ಜಗತ್ತನ್ನು ಬದಲಿಸುವ ಶಕ್ತಿಶಾಲಿ ಆಯುಧ ಶಿಕ್ಷಕ ಮಾತ್ರ

Must Read

ಸಿಂದಗಿ: ತಾಲೂಕಿನ ಮಾಡಬಾಳ ಗ್ರಾಮದ ಮಾಜಿ ಸೈನಿಕ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಶಿಕ್ಷಕರ ದಿನಾಚಾರಣೆ ಸಮಾರಂಭವು ಅದ್ಧೂರಿಯಾಗಿ ನೇರವೇರಿತು.

ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆಯೊಂದಿಗೆ ಶಿಕ್ಷಕರನ್ನು ವೇದಿಕೆಗೆ ಕರೆತರಲಾಯಿತು. ಗ್ರಾಮ ಪಂಚಾಯತ ಸದಸ್ಯರಾದ ಅರ್ಜುನ ಹಾಗೂ ಸಂತೋಷ ಬಗಲಿಯವರು ಡಾ|| ಸರ್ವಪಲ್ಲಿ ರಾಧಾಕೃಷ್ಣರ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕುವದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಾಯಿತು.

ನಿವೃತ್ತ ಸೈನಿಕರಾದ  ಜಾಹಿರಪಟೇಲ ಹಾಗೂ ಕಲ್ಲಪ್ಪ ಹೂಗಾರರವರು ಕನ್ನಡ ಹಾಗೂ ಉರ್ದು ಮಾಧ್ಯಮದ ಶಿಕ್ಷಕ ಶಿಕ್ಷಕಿಯರನ್ನು ಶಾಲು, ಹೂವಿನ ಹಾರದಿಂದ ಸನ್ಮಾನಿಸಿ ಗೌರವಿಸಲಾಯಿತು. ರಾಜು ಮೂಲಿಮನಿ ಸಿಹಿ ಹಂಚಿ ಶುಭ ಕೋರಿದರು. ನಿವೃತ್ತ ಸೈನಿಕರಿಬ್ಬರೂ ಮಾತನಾಡಿ “ಜಗತ್ತನ್ನು ಬದಲಿಸುವ ಶಕ್ತಿಶಾಲಿ ಆಯುಧ ಶಿಕ್ಷಕರು ಮಾತ್ರ” ಎಂದರು 

ಸಿದ್ದು ಅಂಬಳನೂರ ಹಾಗೂ ವಿಶಾಲ ನಾಯ್ಕೋಡಿ ಮಾತನಾಡಿ, “ಕಗ್ಗಲ್ಲಿನಂತಿರುವ ಮಕ್ಕಳನ್ನು ತಿದ್ದಿತೀಡಿ ಉತ್ತಮ ನಾಗರಿಕರನ್ನಾಗಿ ಮಾಡುವ ಶಕ್ತಿ ಶಿಕ್ಷಕರು. ಅವರನ್ನು ಎಲ್ಲರೂ ಗೌರವಿಸಬೇಕು. ಎಂದರು ಸನ್ಮಾನಗೊಂಡ ಶಿಕ್ಷಕ ಹಿರೇಮಠರವರು ಮಾತನಾಡಿ “ಸಮಾಜ ನಮ್ಮನ್ನು ಗುರುತಿಸಿ ಗೌರವಿಸುವದರೊಂದಿಗೆ ನಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ರವಿ ಬಗಲಿ, ಅಕ್ರಂ ಬಿರಾದಾರ, ಅಲ್ಲು ಬಿರಾದಾರ, ಭೀರಪ್ಪ ಬಗಲಿ, ಸಿದ್ದಪ್ಪ ಪೂಜಾರಿ, ರಫೀಕ ಆಲಗೂರ, ಅಮೀರ ಬಿರಾದಾರ, ಬಾಬು ಹಡಪದ, ಲಕ್ಷ್ಮೀಕಾಂತ ನಾಯ್ಕೋಡಿ, ಗೊಲ್ಲಾಳ ಆಳೂರ, ಸಿದ್ದು ಹಲಗಿ, ಅಬ್ಬಾಸಲಿ ಬೂದಿಹಾಳ, ಜಹೀರ ಮಿರ್ಜಿ, ಹುಸೇನಿ ಬಿಜಾಪೂರ, ಮಾಜಿ ಸೈನಿಕರ ಬಳಗ ಗ್ರಾಮಸ್ಥರು ಶಾಲಾ ಶಿಕ್ಷಕ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಬಾಗವಹಿಸಿದ್ದರು. ಎ.ಎಸ್.ಭೀಮಾಶಂಕರ ನಿರೂಪಿಸಿ ವಂದಿಸಿದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group