ಪ್ರಾಮಾಣಿಕತೆಯಿಂದ ಮಾಡಿದ ಕರ್ತವ್ಯಕ್ಕೆ ಉತ್ತಮ ಪ್ರತಿಫಲ ಇದ್ದೇ ಇರುತ್ತದೆ – ಶಿವರಾಮಯ್ಯ

Must Read

ಬೆಳ್ಳಿ ರಥ ಎಳೆದ ಮಹಿಳೆಯರು; ಇದೇ ಈ ಜಾತ್ರೆಯ ವಿಶೇಷ – ಡಾ.ಪ್ರಭು ಸಾರಂಗದೇವ

ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ...

ಹಾನಿಯಾದ ದ್ರಾಕ್ಷಿ ಬೆಳೆಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಿದ ಕಡಾಡಿ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಮಂಗಸೂಳಿ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ...

ನಮ್ಮ ಸಾಧನೆಗಳನ್ನು ಪರಿಗಣಿಸಿ ಮತ ನೀಡಿ – ಸತೀಶ ಜಾರಕಿಹೊಳಿ

ಮೂಡಲಗಿ - ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಸ್ತೆಗಳು, ಕೃಷಿ ಹೊಂಡ ಮುಂತಾದ ಜನಪ್ರಿಯ ಕಾರ್ಯಗಳನ್ನು ಮಾಡಿದ್ದಾರೆ ಅವುಗಳನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಕೆಪಿಸಿಸಿ...

ಬೆಂಗಳೂರುಃ “ ನಮ್ಮ ದಿನನಿತ್ಯದ ಬದುಕಿನಲ್ಲಿ ಯಾವುದೇ ಕಾರ್ಯದಲ್ಲಿರಲಿ ಪ್ರಾಮಾಣಿಕತೆ.ಶ್ರದ್ಧೆ.ಕರ್ತವ್ಯದಲ್ಲಿ ನಿಷ್ಠೆ ಇದ್ದಲ್ಲಿ ನಮಗೆ ಉತ್ತಮ ಪ್ರತಿಫಲ ಇದ್ದೇ ಇರುತ್ತದೆ.ವಿಕಲಚೇತನ ಮಕ್ಕಳ ಶಿಕ್ಷಣದಲ್ಲಿ ತಮ್ಮ ಪಾತ್ರ ಮಹತ್ವದ್ದಾಗಿದೆ ಈ ದಿಸೆಯಲ್ಲಿ ತಾವೆಲ್ಲ ಉತ್ತಮ ಕಾರ್ಯ ಮಾಡುತ್ತಿರುವಿರಿ.ರಾಜ್ಯ ಮಟ್ಟದ ಈ ತರಬೇತಿಯ ಎಲ್ಲ ಸಂಪನ್ಮೂಲ ವ್ಯಕ್ತಿಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಉತ್ತಮ ರೀತಿಯಲ್ಲಿ ತರಬೇತಿ ಯನ್ನು ನೀಡುವ ಮೂಲಕ ಈ ಕಾರ್ಯಾಗಾರದ ಫಲಶ್ರುತಿಯನ್ನು ನೀಡಿರಿ.ಇಂದು ತಾವು ನೀಡಿದ ಬಿ.ಐ.ಇ.ಆರ್.ಟಿ ಗಳ ಸಮಸ್ಯೆಗಳ ಕುರಿತು ಮನವಿಯನ್ನು ಇಲಾಖೆಯ ಹಂತದಲ್ಲಿ ಚರ್ಚಿಸುವೆನು.ಜೊತೆಗೆ ಅದರ ಪರಿಹಾರದ ಕ್ರಮವನ್ನು ಕೈಗೊಳ್ಳುವೆನು” ಎಂದು ರಾಜ್ಯ ಯೋಜನಾ ನಿರ್ದೇಶಕರ ಕಛೇರಿಯ ಸಹನಿರ್ದೇಶಕರಾದ ಶಿವರಾಮಯ್ಯ ತಿಳಿಸಿದರು.

