spot_img
spot_img

ಸಮಷ್ಟಿಗಾಗಿ ಸರ್ವಸ್ವ ಸಮರ್ಪಿಸಿದ ಅಕ್ಷರ ತಾಯಿ ಲೂಸಿ ಸಾಲ್ಡಾನಾ – ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ

Must Read

spot_img

ಸವದತ್ತಿ: “ಬದುಕಿನ ನಾಳೆಗಳಿಗಾಗಿ ಏನನ್ನೂ ಇಟ್ಟುಕೊಳ್ಳದೇ ಸರ್ವವನ್ನೂ ಸಮಷ್ಟಿಗಾಗಿ ಸಮರ್ಪಿಸಿದ ಅಕ್ಷರತಾಯಿ ಲೂಸಿ ಸಾಲ್ಡಾನಾ ಆದರ್ಶ ಮಾತೆಯಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ.ವೈ.ಬಿ.ಕಡಕೋಳ ಗುರುಗಳು ತಮ್ಮ ಸಂಪಾದಕತ್ವದಲ್ಲಿ ಲೂಸಿ ಸಾಲ್ಡಾನಾ ಬದುಕು ಬರಹ ಮತ್ತು ಅಡುಗೆ ವೈವಿಧ್ಯ ಕೃತಿಗಳನ್ನು ಗುರುಮಾತೆಗೆ ಸಮರ್ಪಿಸುವ ಜೊತೆಗೆ ತಮ್ಮ ಮಕ್ಕಳ ಕಥಾಸಂಕಲನ ಸ್ವರ್ಗ ನರಕ, ಲೇಖನಗಳ ಸಂಕಲನ ತುಂಬಿದ ಹೊಳೆ, ಹಬ್ಬಗಳ ಮಹತ್ವ ಸಾರುವ ಹಬ್ಬಗಳ ಸಿರಿ ಕೃತಿಗಳನ್ನು ಇಂದು ಲೋಕಾರ್ಪಣೆಗೊಳಿಸಿದ್ದು ಎಲ್ಲರಲ್ಲಿಯೂ ಪುಸ್ತಕ ಓದುವ ಸಂಸ್ಕೃತಿ ಬೆಳೆಯಬೇಕು. ಶಿಕ್ಷಕರಾಗಿ ಸಾಹಿತ್ಯ ಕ್ಷೇತ್ರದಲ್ಲಿ ವೈ.ಬಿ.ಕಡಕೊಳ ಇನ್ನೂ ಹತ್ತು ಹಲವು ಕೃತಿಗಳನ್ನು ಹೊರತರುವಂತಾಗಲಿ” ಎಂದು ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.

ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಸವದತ್ತಿ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬಿಐಇಆರ್‌ಟಿಯಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳರ ಐದು ಕೃತಿಗಳ ಲೋಕಾರ್ಪಣೆ ಮತ್ತು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ಉದ್ಘಾಟನೆ ಶಿಕ್ಷಕ ರತ್ನ ಶ್ರಮಿಕ ರತ್ನ ಶಾಲಾ ಸಿರಿ ಪ್ರಶಸ್ತಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೈ.ಬಿ.ಕಡಕೋಳ ಸಂಪಾದಿತ ಲೂಸಿ ಸಾಲ್ಡಾನಾ ಬದುಕು ಬರಹ ಕೃತಿಯನ್ನು ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತಮಠದ ಶ್ರೀ ಕುಮಾರ ವಿರುಪಾಕ್ಷ ಸ್ವಾಮೀಜಿ, ಲೂಸಿ ಸಾಲ್ಡಾನಾರ ಅಡುಗೆ ವೈವಿಧ್ಯ ಸಂಪಾದಿತ ಕೃತಿಯನ್ನು ಧಾರವಾಡ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಿದ್ಯಾ ನಾಡಿಗೇರ, ಮಕ್ಕಳ ಕಥಾಸಂಕಲನ ಸ್ವರ್ಗ ನರಕವನ್ನು ಮಕ್ಕಳ ಸಾಹಿತಿ ಶಂಕರ ಹಲಗತ್ತಿ ಹಾಗೂ ಗುರು ತಿಗಡಿ, ಲೇಖನಗಳ ಸಂಗ್ರಹದ ಹಬ್ಬಗಳ ಸಿರಿ ಕೃತಿಯನ್ನು ಡಾ.ಗುರುಮೂರ್ತಿ ಯರಗಂಬಳಿಮಠ, ಲೇಖನಗಳ ಸಂಗ್ರಹ ಕೃತಿ ತುಂಬಿದ ಹೊಳೆಯನ್ನು ಡಾ.ರೇಣುಕಾ ಅಮಲಝರಿ ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಅಶೋಕ ಸಜ್ಜನ ಸಂಘದ ಧ್ಯೇಯೋದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ವಿದ್ಯಾ ನಾಡಿಗೇರ ಲೂಸಿ ಸಾಲ್ಡಾನಾ ಬದುಕು ಬರಹ ಮತ್ತು ಅಡುಗೆ ವೈವಿಧ್ಯ ಕೃತಿಯ ಕುರಿತು, ಡಾ.ಗುರುಮೂರ್ತಿ ಯರಗಂಬಳಿಮಠ ಹಬ್ಬಗಳ ಸಿರಿ ಕುರಿತು,ಡಾ.ರೇಣುಕಾ ಅಮಲಝರಿ ತುಂಬಿದ ಹೊಳೆ ಮತ್ತು ಸ್ವರ್ಗ ನರಕ ಕೃತಿಗಳ ಕುರಿತು ಮಾತನಾಡುತ್ತ ಲೂಸಿ ಸಾಲ್ಡಾನಾ ಗುರುಮಾತೆಯ ಬದುಕು ನಮಗೆಲ್ಲರಿಗೂ ಮಾದರಿ ಎಂದು ತಿಳಿಸಿದರು.

ತಮ್ಮ ಕೃತಿಗಳ ಕುರಿತು ಮಾತನಾಡಿದ ವೈ.ಬಿ.ಕಡಕೋಳ, “ಈ ಎಲ್ಲ ಕೃತಿಗಳ ಹಿಂದೆ ಬೆಂಗಳೂರಿನ ಎಸ್.ಎಲ್.ಎನ್. ಪಬ್ಲಿಕೇಷನ್ ಮಾಲೀಕರಾದ ಉಮೇಶ ನಾಗಮಂಗಲ ಅವರ ಶ್ರಮವಿದೆ.ಅವರು ನನ್ನ ಎಲ್ಲ ಕೃತಿಗಳನ್ನು ಮುದ್ರಣ ಮಾಡುವ ಜೊತೆಗೆ ಸಮಯೋಜಿತವಾಗಿ ಒದಗಿಸುತ್ತಿರುವರು ಅವರಿಗೆ ಮೊಟ್ಟ ಮೊದಲ ನನ್ನ ಕೃತಜ್ಞತೆಗಳನ್ನು ಅರ್ಪಿಸುವೆ.ಜೊತೆಗೆ ಪುಸ್ತಕ ಕೊಂಡು ಓದುವಂತಾಗಲಿ ಎಂದು ಸರಕಾರ ಆದೇಶ ನಮ್ಮಂತಹ ಲೇಖಕರಿಗೆ ಇನ್ನೂ ಹೆಚ್ಚು ಹೆಚ್ಚು ಕೃತಿಗಳನ್ನು ಪ್ರಕಟಿಸಲು ಉತ್ತೇಜನ ನೀಡಿದಂತಾಗಿದೆ.ಇಂದು ಈ ವೇದಿಕೆಯಲ್ಲಿ ನನ್ನ ಕೃತಿಗಳ ಲೋಕಾರ್ಪಣೆಗೊಳಿಸಲು ಲೂಸಿ ಸಾಲ್ಡಾನಾ ದತ್ತಿ ಸಂಸ್ಥೆ ಅವಕಾಶ ನೀಡಿದ್ದಕ್ಕಾಗಿ ಆಯೋಜಕರೆಲ್ಲರಿಗೂ ನನ್ನ ಕೃತಜ್ಞತೆಗಳನ್ನು ಅರ್ಪಿಸುವೆ”ಎಂದು ಕೃತಜ್ಞತಾ ನುಡಿಗಳನ್ನು ಹೇಳಿದರು.

