ಬೆಳಗಾವಿ: ದಿನಾಂಕ 19-09-2022ರಂದು ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ “ಸ್ವಚ್ಛತೆಯೇ ಸೇವೆ” ಆಂದೋಲನವನ್ನು ಹಮ್ಮಿಕೊಳ್ಳಲಾಯಿತು.
ಈ ಆಂದೋಲನದಲ್ಲಿ “ಗ್ರಾಮ ನೈರ್ಮಲ್ಯ ಯೋಜನೆ” (VSP)ಬಗ್ಗೆ ಮಾಹಿತಿ ನೀಡಲಾಯಿತು. ಅದರ ಜೊತೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮದಲ್ಲಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ,ಶಾಲಾ ಮಕ್ಕಳ ಜಾಥಾ ಹಮ್ಮಿಕೊಂಡು ಒ.ಡಿ.ಎಫ್ ಪ್ಲಸ್ ಘಟಕಾಂಶಗಳ ಮೇಲೆ ಘೋಷಣೆ ಕೂಗುತ್ತಾ, ಫಲಕಗಳನ್ನು ಹಿಡಿದು ಗ್ರಾಮದ ಸುತ್ತಲೂ ಸಂಚರಿಸಿ ಜಲ-ಮೂಲಗಳ ಸ್ವಚ್ಚತೆ,ಕಸದ ವ್ಯವಸ್ಥಿತ ನಿರ್ವಹಣೆ,ಮನೆಯ ಮೂಲದಲ್ಲಿಯೇ ಅದರ ವಿಂಗಡನೆ,ದ್ರವ ತ್ಯಾಜ್ಯ ನಿರ್ವಹಣೆ,ಪ್ಲಾಸ್ಟಿಕ್ ನಿಷೇಧ ಮುಂತಾದ ವಿಷಯಗಳ ಕುರಿತು ಸ್ವಚ್ಚ ವಾಹಿನಿ ಬಳಸಿ, ಜಿಂಗಲ್ಸಗಳ ಮೂಲಕ ವ್ಯಾಪಕ ಪ್ರಚಾರ ಮಾಡಲಾಯಿತು. ತದನಂತರ ಕರಡಿಗುದ್ದಿ ಗ್ರಾಮದ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯ “ಸ್ವಚ್ಚ ಸಂಕೀರ್ಣ ಘಟಕ” ಮತ್ತು ಶಾಲೆಗೆ ಭೇಟಿ ನೀಡಿ ಸಸಿ ನೆಡಲಾಯಿತು.
ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿಗಳು (ಆಡಳಿತ) ಜಿಲ್ಲಾ ಪಂಚಾಯತ್ ಬೆಳಗಾವಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಬೆಳಗಾವಿ ಹಾಗೂ ಯೋಜನಾ ನಿರ್ದೇಶಕರು ಬೆಳಗಾವಿ ತಾಲೂಕ ಪಂಚಾಯತ್, ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಯ ಎಲ್ಲ ಜಿಲ್ಲಾ ಸಮಾಲೋಚಕರು, ಜಲಜೀವನ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕರು, ISA ಸಿಬ್ಬಂದಿ ವರ್ಗದವರು,ಗ್ರಾಮ ಪಂಚಾಯತ ಅಧ್ಯಕ್ಷರು,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು,ಶಾಲಾ ಶಿಕ್ಷಕರು,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು,ಗ್ರಾಮ ಪಂಚಾಯತ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು.
ಸುಮಾರು120ಕ್ಕೂ ಹೆಚ್ಚು ಜನರು ಈ ಆಂದೋಲನದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.