮುದಾಯ, ಸಂಘ ಸಂಸ್ಥೆಗಳು ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಕಲಿಕೆಯಲ್ಲಿ ಮುಂದೆ ಬರಲಿ ಎಂದು, ಅದು ಸರಿಯಾದ ಮಾತು, ಅನುಭವದ ಮಾತು, ಹಾಗಾಗಿ ಇಷ್ಟೊಂದು ಸೌಲಭ್ಯಗಳನ್ನು ಹೊಂದಿರುವಸನಿಹದ ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿರಿ, ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕಾದ ಅಗತ್ಯತೆ ವಿದೆ, ಅಲ್ಲವೇ? (ಆಧಾರಿತ)
ಬಸವರಾಜ ಫಕೀರಪ್ಪ ಸುಣಗಾರ, ಹಿರಿಯ ಮುಖ್ಯೋಪಾಧ್ಯಾಯರು, ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಮಾಸ್ತಮರಡಿ ಮೊ ನ0,9481738018