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಜೊತೆಗೆ ಪುನೀತ ರಾಜಕುಮಾರ ಕುರಿತು ಬರೆದ ಶ್ರದ್ದಾಂಜಲಿ ಗೀತೆಯನ್ನು ಎಸ್.ಎಸ್.ಧನಿಗೊಂಡ ಹಾಡುವ ಮೂಲಕ ಅವರಿಗೆ ಸಮರ್ಪಿಸಲಾಯಿತು.ವೇದಿಕೆಯಲ್ಲಿ ಲೂಸಿ ಸಾಲ್ಡಾನಾ ದತ್ತಿ ಸಂಸ್ಥೆಯ ಅಧ್ಯಕ್ಷರಾದ ಭೀಮಪ್ಪ ಕಾಸಾಯಿ, ಎಲ್.ಐ.ಲಕ್ಕಮ್ಮನವರ, ಚಂದ್ರು ತಿಗಡಿ, ಅಶೋಕ ಸಜ್ಜನ, ಜಿ.ಟಿ.ಶಿರೋಳ, ಬಾಬಾಜಾನ್ ಮುಲ್ಲಾ,ಸವದತ್ತಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಪೆಟ್ಲೂರ, ಸವದತ್ತಿ ತಾಲೂಕಿನ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಆನಂದಕುಮಾರ ಮೂಗಬಸವ, ಬೈಲಹೊಂಗಲ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಕುಡಸೋಮನ್ನರ,ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ,ಅಜಿತಸಿಂಗ ರಜಪೂತ,ಅಕ್ಬರಲಿ ಸೋಲಾಪುರ,ನಂದಕುಮಾರ ದ್ಯಾಂಪುರ,ನಾರಾಯಣ ಭಜಂತ್ರಿ,ಭಾರತಿ ಸಾಧನಿ,ವ್ಹಿ.ಎನ್.ಕೀರ್ತಿವತಿ,ಶರಣು ಪೂಜೇರ,ಶಂಕರಪ್ಪ ಘಟ್ಟಿ,ಕೆ.ಎಂ.ಮುನವಳ್ಳಿ,ಶಿವಲೀಲಾ ಪೂಜಾರ,ಸಂಗಮೇಶ ಖನ್ನಿನಾಯ್ಕರ,ಪ್ರಕಾಶ ಹೆಮ್ಮರಡಿ, ಎಸ್.ವೈ.ಉಪ್ಪಾರ, ಎಂ.ಬಿ.ಕಮ್ಮಾರ, ಎಫ್.ಜಿ.ನವಲಗುಂದ, ಸಿ.ವ್ಹಿ.ಬಾರ್ಕಿ,ರಾಜು ಭಜಂತ್ರಿ, ಮಲ್ಲಿಕಾರ್ಜುನ ಚರಂತಿಮಠ, ಡಾ.ನಾಗೇಂದ್ರ, ಚಲವಾದಿ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಿಂದ ಶಿಕ್ಷಕ ರತ್ನ, ಶ್ರಮಿಕ ರತ್ನ,ಶಾಲಾ ಸಿರಿ ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್.ಐ.ಲಕ್ಕಮ್ಮನವರ ಸ್ವಾಗತಿಸಿದರು. ರುದ್ರೇಶ ಕುರ್ಲಿ ನಿರೂಪಿಸಿದರು. ಆರ್.ಎಸ್.ಹಿರೇಗೌಡರ ವಂದಿಸಿದರು.

- Advertisement -
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!