ಅವರು ಬೆಂಗಳೂರಿನ ಇಂಡಿಯನ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ದಲ್ಲಿ ಜರುಗಿದ ೩ ದಿನಗಳ ಸಮನ್ವಯ ಶಿಕ್ಷಣ ಮಧ್ಯವರ್ತನೆಯಡಿಯಲ್ಲಿ ಜಿಲ್ಲಾ ಹಂತದಲ್ಲಿ ಬಿ.ಐ.ಇ.ಆರ್.ಟಿ ಗಳಿಗೆ ಸಾಮರ್ಥ್ಯಾಧಾರಿತ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜನಾಧಿಕಾರಿ ಲಕ್ಷ್ಮೀ ಲಾಳಿ ಮಾತನಾಡಿ, “ರಾಜ್ಯದ ಎಲ್ಲ ಜಿಲ್ಲೆಗಳಿಂದ ಇಲ್ಲಿ ಬಿ.ಐ.ಇ.ಆರ್.ಟಿಗಳು ತರಬೇತಿಗೆ ಬಂದು ತರಬೇತಿ ಪಡೆದಿರುವಿರಿ.ತಮ್ಮ ಬೇಡಿಕೆಗಳಿಗೆ ಸೂಕ್ತವಾದ ಭರವಸೆಯನ್ನು ಇಲಾಖಾ ಅಧಿಕಾರಿಗಳು ನೀಡಿದ್ದು.ತರಬೇತಿ ಅನುಷ್ಠಾನದಲ್ಲಿ ನಿಮ್ಮ ಜವಾಬ್ದಾರಿ ಮಹತ್ವದ್ದಾಗಿದೆ.ಉತ್ತಮ ರೀತಿಯಲ್ಲಿ ಈ ತರಬೇತಿಯನ್ನು ಜಿಲ್ಲಾ ಹಂತದಲ್ಲಿ ಅನುಷ್ಠಾನಗೊಳಿಸಿರಿ.ಇಲಾಖೆ ನಿರಂತರವಾಗಿ ನಿಮ್ಮೊಂದಿಗೆ ಇರುತ್ತದೆ.ತರಬೇತಿಯ ಎಲ್ಲ ಶಿಬಿರಾರ್ಥಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡ ವ್ಯಾಟ್ಸಪ್ ಗ್ರುಪ್ ರಚಿಸಲಾಗಿದ್ದು ಅದರಲ್ಲಿ ತಮ್ಮ ಯಾವುದೇ ಸಲಹೆ ಮಾಹಿತಿಯನ್ನು ರಾಜ್ಯ ಸಂಪನ್ಮೂಲ ವ್ಯಕ್ತಿಗಳೊಡನೆ ಚರ್ಚಿಸುವ ಮೂಲಕ ಮುಂಬರುವ ದಿನಗಳಲ್ಲಿ ಜಿಲ್ಲಾ ಹಂತದ ತರಬೇತಿ ಯಶಸ್ವಿಗೊಳಿಸಿರಿ”ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಬಿ.ಐ.ಇ.ಆರ್.ಟಿಗಳ ಪ್ರಮುಖ ಬೇಡಿಕೆಗಳ ಕುರಿತು ಮನವಿಯನ್ನು ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಬಿ.ಐ.ಇ.ಆರ್.ಟಿಗಳ ಸಂಘದ ಅಧ್ಯಕ್ಷರಾದ ಎಸ್.ಬಿ.ಗೌಡ ಪ್ರಧಾನ ಕಾರ್ಯದರ್ಶಿಗಳಾದ ಗದಗೇರಿ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಬಿರಾರ್ಥಿಗಳು ವಿಶೇಷ ಬಿ.ಈಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ತರಬೇತಿಯನ್ನು ಕುರಿತಂತೆ ಅನಿಸಿಕೆಯನ್ನು ವ್ಯಕ್ತಪಡಿಸಿದ ಶಿಬಿರಾರ್ಥಿಗಳು ಲಕ್ಷ್ಮೀ ಲಾಳಿಯವರ ತರಬೇತಿ ಸಂಘಟನಾ ಚಾತುರ್ಯತೆ.ಅವರ ಸಮಯಪ್ರಜ್ಞೆ.ಎಲ್ಲರಿಗೂ ಹಿರಿಯ ಸಹೋದರಿಯಂತೆ ಸ್ಪಂಧಿಸಿದ ರೀತಿ.ಎಲ್ಲ ಸಂಪನ್ಮೂಲ ವ್ಯಕ್ತಿಗಳು ತಮ್ಮ ತಮ್ಮ ವಿಷಯ ಮಂಡನೆಯನ್ನು ನೀಡಿದ್ದನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ರತ್ನಮ್ಮ ಅವರಿಂದ ಪ್ರಾರ್ಥನೆ ಜರುಗಿತು.ಕೀರ್ತಿವತಿ ಕಾರ್ಯಕ್ರಮ ನಿರೂಪಿಸಿದರು. ಕೆ.ಎಂ.ಗದಗೇರಿ ಸ್ವಾಗತಿಸಿದರು.ಶಂಕರ ಕಮ್ಮಾರ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬೆಳ್ಳಿ ರಥ ಎಳೆದ ಮಹಿಳೆಯರು; ಇದೇ ಈ ಜಾತ್ರೆಯ ವಿಶೇಷ – ಡಾ.ಪ್ರಭು ಸಾರಂಗದೇವ

ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ...
- Advertisement -

More Articles Like This

- Advertisement -
close
error: Content is protected !!